ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ತಂದೆ ಎ.ಕೃಷ್ಣಪ್ಪ ಅವರ ಹೆಸರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ನನ್ನ ತಂದೆಗೆ ಅಂದು ಮೋಸ ಮಾಡಿದ್ದು ನೀವು. ನೀವು ಸಿಎಂ ಆಗಬೇಕು ಅಂತ ನಮ್ಮ ತಂದೆಯನ್ನು ತುಳಿದಿರಿ. ಸಿಎಂ ಸ್ಥಾನಕ್ಕೆ ಕುತ್ತು ಬರಬಾರದು ಅಂತ ನಮ್ಮ ತಂದೆಗೆ ಟಿಕೆಟ್ ತಪ್ಪಿಸಿದಿರಿ. ನಮ್ಮ ತಂದೆ ಕೃಷ್ಣಪ್ಪ ಬಗ್ಗೆ ನಿಜವಾಗಿ ಕಾಳಜಿ ಇರಲಿಲ್ಲ. ಇದ್ದಿದ್ದರೆ ಅಂದೇ ಬಸವರಾಜ್ಗೆ ಬುದ್ದಿ ಹೇಳಬಹುದಿತ್ತು. ಬಸವರಾಜ್ ಅಂದು ನೀವು ಹಾಕಿದ ಗೆರೆ ದಾಟುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಸವರಾಜು ಕೃಷ್ಣಪ್ಪ ಶಿಷ್ಯ, ಅವತ್ತು ಬಸವರಾಜ್ರನ್ನು ದಾಳವಾಗಿ ಬಳಸಿಕೊಂಡಿರಿ. ಬಸವರಾಜ್ಗೆ ತಾಕೀತು ಮಾಡಿ ಹೇಳಬೇಕಿತ್ತು. ಕೃಷ್ಣಪ್ಪ ದೊಡ್ಡ ಮರ. ನೀನಿನ್ನು ಸಣ್ಣವನು ಅಂತ. ನಾನು ಅವರ ಮಗಳಾಗಿದ್ದೆ, ಕೃಷ್ಣಪ್ಪ ಮೇಲೆ ಅಭಿಮಾನ ಇದ್ದಿದ್ದರೆ ಅವತ್ಯಾಕೆ ಕಾಂಗ್ರೆಸ್ ನಿಂದ ನನ್ನ ಸಸ್ಪೆಂಡ್ ಮಾಡಿಸಿದ್ರಿ? ಇಂದೇಕೆ ಬಸವರಾಜ್ ಮೇಲೆ ಗೂಬೆ ಕೂರಿಸುತ್ತೀದ್ದೀರಾ? ಬಿಜೆಪಿ ನನ್ನನ್ನು ಶಾಸಕಿಯಾಗಿ ಮಾಡಿದೆ. ಕ್ಷೇತ್ರದ ಜನ ಕೃಷ್ಣಪ್ಪನವರ ಮಗಳಾದ ನನ್ನ ಜೊತೆ ಇರುತ್ತಾರೆ. ನಾವು ಸಂಪೂರ್ಣವಾಗಿ ಬಸವರಾಜ್ರನ್ನು ಒಪ್ಪಿಕೊಂಡಿದ್ದು, ಅವರನ್ನು ಗೆಲ್ಲಿಸುತ್ತೇವೆ. ಕಾಂಗ್ರೆಸ್ನವರು ಚುನಾವಣೆ ಪ್ರಚಾರಕ್ಕೆ ನಮ್ಮ ತಂದೆ ಹೆಸರನ್ನ ಬಳಸಿಕೊಳ್ಳುವುದು ಬೇಡ ಎಂದು ಪೂರ್ಣಿಮಾ ಶ್ರೀನಿವಾಸ್ ಕೆ.ಆರ್.ಪುರ ಚುನಾವಣಾ ಪ್ರಚಾರದಲ್ಲಿ ಎಚ್ಚರಿಕೆ ನೀಡಿದ್ದಾರೆ.
2013 ರ ವಿಧಾನಸಭೆ ಚುನಾವಣೆ ವೇಳೆ ನಾನೇ ಬೈರತಿ ಬಸವಾರಾಜ್ಗೆ ಟಿಕೆಟ್ ಕೊಡಿಸಿದ್ದೆ ಎಂದು ಸಿದ್ದರಾಮಯ್ಯ ನಿನ್ನೆ ಹೇಳಿದ್ದರು.