ETV Bharat / state

ಇನ್ನೆರಡು ದಿನ ತಾಜ್ ವಿವಾಂತ ಹೋಟೆಲ್​ನಲ್ಲಿ ಶಾಸಕರ ವಾಸ್ತವ್ಯ - undefined

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಬೈಲಹೊಂಗಲದ ಮಹಾಂತೇಶ್ ಕೌಜಲಗಿ, ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ಆನೇಕಲ್ ಶಿವಣ್ಣ, ಅಫ್ಜಲಪುರ ಶಾಸಕ ಎಂ.ವೈ. ಪಾಟೀಲ್ ಮತ್ತಿತರರು ಯಶವಂತಪುರ ಸಮೀಪದ ತಾಜ್ ವಿವಾಂತ ಖಾಸಗಿ ಹೋಟೆಲ್ ತಲುಪಿದ್ದು, ಇನ್ನೆರಡು ದಿನ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ತಾಜ್ ವಿವಾಂತ ಹೋಟೆಲ್
author img

By

Published : Jul 13, 2019, 5:47 AM IST

ಬೆಂಗಳೂರು: ಕಾಂಗ್ರೆಸ್ ಶಾಸಕರು ಯಶವಂತಪುರ ಸಮೀಪದ ತಾಜ್ ವಿವಾಂತ ಖಾಸಗಿ ಹೋಟೆಲ್ ತಲುಪಿದ್ದು, ಇನ್ನೆರಡು ದಿನ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಇನ್ನು ಬೆಂಗಳೂರು ನಗರದ ಒಳಭಾಗದಲ್ಲಿ ಈ ಹೋಟೆಲ್ ಇರುವ ಕಾರಣಕ್ಕೆ ಎಲ್ಲಾ ಶಾಸಕರು ತಮ್ಮದೇ ಖಾಸಗಿ ವಾಹನದಲ್ಲಿ ತೆರಳಿದ್ದಾರೆ. ಸೋಮವಾರ ಇವರನ್ನ ಒಟ್ಟಾಗಿಯೇ ವಾಹನದಲ್ಲಿ ವಾಪಸ್ ವಿಧಾನಸೌಧಕ್ಕೆ ಕರೆದುಕೊಂಡು ಬರುವ ಸಾಧ್ಯತೆ ಇದೆ. ಸೋಮವಾರದವರೆಗೆ ಕೈ ಶಾಸಕರಿಗೆ ಇಲ್ಲಿಯೇ ವಾಸ್ತವ್ಯ ವ್ಯವಸ್ತೆ ಮಾಡಲಾಗಿದ್ದು, ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ಆಪರೇಷನ್ ಕಮಲಕ್ಕೆ ತುತ್ತಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹೋಟೆಲ್​​​​ಗೆ ಆಗಮಿಸಲು ನಿರಾಕರಿಸಿದರು. ತಾವು ಯಾವುದೇ ಹೋಟೆಲ್ ಅಥವಾ ರೆಸಾರ್ಟ್​ಗೆ ಬರುವುದಿಲ್ಲ. ಅಗತ್ಯ ಬಂದಾಗ ಪಕ್ಷದ ಪರ ಮತ ಚಲಾಯಿಸಲು ಬರುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೋಟೆಲ್​​​ಗೆ ಆಗಮಿಸಿ ಕೆಲಕಾಲ ಇದ್ದು ನಂತರ ವಾಪಸ್ ತೆರಳಿದ್ದಾರೆ.

ಸಚಿವ ರಾಜಶೇಖರ್ ಪಾಟೀಲ್, ಶಾಸಕಿ‌ ವಿನಿಶಾ ನಿರೋ ಅವರೊಂದಿಗೆ ಆಗಮಿಸಿದ್ದರು.ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಬೈಲಹೊಂಗಲದ ಮಹಾಂತೇಶ್ ಕೌಜಲಗಿ, ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ಆನೇಕಲ್ ಶಿವಣ್ಣ, ಅಫ್ಜಲಪುರ ಶಾಸಕ ಎಂ.ವೈ. ಪಾಟೀಲ್ ಮತ್ತಿತರರು ಹೋಟೆಲ್ ತಲುಪಿದ್ದಾರೆ.

Intro:newsBody:ತಾಜ್ ವಿವಾಂತ ಹೋಟೆಲ್ ತಲುಪಿದ ಶಾಸಕರು; ಇನ್ನೆರಡು ದಿನ ಅಲ್ಲೇ ವಾಸ್ತವ್ಯ

ಬೆಂಗಳೂರು: ಕಾಂಗ್ರೆಸ್ ಶಾಸಕರು ಈಗಾಗಲೇ ಯಶವಂತಪುರ ಸಮೀಪದ ತಾಜ್ ವಿವಾಂತ ಖಾಸಗಿ ಹೋಟೆಲ್ ತಲುಪಿದ್ದು ಇನ್ನೆರಡು ದಿನ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕ ವಿ.ಮುನಿಯಪ್ಪ, ತನ್ವೀರ್ ಸೇಠ್ ಸೇರಿದಂತೆ ಹಲವರು ಒಟ್ಟಾಗಿ ಆಗಮಿಸಿದರು. ಬೆಂಗಳೂರು ನಗರದ ಒಳಭಾಗದಲ್ಲಿ ಹೋಟೆಲ್ ಇರುವ ಕಾರಣಕ್ಕೆ ಎಲ್ಲಾ ಶಾಸಕರು ತಮ್ಮ ತಮ್ಮ ಖಾಸಗಿ ವಾಹನದಲ್ಲಿ ತೆರಳಿದ್ದು ಗಮನಕ್ಕೆ ಬಂತು. ಜೆಡಿಎಸ್ ಹಾಗೂ ಬಿಜೆಪಿ ಶಾಸಕರ ಮಾದರಿ ಇವರನ್ನು ಬಸ್ಸುಗಳಲ್ಲಿ ಕರೆದೊಯ್ಯುವ ಕಾರ್ಯ ಆಗಿಲ್ಲ. ಆದರೆ ಸೋಮವಾರ ಇವರನ್ನ ಒಟ್ಟಾಗಿಯೇ ವಾಹನದಲ್ಲಿ ವಾಪಸ್ ವಿಧಾನಸೌಧಕ್ಕೆ ಕರೆದುಕೊಂಡು ಬರುವ ಸಾಧ್ಯತೆ ಇದೆ.
ಸೋಮವಾರದವರೆಗೆ ಕೈ ಶಾಸಕರಿಗೆ ಇಲ್ಲಿಯೇ ವಾಸ್ತವ್ಯ ಹೂಡುವ ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ಆಪರೇಷನ್ ಕಮಲಕ್ಕೆ ತುತ್ತಾಗದಂತೆ ರಕ್ಷಣೆ ನೀಡಲಾಗುತ್ತಿದೆ. ಬುಧವಾರ ವಿಶ್ವಾಸಮತಯಾಚನೆಗೆ ಸ್ಪೀಕರ್ ರಮೇಶ್ ಕುಮಾರ್ ನೀಡುವ ಸಾಧ್ಯತೆ ಇದೆ.
ಒಬ್ಬರು ಬರಲಿಲ್ಲ ಇನ್ನೊಬ್ಬರು ತೆರಳಿದರು
ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹೋಟೆಲ್ಲಿಗೆ ಆಗಮಿಸಲು ನಿರಾಕರಿಸಿದರು. ತಾವು ಯಾವುದೇ ಹೋಟೆಲ್ ಅಥವಾ ರೆಸಾರ್ಟ್ಗೆ ಬರುವುದಿಲ್ಲ. ಅಗತ್ಯ ಬಂದಾಗ ಪಕ್ಷದ ಪರ ಮತ ಚಲಾಯಿಸಲು ಬರುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೋಟೆಲಿಗೆ ಆಗಮಿಸಿ ಕೆಲಕಾಲ ಇದ್ದು ನಂತರ ವಾಪಸ್ ತೆರಳಿದ್ದಾರೆ.
ಸಚಿವ ರಾಜಶೇಖರ್ ಪಾಟೀಲ್, ಶಾಸಕಿ‌ ವಿನಿಶಾ ನಿರೋ ಅವರೊಂದಿಗೆ ಆಗಮಿಸಿದ್ದರು.
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಬೈಲಹೊಂಗಲದ ಮಹಾಂತೇಶ್ ಕೌಜಲಗಿ, ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ಆನೇಕಲ್ ಶಿವಣ್ಣ, ಅಫ್ಜಲಪುರ ಶಾಸಕ ಎಂ.ವೈ.ಪಾಟೀಲ್ ಮತ್ತಿತರರು ಈಗಾಗಲೇ ಹೋಟೆಲ್ ತಲುಪಿದ್ದಾರೆ. ಇನ್ನಷ್ಟು ಮಂದಿ ಹೋಟೆಲ್ ತಲುಪುತ್ತಲೇ ಇದು ಇಂದು ತಡರಾತ್ರಿ ವೇಳೆಗೆ ಎಲ್ಲಾ ಶಾಸಕರು ಹೋಟೆಲ್ ಒಳಗೆ ಇರುವ ಸಾಧ್ಯತೆ ಹೆಚ್ಚಿದೆ.Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.