ಬೆಂಗಳೂರು: ಮೋಜು ಮಸ್ತಿ ಮಾಡಲು ಬಿಗ್ರೇಡ್ ರೋಡ್ಗೆ ಹೋಗಿದ್ದ ಟೆಕ್ಕಿಯನ್ನು ಅಪಹರಿಸಿ, ಲಕ್ಷಾಂತರ ರೂಪಾಯಿ ದೋಚಿದ್ದ ನಾಲ್ವರು ಅಪಹರಣಕಾರರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರಾಹುಲ್ ವೈರಾಧ್ಯನನ್ನು ಅಪಹರಿಸಿದ ಆರೋಪದಡಿ ತರುಣ್ ಗಣೇಶ್, ಮಣಿಕಂಠ, ವಿಘ್ನೇಶ್ ಹಾಗೂ ಚೇರಿಶ್ ಎಂಬುವರನ್ನು ಬಂಧಿಸಲಾಗಿದೆ. ಹೂಡಿಯ ಸೀತರಾಮಪಾಳ್ಯ ನಿವಾಸಿಯಾಗಿರುವ ರಾಹುಲ್ ಕಳೆದ ತಿಂಗಳು 26ರಂದು ಕಾರಿನಲ್ಲಿ ಕಲ್ಯಾಣ ನಗರಕ್ಕೆ ತೆರಳಿ ಅಲ್ಲೇ ಕಾರು ಪಾರ್ಕಿಂಗ್ ಮಾಡಿದ್ದರು. ಬಳಿಕ ಚಾಲಕನಿಗೆ ಈ ವಿಷಯ ತಿಳಿಸಿ ಅಲ್ಲಿಂದ ಆಟೋದಲ್ಲಿ ಮೋಜು-ಮಸ್ತಿ ಮಾಡಲು ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬಿಗ್ರೇಡ್ ರೋಡ್ಗೆ ತೆರಳಿದಿದ್ದರು.
ಕಾರಿನಲ್ಲಿ ರಾಹುಲ್ ಅಪಹರಣ: ಈ ವೇಳೆ ವ್ಯಕ್ತಿಯೋರ್ವ ಪರಿಚಯವಾಗಿ ಆತ ಮೊಬೈಲ್ನಲ್ಲಿದ್ದ ಯುವತಿಯರ ಫೋಟೋ ತೋರಿಸಿದ್ದಾನೆ. ಇಷ್ಟವಿಲ್ಲ ಎಂದು ಹೇಳಿ ಆಟೋ ಚಾಲಕನಿಗೆ ತಿಳಿಸಿ ಮತ್ತೆ ಕಲಾಣ್ಯನಗರಕ್ಕೆ ಹೊರಟಿದ್ದಾರೆ. ಮಾರ್ಗಮಧ್ಯೆ ಹಿಂಬದಿಯಿದ ಆರೋಪಿಗಳು ಫಾಲೋ ಮಾಡುತ್ತಿರುವುದನ್ನು ಗಮನಿಸಿದ್ದ ರಾಹುಲ್, ಪೊಲೀಸ್ ಸ್ಟೇಷನ್ ಕಡೆ ಹೋಗುವಂತೆ ಆಟೋ ಚಾಲಕನಿಗೆ ಹೇಳಿದ್ದಾರೆ. ಹೀಗೆ ಹೋಗುವಾಗ ಸೆಂಟ್ರಲ್ ಮಾಲ್ ಬಳಿ ದುಷ್ಕರ್ಮಿಗಳು ಆಟೋ ಅಡ್ಡಗಟ್ಟಿ ರಾಹುಲ್ನನ್ನ ಕಾರಿನಲ್ಲಿ ಅಪಹರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಾಡಹಗಲೇ ಮನೆ ಕಳ್ಳತನ ಮಾಡುತ್ತಿದ್ದ ದಂಪತಿ ಬಂಧನ
ರಾತ್ರಿಪೂರ್ತಿ ಕೆ.ಆರ್.ಪುರ, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಸೇರಿ ವಿವಿಧ ಕಡೆಗಳಲ್ಲಿ ಸುತ್ತಾಡಿಸಿ ರಾಹುಲ್ ಬಳಿಯಿದ್ದ ಚಿನ್ನಾಭರಣ ಕಸಿದಿದ್ದಾರೆ. ಎಟಿಎಂ ಕಾರ್ಡ್ಗಳ ಮುಖಾಂತರ ಲಕ್ಷಾಂತರ ರೂಪಾಯಿ ಹಣ ಬಿಡಿಸಿಕೊಂಡಿದ್ದಾರೆ. ಅಲ್ಲದೇ ರಾಹುಲ್ ಸಹೋದರರಿಗೆ ಕರೆ ಮಾಡಿ, ಮತ್ತೆ ಎರಡು ಲಕ್ಷ ರೂಪಾಯಿ ಪಡೆದುಕೊಂಡು ಬೆಳಗ್ಗೆ ಕಲ್ಯಾಣನಗರಕ್ಕೆ ಬಿಟ್ಟು ಹೋಗಿದ್ದರು. ಚಿನ್ನಾಭರಣ ಸೇರಿ ಒಟ್ಟು 10 ಲಕ್ಷ ರೂಪಾಯಿ ಹಣ ತೆಗೆದುಕೊಂಡಿದ್ದಾರೆ ಎಂದು ದೂರು ನೀಡಿದ ಮೇರೆಗೆ ನಾಲ್ವರು ಅಪಹರಣಕಾರರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.