ಬೆಂಗಳೂರು: 'ಕಾಡಿಗೆ ಒಬ್ಬರೇ ಹೋಗುತ್ತಿರಾ..? ಅಥವಾ ಪತ್ನಿ ಜೊತೆ ಹೋಗುತ್ತಿರಾ..?' ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಓದಿ: 'ನೀನು ವಿಸ್ಕಿ ಕುಡಿದಿದ್ದೇನಪ್ಪಾ ಲಿಂಬಾವಳಿ'.. ಸಿದ್ದರಾಮಯ್ಯ ಹಾಕಿದ ಪ್ರಶ್ನೆಗೆ ತಬ್ಬಿಬ್ಬಾದ ಸಚಿವರು..
ನಿನ್ನೆಯಷ್ಟೆ ವಿಸ್ಕಿ ಕುಡಿದಿದ್ದೀಯಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಲೆಳೆದಿದ್ದರು. ಶೂನ್ಯ ವೇಳೆಯಲ್ಲಿ ಇಂದು ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಕುರಿತು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಉತ್ತರ ನೀಡುತ್ತಿದ್ದ ವೇಳೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿದರು. ಅರಣ್ಯಕ್ಕೆ ಪತ್ನಿ ಜತೆಗೆ ಹೋಗುತ್ತಿರಾ ಅಥವಾ ಒಬ್ಬರೇ ಹೋಗುತ್ತೀರಾ..? ಎಂದು ಕಿಚಾಯಿಸಿದರು.
ಆಗ ಸಚಿವರು, ನಾನು ಪತ್ನಿ ಜೊತೆ ಹೋಗುವುದಿಲ್ಲ, ನಾನೊಬ್ಬನೇ ಹೋಗುತ್ತೇನೆ. ಆದರೆ ಅರಣ್ಯ ಇಲಾಖೆ ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆಯನ್ನು ನೀಡಿದ್ದಾರೆ. ಆದ್ದರಿಂದ ಕಾಡಿನ ಜೊತೆಗೆ ನಾಡಿಗೂ ಬರಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.