ETV Bharat / state

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯಬೇಕು : ಶಾಸಕ ರವಿ ಸುಬ್ರಹ್ಮಣ್ಯ - ravisubramanya talked on ganeshothsava

ಬಿಜೆಪಿ ಧಾರ್ಮಿಕ ಭಾವನೆಗೆ ಬೆಲೆ ಕೊಡಲಿದೆ ಹಾಗೂ ರಾಜ್ಯ ಸರ್ಕಾರ ಕೂಡ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಸ್ಪಂದಿಸಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿಗೆ ಕೊಡಲಿದೆ ಎಂದು ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ಹೇಳಿದರು.

KN_BNG_03_RAVISUBRAMANYA_BYTE_SCRIPT_7201951
ಶಾಸಕ ರವಿಸುಬ್ರಹ್ಮಣ್ಯ
author img

By

Published : Aug 27, 2022, 3:58 PM IST

ಬೆಂಗಳೂರು: ಈದ್ಗಾ ಮೈದಾನ ಸರ್ಕಾರಿ ಜಮೀನು ಆಗಿರುವುದರಿಂದ ಗಣೇಶೋತ್ಸವ ನಡೆಯಬೇಕು ಎಂಬ ಒತ್ತಾಸೆ ಇದೆ ಎಂದು ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾಡಿನ ಜನತೆಗೆ ಮುಂಚಿತವಾಗಿ ಗಣೇಶೋತ್ಸವ ಹಾರ್ದಿಕ ಶುಭಾಶಯ. ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತೋ, ಇಲ್ವಾ ಅನ್ನೋ ಜಿಜ್ಞಾಸೆ ಇತ್ತು. ಅದು ಸರ್ಕಾರದ ಜಮೀನು ಆಗಿರೋದ್ರಿಂದ ನಾಗರಿಕರ ಒತ್ತಾಸೆ ಮೇರೆಗೆ ಗಣೇಶೋತ್ಸವ ನಡೆಯಬೇಕು ಅನ್ನೋ ಒತ್ತಾಸೆ ಇದೆ. ಬಿಜೆಪಿ ಧಾರ್ಮಿಕ ಭಾವನೆಗೆ ಬೆಲೆ ಕೊಡಲಿದೆ. ಸರ್ಕಾರ ಕೂಡ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಸ್ಪಂದಿಸಿ ಆಚರಣೆಗೆ ಅನುಮತಿಗೆ ಕೊಡಲಿದೆ. ನಾವೂ ಕೂಡ ಶ್ರದ್ಧಾ ಭಕ್ತಿಗೆ ಹೆಚ್ಚು ಬೆಂಬಲ ಕೊಡ್ತೀವಿ ಎಂದರು.

ಶಾಸಕ ರವಿಸುಬ್ರಹ್ಮಣ್ಯ

ಹುಬ್ಬಳ್ಳಿಯಲ್ಲಿ ಕೂಡ ಗಣೇಶೋತ್ಸವ ಆಚರಣೆಗೆ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಸಮಿತಿ ಕೂಡ ಒಪ್ಪಿಗೆ ಕೊಡುತ್ತೆ ಅಂತ ಭಾವಿಸಿದ್ದೇವೆ. ತಿಲಕರು ಕೂಡ ದೇಶದ ಒಗ್ಗೂಡುವಿಕೆಗೆ ಗಣೇಶ ಕೂರಿಸಿದ್ರು. ಇಂದು ಯಾವುದೋ ಒಂದು ಮತೀಯರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಒಂದು ಕಾಲದಲ್ಲಿ ದೇಶವನ್ನು ಆಳುತ್ತಿದ್ದ ಕಾಂಗ್ರೆಸ್, ಎರಡು ರಾಜ್ಯದಲ್ಲಿ ಮಾತ್ರ ಆಡಳಿತ ಮಾಡುವ ಸ್ಥಿತಿಗೆ ಬಂದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಅಂತ ಘೋಷಣೆ ಮಾಡಿದ್ರು. ಅದರಂತೆ ಇಂದು ಕಾಂಗ್ರೆಸ್ ನೆಲ ಕಚ್ಚುತ್ತಿದೆ ಎಂದು ಹೇಳಿದರು.

ನಿನ್ನೆಯಷ್ಟೇ ಜಮ್ಮು ಕಾಶ್ಮೀರದ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಅವರು ಕಾಂಗ್ರೆಸ್ ತೊರೆದಿದ್ದು, ಒಂದಷ್ಟು ವಿಚಾರಗಳನ್ನು ಕೂಡ ಹೊರಹಾಕಿದ್ದಾರೆ. ಗನ್ ಮ್ಯಾನ್, ಪಿಎಗಳು ಪಕ್ಷದ ನಿರ್ಧಾರ ತೆಗೆದುಕೊಳ್ಳುವಂತಾಗಿದೆ ಅಂತ ಹೇಳಿದ್ದಾರೆ. ಅನೇಕ ಹಿರಿಯರು ಪಕ್ಷ ತ್ಯಜಿಸುತ್ತಿದ್ದಾರೆ. ಇದು ಕಾಂಗ್ರೆಸ್​ನ ಹೀನಾಯ ಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.

ರವಿ ಸುಬ್ರಹ್ಮಣ್ಯ ಇದೀಗ ಕಮಿಷನ್​ಗೆ ಡಿಮ್ಯಾಂಡ್ ಮಾಡ್ತಾರೆ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಂಪಣ್ಣ ಏನು ಹೇಳಿದ್ದಾರೋ ಗೊತ್ತಿಲ್ಲ. ಎಲ್ಲಾರೂ ಕಮಿಷನ್ ಪಡೆಯುತ್ತಾರೆ ಅಂತಾರೆ ಅದು ಸಾಧ್ಯವಾ?. ಇದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ. ಇದನ್ನು ಅವರು ಮೊದಲು ಬಿಟ್ಟು ದಾಖಲೆ ಕೊಡಲಿ. ಸಿಎಂ ಸಹ ಈಗಾಗಲೇ ‌ದಾಖಲೆ ಕೊಡಲಿ ಅಂತ ಕೇಳಿದ್ದಾರೆ. ಕೆಂಪಣ್ಣ ಕಾಂಗ್ರೆಸ್ ಹೇಳಿಕೆಯಂತೆ ನಡೆದುಕೊಳ್ಳುತ್ತಿದ್ದಾರೆ. ಅದನ್ನು ಬಿಟ್ಟು ‌ಮೊದಲು ದಾಖಲೆ ಕೊಡಲಿ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಈದ್ಗಾ ಮೈದಾನದಲ್ಲಿ ಗಣೇಶೋತ್ಸವದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ: ಸಚಿವ ಆರ್ ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.