ಬೆಂಗಳೂರು: ನಮಗೆ ನೋಟಿಸ್ ಕೊಡದೇ ತೆರವು ಮಾಡಲಾಗುತ್ತಿದೆ. ಇದು ಸರಿಯಾದ ಕ್ರಮ ಅಲ್ಲ ಎಂದು ಶಾಸಕ ಎನ್ ಎ ಹ್ಯಾರೀಸ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ದೇಶದಲ್ಲಿ ಕಾನೂನು ಇದೆ. ನೋಡೋಣ ಅವರು ಏನು ಮಾಡ್ತಾರೆ. ಅಧಿಕಾರಿಗಳು ನೋಟಿಸ್ ಕೊಡಬಹುದಿತ್ತು. ಜಾಯಿಂಟ್ ಸರ್ವೆ ಮಾಡಬಹುದಿತ್ತು. ಆ ಮೋರಿ ಎಲ್ಲಿದೆ, ಅದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಗೊತ್ತಿಲ್ಲ. ನಮಗೆ ನೋಟಿಸ್ ಕೂಡ ಕೊಡದೇ ತೆರವು ಮಾಡ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಕಾನೂನು ಇದೆ. ಇದು ನನ್ನ ಪ್ರಾಪರ್ಟಿ, ಸರ್ಕಾರದ ಆಸ್ತಿ ಅಲ್ಲ. ಇಲ್ಲಿ ಪ್ರವಾಹ ಆಗಿಲ್ಲ, ಪ್ರವಾಹ ಆಗಿರುವ ಕಡೆ ತೆರವು ಮಾಡ್ತಿಲ್ಲ. ದಾಖಲೆ ಕೊಡಬೇಕಲ್ಲವೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮುಲಾಜಿಲ್ಲದೇ ರಾಜಕಾಲುವೆ ಒತ್ತುವರಿ ತೆರವು, ಸಮಗ್ರ ಅಭಿವೃದ್ಧಿಗೆ ಒತ್ತು: ಸಿಎಂ ಬಸವರಾಜ ಬೊಮ್ಮಾಯಿ