ETV Bharat / state

ಹುಳಿಮಾವು ಕೆರೆ ದುರಂತ: 4 ದಿನಗಳ ಬಳಿಕ ಭೇಟಿ ನೀಡಿದ ಸ್ಥಳೀಯ ಶಾಸಕ - MLA Shatheesh Reddy visit Hulimavu lake Tragedy Place

ಹುಳಿಮಾವು ಕೆರೆ ದುರಂತ ಸಂಭವಿಸಿ ನಾಲ್ಕು ದಿನಗಳ ಬಳಿಕ ಸ್ಥಳೀಯ ಶಾಸಕ ಸತೀಶ್​ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

MLA Shatheesh Reddy visit Hulimavu lake Tragedy Place
ಶಾಸಕ ಸತೀಶ್​ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
author img

By

Published : Nov 28, 2019, 9:35 PM IST

Updated : Nov 28, 2019, 11:43 PM IST

ಬೆಂಗಳೂರು: ಉದ್ದೇಶಪೂರ್ವಕವಾಗಿಯೇ ಬೇಜವಾಬ್ದಾರಿಯಿಂದ ಕೆರೆ ಕಟ್ಟೆಯನ್ನು ಒಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹುಳಿಮಾವು ಕೆರೆ ದುರಂತದ ಬಗ್ಗೆ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಸತೀಶ್​ ರೆಡ್ಡಿ

ಘಟನೆ ನಡೆದು ನಾಲ್ಕು ದಿನಗಳ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೆರೆ ಪಕ್ಕದಲ್ಲೇ ಇರುವ ವಾಲ್ ಮಾರ್ಟ್ ಬಹುಮಹಡಿ ಕಟ್ಟಡದ ಒಳಚರಂಡಿ ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ಈ ಹಿನ್ನೆಲೆ ಸಮಸ್ಯೆ ಪರಿಹರಿಸುವಂತೆ ಅವರು ಬೆಂಗಳೂರು ಜಲ ಮಂಡಳಿಗೆ ಮನವಿ ಮಾಡಿದ್ದರು. ಆದ್ದರಿಂದ ವಾಲ್ ಮಾರ್ಟ್ ಅಪಾರ್ಟ್​ಮೆಂಟ್​ ಹಿತ ಕಾಪಾಡಲು, ಬಿಬಿಎಂಪಿಯ ಕೆರೆ ಎಂಜಿನಿಯರ್ ಕೆರೆ ಕಟ್ಟೆ ಒಡೆಯುವಂತೆ ಹೋಂಗಾರ್ಡ್​ಗೆ ಸೂಚಿಸುವ ಮೂಲಕ ಬೇಜವಾಬ್ದಾರಿತನ ತೋರಿಸಿದ್ದಾರೆ. ಇದರಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ದೂರಿದರು. ಅಲ್ಲದೆ ಘಟನೆಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳೊವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.​

ಇಂತಹ ದುರ್ಘಟನೆ ಸಂಭವಿಸಬಾರದಿತ್ತು. ಘಟನೆಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಯಾವುದೇ ಜೀವ ಹಾನಿ ಆಗದೆ ಇರುವುದು ದೇವರ ಕೃಪೆ. ಕೆರೆ ಅಭಿವೃದ್ಧಿಗೆ 6ರಿಂದ 8 ಕೋಟಿ ಅನುದಾನ ಇಟ್ಟಿದ್ವಿ. ಇನ್ನೇನು ಕಾಮಗಾರಿ ಶುರುವಾಗಬೇಕಿತ್ತು. ಅಷ್ಟರಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ನಷ್ಟ ಸಂಭವಿಸಿದವರಿಗೆ ಎಲ್ಲಾ ರೀತಿಯ ನೆರವು ನೀಡುವಂತ ಕಾರ್ಯಗಳು ನಡೆದಿವೆ. ಈಗಾಗಲೇ ಪಾಲಿಕೆಯಿಂದ 50 ಸಾವಿರ ರೂ. ನೀಡಲಾಗಿದೆ ಎಂದು ತಿಳಿಸಿದರು.

Intro:mla sathish reddy

Body:hulimavu

Conclusion:video attached
Last Updated : Nov 28, 2019, 11:43 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.