ETV Bharat / state

ಚೆಕ್ ಬೌನ್ಸ್ ಪ್ರಕರಣ: ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿಗೆ 6 ತಿಂಗಳು ಜೈಲು ಶಿಕ್ಷೆ

ಚೆಕ್ ಬೌನ್ಸ್ ಪ್ರಕರಣ ಸಂಬಂಧ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಜೈಲು ಶಿಕ್ಷೆ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ.

mla-mp-kumaraswamy-sentenced-to-four-year-jail
ಚೆಕ್ ಬೌನ್ಸ್ ಪ್ರಕರಣ : ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ
author img

By

Published : Feb 13, 2023, 5:30 PM IST

Updated : Feb 13, 2023, 10:07 PM IST

ಬೆಂಗಳೂರು: ಚೆಕ್‌ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಹೂವಪ್ಪಗೌಡ ಎಂಬುವರಿಂದ 1.35 ಕೋಟಿ ರೂಪಾಯಿ ಸಾಲ ಪಡೆದಿದ್ದ ಎಂ.ಪಿ. ಕುಮಾರಸ್ವಾಮಿ ಅವರು, ಸಾಲ ಮರುಪಾವತಿಗೆ ಹೂವಪ್ಪಗೌಡಗೆ 8 ಚೆಕ್​ಗಳನ್ನು ನೀಡಿದ್ದರು. ಆದರೆ ಆ 8 ಚೆಕ್​ಗಳೂ ಸಹ ಬೌನ್ಸ್ ಆಗಿದ್ದರಿಂದ ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯದಲ್ಲಿ ಹೂವಪ್ಪ ಗೌಡ 8 ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜೆ. ಪ್ರೀತ್‌ ಅವರು, ಆರೋಪಿ ಶಾಸಕರಿಗೆ 8 ಪ್ರಕರಣಗಳಲ್ಲಿ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ್ದಾರೆ. ಅಂದರೆ ಸಾಲ ಮರುಪಾವತಿ ಮಾಡದಿದ್ದಲ್ಲಿ 6 ತಿಂಗಳು ಜೈಲು ಶಿಕ್ಷೆ ಪ್ರಕಟಿಸಲಾಗಿದೆ.

ನ್ಯಾಯಾಲಯದಿಂದ ಶಾಸಕ ನೆಹರು ಓಲೇಕಾರ್​​ಗೆ ಶಿಕ್ಷೆ : 50 ಲಕ್ಷ ರೂಪಾಯಿ ಮೊತ್ತದ ಕಾಮಗಾರಿ ಹೊಣೆಯನ್ನು ತನ್ನ ಪುತ್ರರಿಗೆ ವಹಿಸಿದ ಆರೋಪದ ಮೇಲೆ ಹಾವೇರಿ ಜಿಲ್ಲೆಯ ಬಿಜೆಪಿ ಶಾಸಕ ನೆಹರು ಓಲೆಕಾರ್, ಅವರ ಪುತ್ರರಾದ ಮಂಜುನಾಥ್ ಹಾಗೂ ದೇವರಾಜ್ ಓಲೆಕಾರ್​ಗೆ 2 ವರ್ಷ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲ ಕಾಮಗಾರಿಯನ್ನು ಸ್ವಜನಪಕ್ಷಪಾತದಿಂದ ಪುತ್ರರಿಗೆ ನೀಡಿದ ಆರೋಪ ನೆಹರು ಓಲೇಕಾರ್ ವಿರುದ್ಧ ಕೇಳಿ ಬಂದಿತ್ತು.

ಶಿಕ್ಷೆಯ ಪ್ರಮಾಣ ಮೂರು ವರ್ಷಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವೇ ಜಾಮೀನು ಮಂಜೂರು ಮಾಡಲಿದೆ.

ಇದನ್ನೂ ಓದಿ: ಜನರ ಭೂಮಿ ವಿಚಾರದಲ್ಲಿ ಸರ್ಕಾರ ಲೂಟಿಕೋರರಂತೆ ವರ್ತಿಸಬಾರದು: ಹೈಕೋರ್ಟ್

Last Updated : Feb 13, 2023, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.