ETV Bharat / state

ಕೋವಿಡ್ ಜಾಹೀರಾತು ಅನುಮತಿ ದುರ್ಬಳಕೆ: ತೆರಿಗೆ ವಸೂಲಿಗೆ ಹೈಕೋರ್ಟ್ ತಾಕೀತು

ಕೋವಿಡ್ ಕುರಿತು ಜಾಗೃತಿ ಜಾಹೀರಾತು ಅಳವಡಿಕೆಗೆ ಅನುಮತಿ ನೀಡುವ ವೇಳೆ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಪೀಠ, ಜಾಹೀರಾತುದಾರರಿಗೆ ವಿಧಿಸಿರುವ 18 ಲಕ್ಷ ರೂ. ತೆರಿಗೆ ಹಣವನ್ನು ಒಂದು ವಾರದಲ್ಲಿ ವಸೂಲಿ ಮಾಡಿ ಬಿಬಿಎಂಪಿಗೆ ಪಾವತಿಸಬೇಕು. ಒಂದು ವೇಳೆ ತಪ್ಪಿದ್ರೆ ಸರ್ಕಾರವೇ ಆ ಮೊತ್ತವನ್ನು ಪಾಲಿಕೆಗೆ ಭರಿಸಬೇಕಾಗುತ್ತದೆ ಎಂದು ನಿರ್ದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Dec 7, 2020, 7:44 PM IST

ಬೆಂಗಳೂರು: ಕೋವಿಡ್ ಕುರಿತು ಜಾಗೃತಿ ಜಾಹೀರಾತು ಅಳವಡಿಸುವ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ದುರ್ಬಳಕೆ ಮಾಡಿಕೊಂಡು ಖಾಸಗಿ ಕಂಪನಿಗಳ ಜಾಹೀರಾತಿಗೆ ಅವಕಾಶ ನೀಡಿದ್ದ ಪ್ರಕರಣದಲ್ಲಿ ಜಾಹೀರಾತುದಾರರಿಗೆ ವಿಧಿಸಿರುವ 18 ಲಕ್ಷ ರೂ. ತೆರಿಗೆ ಹಣವನ್ನು ಒಂದು ವಾರದಲ್ಲಿ ವಸೂಲಿ ಮಾಡಿ ಬಿಬಿಎಂಪಿಗೆ ಪಾವತಿಸಬೇಕು. ಒಂದು ವೇಳೆ ತಪ್ಪಿದ್ರೆ ಸರ್ಕಾರವೇ ಆ ಮೊತ್ತವನ್ನು ಪಾಲಿಕೆಗೆ ಭರಿಸಬೇಕಾಗುತ್ತದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಕೋವಿಡ್ ಕುರಿತು ಜಾಗೃತಿ ಜಾಹೀರಾತು ಅಳವಡಿಕೆಗೆ ಅನುಮತಿ ನೀಡುವ ವೇಳೆ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿ ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಹಿಂದಿನ ವಿಚಾರಣೆ ವೇಳೆ ಕೊರೊನಾ ಜಾಗೃತಿ ಹೆಸರಲ್ಲಿ ಖಾಸಗಿ ಜಾಹೀರಾತು ಅಳವಡಿಸಿದ್ದನ್ನು ಗಮನಿಸಿದ್ದ ಪೀಠ, ಸರ್ಕಾರಕ್ಕೆ ನೀಡಿದ್ದ ಅನುಮತಿ ಹಿಂಪಡೆದಿತ್ತು. ಜತೆಗೆ ಖಾಸಗಿ ಜಾಹೀರಾತುಗಳಿದ್ದ ಫಲಕಗಳನ್ನು ಶೀಘ್ರ ತೆರವುಗೊಳಿಸಬೇಕು. ನಗರ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ ಪ್ರದರ್ಶಿಸಿದ್ದರಿಂದ ಬಿಬಿಎಂಪಿಗೆ 18,04,638 ರೂಪಾಯಿ ತೆರಿಗೆ ಹಣವನ್ನು ವಸೂಲಿ ಮಾಡಿ ಪಾಲಿಕೆಗೆ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಇದನ್ನು ಓದಿ:ಭಾರತ್ ಬಂದ್​: ನಾಳೆ ಏನಿರುತ್ತೆ, ಏನಿರಲ್ಲಾ?

ಇಂದು ನಡೆದ ವಿಚಾರಣೆಗೆ ವೇಳೆ ಸರ್ಕಾರ ಅನುಪಾಲನಾ ವರದಿಯನ್ನು ಸಲ್ಲಿಸಲಿಲ್ಲ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ರಾಜ್ಯ ಸರ್ಕಾರ ನ್ಯಾಯಾಲಯದ ಯಾವುದೇ ನಿರ್ದೇಶನ ಪಾಲಿಸಿಲ್ಲ. ನ್ಯಾಯಾಲಯದ ಅನುಮತಿ ದುರ್ಬಳಕೆ ಮಾಡಿಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ. ಬಿಬಿಎಂಪಿಗೆ ಖಾಸಗಿ ಕಂಪನಿಗಳಿಂದ ಬರೆಬೇಕಿದ್ದ 18 ಲಕ್ಷ ರೂ. ತೆರಿಗೆ ಹಣವನ್ನೂ ವಸೂಲಿ ಮಾಡಿಲ್ಲ ಎಂದಿತು.

ಅಲ್ಲದೆ ಖಾಸಗಿ ಕಂಪನಿಗಳಿಂದ ಪಾಲಿಕೆಗೆ ಬರಬೇಕಿರುವ ಒಟ್ಟು 18 ಲಕ್ಷ ರೂ. ತೆರಿಗೆ ಹಣವನ್ನು ಒಂದು ವಾರದೊಳಗೆ ಸಂಬಂಧಪಟ್ಟವರಿಂದ ವಸೂಲಿ ಮಾಡಿ ಪಾಲಿಕೆಗೆ ನೀಡಬೇಕು. ಇಲ್ಲದಿದ್ದರೆ ಆ ಮೊತ್ತವನ್ನು ಸರ್ಕಾರವೇ ಪಾವತಿಸಬೇಕು. ಹಾಗೆಯೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿ. 15ಕ್ಕೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.