ಬೆಂಗಳೂರು: ಸದನದಲ್ಲಿ ಕೋಲಾರದ ಶಾಸಕರಾದ ಶ್ರೀನಿವಾಸ್‌ಗೌಡರು ಯಲಹಂಕ ಶಾಸಕ ವಿಶ್ವನಾಥ್ ಮತ್ತು ಡಾ. ಅಶ್ವತ್ ನಾರಾಯಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದು,ಈ ಆರೋಪಕ್ಕೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಪ್ರತಿಕ್ರಿಯೆ ಸ್ಪಷ್ಟೀಕರಣ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್‌ಗೌಡರು ನಮ್ಮ ಮೇಲೆ ಗಂಭೀರ ಆರೋಪ ಮಾಡಿದ್ದು, ಶಾಸಕರು ಇಲ್ಲೇ ಇದ್ದಾರೆ ಎಂದು ಆಡಳಿತ ಪಕ್ಷದಿಂದ ಸ್ಪಷ್ಟೀಕರಣ ನೀಡಬೇಕು ಎಂದರು. ಆದರೆ, ಕಾರ್ಯ ಕಲಾಪ ಡೈವರ್ಟ್ ಆಗುತ್ತೆ ಎಂದು ನಾವು ಏನನ್ನೂ ಮಾತನಾಡಲಿಲ್ಲ. ಅವರು ಈ ಹಿಂದೆನೇ ನಮ್ಮ ಮೇಲೆ ಆರೋಪವನ್ನು ಮಾಡಿದ್ರು. ಈ ಬಗ್ಗೆ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಕರೆದಾಗ ನಾನು ಸುಳ್ಳು ಹೇಳಿಕೆ ನೀಡಿದ್ದೇನೆ ಎಂದು ಎಸಿಬಿ ಮುಂದೇನೆ ತಪ್ಪನ್ನು ಒಪ್ಪಿಕೊಂಡಿದ್ದರು. ಸರ್ಕಾರ ಗೊಂದಲದಲ್ಲಿ ಇರುವುದರಿಂದ ಆ ಹೇಳಿಕೆಗಳ ಮುಖಾಂತರ ಮೈಂಡ್ ಡೈವೋರ್ಟ್ ಮಾಡಲು ಮಾತನಾಡಿದ್ದೆ ಎಂದು ಕೇಸ್ ಕ್ಲೋಸ್ ಮಾಡಿಕೊಂಡು ಬಂದಿದ್ದಾರೆ ಎಂದರು.
ಅಲ್ಲದೇ ಅವರ ತಪ್ಪೊಪ್ಪಿಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನನಗೆ ಯಾರೂ ದುಡ್ಡು ಕೊಡಲು ಬಂದಿಲ್ಲ. ನಾನು ಸುಮ್ನೆ ಹೇಳಿದೆ ಎಂಬಂತಹ ಹೇಳಿಕೆಯನ್ನು ನೀಡಿ ಇವತ್ತು ಗೌರವಾನ್ವಿತ ಸದಸ್ಯರು ಗಂಭೀರವಾದ ಚರ್ಚೆ ನಡೆಯುವಾಗ ದಿಕ್ಕು ತಪ್ಪಿಸಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ನೀಡುತ್ತೇವೆ ಎಂದು ಅವರು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯನ್ನು ಪ್ರಕಟ ಮಾಡಿದ್ದ ಪತ್ರಿಕೆ ಪ್ರತಿಯನ್ನೂ ಮಾಧ್ಯಮಗಳಿಗೆ ಪ್ರದರ್ಶಿಸಿದರು.
ಬಳಿಕ ಮಾತನಾಡಿದ ಅವರಿಗೆ ವಯಸ್ಸು ಆಗಿದೆ. ಹೀಗಾಗಿ ಅರುಳೋ ಮರುಳೋ ಎನ್ನುವಂತಾಗಿದೆ. ಅವರ ಹೇಳಿಕೆ ಕರ್ನಾಟಕದ ಜನತೆ ದಿಕ್ಕು ತಪ್ಪಿಸೋದು ಬೇಡ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ಕಾರ್ಯಕಲಾಪ ಡೈವರ್ಟ್ ಆಗುತ್ತೆ ಎನ್ನುವ ಕಾರಣಕ್ಕೆ ಮಾತಾಡಿಲ್ಲ ಎಂದರು.