ETV Bharat / state

'ಗೋರಕ್ಷಕರು, ಹಿಂದೂ ಕಾರ್ಯಕರ್ತರ ಕೊಲೆಗಡುಕರ ವಿರುದ್ಧ ಯುಪಿ ಮಾದರಿ ಕಾನೂನು ತನ್ನಿ'

author img

By

Published : Mar 10, 2022, 10:15 PM IST

ಎಲ್ಲರೂ ಗ್ರಾಮೀಣ ಭಾಗದಿಂದ ಬಂದಿರುವವರೇ. ಆದರೆ ಎಲ್ಲರೂ ನಾವು ಮಣ್ಣಿನ ಮಕ್ಕಳು ಅಂತಾರೆ. ಹಾಗಾದರೆ ನಾವು ಎಲ್ಲಿಂದ ಬಂದವರು?. ನಾವೂ ರೈತರ ಮಕ್ಕಳು, ನಾವೂ ಗ್ರಾಮೀಣ ಭಾಗದಿಂದ ಬಂದವರು. ಎಲ್ಲರೂ ಈ ಡೈಲಾಗ್ ಬಿಡುವುದು ಸಾಮಾನ್ಯವಾಗಿದೆ ಎಂದು ಯತ್ನಾಳ್ ಟೀಕಿಸಿದರು.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಬೆಂಗಳೂರು: ರಾಜ್ಯದಲ್ಲಿ ಗೋರಕ್ಷಕರು, ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿದೆ. ಇದನ್ನು ತಡೆಯಲು ಉತ್ತರ ಪ್ರದೇಶದಂತೆ ಇಲ್ಲೂ ಕಠಿಣ ಕಾನೂನು ಜಾರಿಯಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕೋಮು ಘರ್ಷಣೆ ಹೆಚ್ಚಿಸಲು ಕೆಲ ಶಕ್ತಿಗಳು ಯತ್ನಿಸುತ್ತಿವೆ. ಇದನ್ನು ನಿಯಂತ್ರಣ ಮಾಡಲು ಸಿಎಂ ಗಟ್ಟಿ ನಿರ್ಣಯ ತೆಗೆದುಕೊಳ್ಳಬೇಕು. ಗೂಂಡಾಗಳನ್ನು ಹತ್ತಿಕ್ಕಿದ ಕಾರಣ ಪಂಚರಾಜ್ಯದಲ್ಲಿ ಬಿಜೆಪಿ ಐತಿಹಾಸಿಕ ಜಯಭೇರಿ ಸಾಧಿಸಿದೆ. ಕರ್ನಾಟಕ ಭ್ರಷ್ಟರಿಂದ, ಗೂಂಡಾಗಳಿಂದ ಮುಕ್ತವಾಗಬೇಕು ಎಂದರು.

ಹಿಂದೂ ಧರ್ಮದ ದೇವಾಸ್ಥಾನಗಳ ಮೇಲೆ ನಿಯಂತ್ರಣ ಹೇರಲಾಗಿತ್ತು. ಆದರೆ ಚರ್ಚ್, ಮಸೀದಿಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಮೆಕ್ಕಾ, ಮದೀನಕ್ಕೆ ಹೋಗುವವರಿಗೆ ಲಕ್ಷಗಟ್ಟಲೆ, ಸಾವಿರಾರು ಕೋಟಿ ರೂ ಕೊಡುತ್ತಿದ್ದರು. ತುಷ್ಟೀಕರಣ ನೀತಿ ಮಾಡುತ್ತಿದ್ದರು. ಇದೀಗ ಕಾಶಿ ಯಾತ್ರೆಗಾಗಿ ಯಾತ್ರಾರ್ಥಿಗಳಿಗೆ ಐದು ಸಾವಿರ ಸಹಾಯಧನ ನೀಡಿದ್ದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದು ಸರ್ವ ವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಆಗಿದೆ. ಈ ಬಜೆಟ್ ಘೋಷಣೆಗಳು ಅನುಷ್ಟಾನ ಆಗಬೇಕು. ಬಜೆಟ್ ಪುಸ್ತಕದಲ್ಲಿದ್ದರೆ ಸಾಕಾಗುವುದಿಲ್ಲ. ಅತಿ ಅಶಿಸ್ತಿನ ಇಲಾಖೆ ಅಂದರೆ ಹಣಕಾಸು ಇಲಾಖೆ. ಯಾರು ಸಿಎಂ ಆಗಿದ್ದಾರೆ ಅವರಿಗೆ ಹೆಚ್ಚಿನ ಹಣ ಕೊಡುತ್ತಾರೆ. ಶಾಸಕರು ಹೋದರೆ ಅವರನ್ನು ಆರ್ಥಿಕ ಇಲಾಖೆ ಕೂರುವುದಕ್ಕೂ ಹೇಳುವುದಿಲ್ಲ. ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಎಲ್ಲರೂ ಗ್ರಾಮೀಣ ಭಾಗದಿಂದ ಬಂದಿರುವವರೇ. ಆದರೆ ಎಲ್ಲರೂ ನಾವು ಮಣ್ಣಿನ ಮಕ್ಕಳು ಅಂತಾರೆ. ಹಾಗಾದರೆ ನಾವು ಎಲ್ಲಿಂದ ಬಂದವರು?. ನಾವೂ ರೈತರ ಮಕ್ಕಳು, ನಾವೂ ಗ್ರಾಮೀಣ ಭಾಗದಿಂದ ಬಂದವರು. ಎಲ್ಲರೂ ಈ ಡೈಲಾಗ್ ಬಿಡುವುದು ಸಾಮಾನ್ಯವಾಗಿದೆ ಎಂದು ಟೀಕಿಸಿದರು.

ನೀರಾವರಿ ಇಲಾಖೆಗೆ ಕಡಿಮೆ ಅನುದಾನ ನೀಡಿರುವ ಬಗ್ಗೆ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದರು. ನೀರಾವರಿ ಯೋಜನೆಗೆ 5,000 ಸಾವಿರ ಕೋಟಿ ಮಾತ್ರ ಇಟ್ಟಿದ್ದೀರಿ. ಎಲ್ಲಿಗೆ ಸಾಕಾಗುತ್ತದೆ? ನೀರಾವರಿಗೆ ಆದ್ಯತೆ ಕೊಡುತ್ತಿಲ್ಲ. ಐದು ಸಾವಿರ ಕೋಟಿಯಲ್ಲಿ ಏನಾಗುತ್ತದೆ?. 15,000 ಸಾವಿರ ಕೋಟಿ ರೂ. ನೀರಾವರಿ ಇಲಾಖೆಗೆ ಅನುದಾನ ಕೊಡಬೇಕು. ಅದು ಹೇಗೆ ಕೊಡ್ತಾರೆ ಅನ್ನೋದು ಗೊತ್ತಿಲ್ಲ.

ಯಡಿಯೂರಪ್ಪ ವಿರುದ್ಧ ಪರೋಕ್ಷ ದಾಳಿ: ಸಿಎಂ ಇಡೀ ರಾಜ್ಯದ ಸಿಎಂ ಆಗಿ ಕೆಲಸ ಮಾಡಬೇಕು. ಜಿಲ್ಲೆಗೆ ಸೀಮಿತವಾಗಿ ಕೆಲಸ ಮಾಡಬಾರದು. ನನ್ನ ಜಿಲ್ಲೆಗೆ ಎಲ್ಲಾ ಆಗಬೇಕು. ವಿಮಾನ ನಿಲ್ದಾಣ ನಮ್ಮ ಜಿಲ್ಲೆಗೇ ಆಗಬೇಕು, ಮೆಡಿಕಲ್ ಕಾಲೇಜು ನಮಗೇ ಆಗಬೇಕು, ಕೃಷಿ ವಿವಿ ನಮ್ಮ ಜಿಲ್ಲೆಗೆ ಆಗಬೇಕು. ಎಲ್ಲವೂ ನಮ್ಮ ಜಿಲ್ಲೆಗೆ ಆಗಬೇಕು. ಎಷ್ಟು ತಾರತಮ್ಯ ಆಗಿದೆ ಎಂದು ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ದಾಳಿ ನಡೆಸಿದರು.

ವಿಜಯಪುರ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇಲ್ಲ. ಖಾರ್ಗೋ ವ್ಯವಸ್ಥೆ ಇಲ್ಲ. ಆದರೆ ಶಿವಮೊಗ್ಗಕ್ಕೆ ನೈಟ್ ಲ್ಯಾಂಡಿಂಗ್, ಖಾರ್ಗೋ ವ್ಯವಸ್ಥೆ ಆಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪರೋಕ್ಷ ಟೀಕೆ ಮಾಡಿದರು.

ರಾಜಕಾರಣಿಗಳು ತಿನ್ನುವುದು ಕಡಿಮೆ ಮಾಡಬೇಕು: ರಾಜಕಾರಣಿಗಳು ತಿನ್ನುವುದು ಕಡಿಮೆ ಮಾಡಬೇಕು. ಆಗ ರಾಜ್ಯದ ಸಾಲ ಕಡಿಮೆ ಆಗುತ್ತದೆ ಎಂದು ಯತ್ನಾಳ್ ಆಗ್ರಹಿಸಿದರು. ನಾನು ಸಿಎಂ ಆಗಿದ್ದೇನೆ, ಮಂತ್ರಿ ಆಗಿದ್ದೇನೆ. ಮುಂದೆ ಮಂತ್ರಿ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಸಾವಿರಾರು ಕೋಟಿ ಲೂಟಿ ಮಾಡುವುದು. ದೊಡ್ಡ ದೊಡ್ಡ ಮನೆ ಕಟ್ಟುವುದು. ಐಷಾರಾಮಿ ಜೀವನ ಮಾಡುವುದು. ಈ ವ್ಯವಸ್ಥೆಯಲ್ಲಿ ಕರ್ನಾಟಕ ಬಿಹಾರಕ್ಕಿಂತ ಕೆಟ್ಟ ಪರಿಸ್ಥಿಗೆ ಹೋಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.