ETV Bharat / state

ಅನುದಾನ ರದ್ದು: ಮೌನ ಪ್ರತಿಭಟನೆ ವಾಪಸ್ ಪಡೆದು ಡಿ.ಕೆ.ಸುರೇಶ್‌ಗೆ ಟಾಂಗ್‌ ಕೊಟ್ಟ ಮುನಿರತ್ನ

ಆರ್.​ಆರ್.ನಗರ ಕ್ಷೇತ್ರದ ಅನುದಾನ ರದ್ದುಗೊಳಿಸಿ ಬೇರೆ ಮೂರು ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ದೂರಿದರು.

ಶಾಸಕ ಮುನಿರತ್ನ
ಶಾಸಕ ಮುನಿರತ್ನ
author img

By ETV Bharat Karnataka Team

Published : Oct 11, 2023, 3:56 PM IST

ಬೆಂಗಳೂರು: ನಾನು ನಿರ್ಮಾಣ ಮಾಡಿದ ಸಿನಿಮಾವನ್ನು ಡಿ.ಕೆ.ಸುರೇಶ್ ಅವರ ಬಾಕ್ಸ್‌ನಲ್ಲಿ ತೆಗೆದುಕೊಂಡು ಟೆಂಟ್‌‌ನಲ್ಲಿ ಹಾಕಿದ್ದಾರೆ ಎಂದು ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಟಾಂಗ್‌ ಕೊಟ್ಟರು. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ನೀಡಿದ ಅನುದಾನವನ್ನು ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ನಡೆಸುತ್ತಿದ್ದ ಮೌನ ಪ್ರತಿಭಟನೆ ವಾಪಸ್ ಪಡೆದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

ಮುನಿರತ್ನ ದೊಡ್ಡ ಸಿನಿಮಾ ನಿರ್ಮಾಪಕ. ಏನೆಲ್ಲಾ ಸ್ಕ್ರಿಪ್ಟ್ ತಯಾರಿಸಿದ್ದಾರೋ​ ನೋಡೋಣ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಸಿನಿಮಾವನ್ನು (ನನ್ನ ಕ್ಷೇತ್ರದ ಅನುದಾನವನ್ನು) ಬೇರೆ ಥಿಯೇಟರ್‌ಗೆ (ಕ್ಷೇತ್ರಕ್ಕೆ) ಹಾಕಿದ್ದಾರೆ. 126 ರೀಲ್ ಅನ್ನ ಬೇರೆ ಕಡೆ ರಿಲೀಸ್ ‌ಮಾಡಿದ್ದಾರೆ. (126 ಕೋಟಿ ರೂ ಅನುದಾನವನ್ನು ಬೇರೆ ಕ್ಷೇತ್ರಕ್ಕೆ). ಅವರು ಹಂಚಿಕೆದಾರರು, ಅವರು ಬೇರೆ ಕಡೆ ರಿಲೀಸ್ ಮಾಡಿದ್ದಾರೆ ಎಂದು ತಿರುಗೇಟು ಕೊಟ್ಟರು.

ಎರಡು ಗಂಟೆಯವರೆಗೆ ನಾನು ಉಪವಾಸ ಸತ್ಯಾಗ್ರಹ ಮಾಡಬೇಕಿತ್ತು. ಆದರೆ ಯಡಿಯೂರಪ್ಪ ನನ್ನ ಜೊತೆಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಉಪವಾಸ ಸತ್ಯಾಗ್ರಹ ಇಲ್ಲಿಗೆ ಕೈಬಿಡುತ್ತೇನೆ ಎಂದರು.

ನಮ್ಮ ಕ್ಷೇತ್ರದಲ್ಲಿ ಗಾಂಜಾ ಮಾರಾಟ ಹೆಚ್ಚಾಗ್ತಿದೆ. ಪೊಲೀಸ್ ಅಧಿಕಾರಿಗಳ ಜೊತೆ ಸೆಲ್ಫಿ ತಗೋತಾರೆ ಎಂದು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದರು. ನಾನು ಹೇಳಿದ ಕೆಲಸ ಆಗಿಲ್ಲ ಅಂದ್ರೆ ಎಂಪಿ ಹತ್ರ ಕಾಲ್ ಮಾಡಿಸ್ಲಾ ಅಥವಾ ಡಿಸಿಎಂ ಅವರಿಂದ ಫೋನ್ ಮಾಡಿಸ್ಲಾ ಅಂತ ಕೇಳ್ತಾರೆ. ನಾನು ಏನು ಮಾಡಲಿ?. ಆರ್.ಆರ್.ನಗರ ಕ್ಷೇತ್ರದಲ್ಲಿ ಸೋತಿರುವ ಅಭ್ಯರ್ಥಿ ಏನೇ ಹೇಳಿದ್ರೂ ಕೆಲಸ ಆಗುತ್ತದೆ ಎಂದು ಕಿಡಿಕಾರಿದರು.

ಕ್ಷೇತ್ರದಲ್ಲಿ ಮನೆ ಕಟ್ಟಲು ಪ್ಲಾನ್ ಸ್ಯಾಂಕ್ಷನ್‌ಗೆ ಇವರ ಅನುಮತಿ ಬೇಕು. ಮನೆ ಕಟ್ಟೋದಕ್ಕೆ ತಡೆ ಹಿಡಿಯುತ್ತಾರೆ. ಬಂದು ಮಾತನಾಡಿ, ಆಮೇಲೆ ಮಾತನಾಡಿ ಎಂದು ವಾರ್ನಿಂಗ್ ಕೊಡ್ತಾರೆ ಎಂದು ದೂರಿದರು.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಹೊಸಕೆರೆಹಳ್ಳಿ ಕೆರೆಯನ್ನು ಉದ್ಯಾನವನ ಮಾಡಬೇಕೆಂದು ಅನುದಾನ ನೀಡಿದರು. ಹೊಸಕೆರೆಹಳ್ಳಿ ರಸ್ತೆ ಅಭಿವೃದ್ಧಿಗೂ ಕೂಡ ಅನುದಾನ ನೀಡಿದರು. ಅದರಲ್ಲಿ ಟೆಂಡರ್ ಓಪನ್ ಆಗಿದೆ. ಆ ಕಾಮಗಾರಿ ಕೂಡ ರದ್ದು ಮಾಡಿದ್ದಾರೆ. ಒಟ್ಟು 126 ಕೋಟಿ ರೂ ಅನುದಾನ ರದ್ದಾಗಿದೆ. 126 ಕೋಟಿ ವೆಚ್ಚದ ಕಾಮಗಾರಿಗಳು ಸರ್ಕಾರದ ಆದೇಶವಾಗಿರುವ ಕಾಮಗಾರಿಗಳು. ಆ ಆದೇಶ ರದ್ದು ಮಾಡಿ ಈ ಸರ್ಕಾರ ಮತ್ತೊಂದು ಆದೇಶ ಮಾಡಿದ್ದಾರೆ. ಆರ್.ಆರ್.ನಗರ ಕ್ಷೇತ್ರದ ಅನುದಾನವನ್ನು ಮೂರು ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ

ಪುಲಕೇಶಿನಗರಕ್ಕೆ 40 ಕೋಟಿ, ಯಶವಂತಪುರ ಕ್ಷೇತ್ರಕ್ಕೆ 40 ಕೋಟಿ ರೂ ಕೊಟ್ಟಿದ್ದಾರೆ. ಯಶವಂತಪುರ ಕ್ಷೇತ್ರಕ್ಕೆ 40 ಕೋಟಿ ಕೊಟ್ಟವರು ನನಗೂ ಕೂಡ ಕೊಡಬಹುದಿತ್ತು. ಸಂಸದರಾದ ಡಿ.ಕೆ.ಸುರೇಶ್‌ ಕೊಡಿಸಬಹುದಿತ್ತು. ಸಂಸದರಾಗಿ ಅದು ಅವರ ಕರ್ತವ್ಯ. ಆದರೆ ಈ ಬಗ್ಗೆ ಡಿ.ಕೆ.ಸುರೇಶ್ ಒಂದು ಪತ್ರ ಕೂಡಾ ಬರೆದಿಲ್ಲ. ದಯವಿಟ್ಟು ಹಣ ವಾಪಸ್ ಕೊಡಿ ಎಂದು ನಾನು ಪತ್ರ ಬರೆದಿದ್ದೇನೆ. ನಿಮ್ಮ ಸಹೋದರರೆ ಉಸ್ತುವಾರಿ ಸಚಿವರು, ಅವರ ಬಳಿ ಮನವಿ ಮಾಡಬಹುದಿತ್ತು. ಅವರದೇ ಸರ್ಕಾರವಿದೆ, ಈಗ ಅಭಿವೃದ್ಧಿಯಾಗದೇ ಇನ್ಯಾವಾಗ ಮಾಡಲು ಸಾಧ್ಯ?. ಎಲ್ಲಾ ಶಾಸಕರ ರೀತಿ ನನ್ನನ್ನೂ ನೋಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಆರ್.ಆರ್.ನಗರಕ್ಕೆ ಅನುದಾನ ಕಡಿತ: ಶಾಸಕ ಮುನಿರತ್ನಗೆ ಬಿಎಸ್​ವೈ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.