ETV Bharat / state

Bengaluru crime: ಟೊಮೆಟೊ ತುಂಬಿದ್ದ ಬೊಲೆರೊ ವಾಹನ ಹೈಜಾಕ್ ಮಾಡಿದ ಖದೀಮರು..! - ಬೆಂಗಳೂರು

ಟೊಮೆಟೊ ಸಾಗಿಸುತ್ತಿದ್ದ ವಾಹನವನ್ನು ದುಷ್ಕರ್ಮಿಗಳು ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನ ಆರ್​​ಎಂಸಿ ಯಾರ್ಡ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Miscreants hijacked a vehicle carrying tomatoes
ಟೊಮೆಟೊ ತುಂಬಿದ್ದ ಬೊಲೊರೊ ವಾಹನವನ್ನು ಹೈಜಾಕ್ ಮಾಡಿದ ಖದೀಮರು
author img

By

Published : Jul 10, 2023, 2:09 PM IST

Updated : Jul 10, 2023, 2:19 PM IST

ಬೆಂಗಳೂರು: ಕೆಲ ದಿನಗಳಿಂದ ಟೊಮೆಟೊ ಬೆಲೆ ಗಗನಕ್ಕೇರಿದೆ. ಇದೇ ಸಮಯವನ್ನು ಕಾದು ಕುಳಿತಿರುವ ಕೆಲ ಖದೀಮರು ಟೊಮೆಟೊ ಕದಿಯುತ್ತಿದ್ದಾರೆ. ಗಾಡಿ ಟಚ್ ಆಗಿದೆ ಎಂದು ಸುಳ್ಳು ಹೇಳಿದ ಮೂವರು ಆರೋಪಿಗಳು ಟೊಮೆಟೊ ತುಂಬಿದ್ದ ಬೊಲೆರೊ ವಾಹನವನ್ನು ಹೈಜಾಕ್ ಮಾಡಿದ್ದಾರೆ. ಕಳೆದ‌ ಎರಡು‌‌ ದಿನಗಳ ಹಿಂದೆ ಘಟನೆ ನಡೆದಿದ್ದು, ಈ ಸಂಬಂಧ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Tomato price : ಶೀಘ್ರದಲ್ಲೇ ಟೊಮೆಟೊ ಬೆಲೆ ಇಳಿಕೆ; ಕಂಗಾಲಾದ ಗ್ರಾಹಕರಿಗೆ ಗುಡ್​ ನ್ಯೂಸ್​

ಪ್ರಕರಣದ ವಿವರ: ಕಳೆದ‌ ಎರಡು ದಿನಗಳ ಹಿಂದೆ ಹಿರಿಯೂರಿನ ರೈತನೋರ್ವ ತನ್ನ ಜಮೀನಿನಲ್ಲಿ ಬೆಳೆದಿದ್ದ 250ಕ್ಕೂ ಹೆಚ್ಚು ಕೆ.ಜಿ ಟೊಮೆಟೊವನ್ನು ಟ್ರೈನಲ್ಲಿ ತುಂಬಿಕೊಂಡು ಕೋಲಾರಕ್ಕೆ ಹೋಗುತ್ತಿದ್ದರು. ಆರ್​ಎಂಸಿ ಬಳಿ ಬಳಿ ಬರುವಾಗ ಕಾರಿನಲ್ಲಿದ್ದ ಬಂದಿದ್ದ ಮೂವರು ಆಗಂತುಕರು ಗಾಡಿ ಟಚ್ ಆಗಿದೆ ಎಂದು ನಾಟಕವಾಡಿ ಬಲವಂತದಿಂದ ವಾಹನ ನಿಲ್ಲಿಸಿ ಚಾಲಕನಿಗೆ ಥಳಿಸಿ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೇ ವಾಹನದಲ್ಲಿದ್ದ ರೈತನ ಮೇಲೆ ಹಲ್ಲೆ ಮಾಡಿದ್ದಾರೆ. ಅಪಘಾತವೆಸಗಿದ್ದಕ್ಕಾಗಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹಣವಿಲ್ಲ ಎಂದಾಗ ಮೊಬೈಲ್​​ನಲ್ಲಿದ್ದ ಹಣ ವರ್ಗಾವಣೆ ಮಾಡುವಂತೆ ತಾಕೀತು ಮಾಡಿದ್ದಾರೆ. ನಂತರ ಟೊಮೆಟೊ ನೋಡಿ ಇಡೀ ಗಾಡಿಯನ್ನೇ ಹೈಜಾಕ್ ಮಾಡುವ ತಂತ್ರ ರೂಪಿಸಿದ್ದಾರೆ.

ಇದನ್ನೂ ಓದಿ: Tomato rate : ಗಗನಕ್ಕೇರಿದ ತರಕಾರಿ ಬೆಲೆ , 120ರ ಗಡಿ ದಾಟಿದ ಟೊಮೆಟೋ.. ಹುಬ್ಬಳ್ಳಿ ಮಂದಿ ಕಂಗಾಲು

ಬಳಿಕ ಗಾಡಿಯಲ್ಲಿ ರೈತನನ್ನು ಕೂರಿಸಿಕೊಂಡು ಹೋಗಿದ್ದಾರೆ. ಡ್ರೈವರ್ ಸಮೇತ ಬೊಲೆರೊ ವಾಹನ ಕದ್ದೊಯ್ದಿದ್ದಾರೆ‌. ಚಿಕ್ಕಜಾಲ ಬಳಿ ಡ್ರೈವರ್​ನ ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಪರಾರಿಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ಆರ್​ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

2.5 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನ: ಇತ್ತೀಚೆಗೆ ಹಾಸನ ಜಿಲ್ಲೆಯ ಜಮೀನಿನಲ್ಲಿ 2.5 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನವಾಗಿದೆ ಎಂದು ರೈತ ಕುಟುಂಬವೊಂದು ಹೇಳಿತ್ತು. ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಟೊಮೆಟೊ ಕಳ್ಳತನ ಮಾಡಲಾಗಿದ್ದು, ರಾತ್ರೋರಾತ್ರಿ 2 ಎಕರೆ ಜಮೀನಿನಲ್ಲಿದ್ದ ತರಕಾರಿಯನ್ನು ವಾಹನದಲ್ಲಿ ಕಳ್ಳರು ಕದ್ದೊಯ್ದಿದ್ದಾರೆ ಎಂದು ತಿಳಿಸಿದ್ದರು.

"ಹುರುಳಿ ಬೆಳೆಯಲ್ಲಿ ಅಪಾರ ನಷ್ಟ ಅನುಭವಿಸಿದ ಬಳಿಕ ಸಾಲ ಮಾಡಿ ಟೊಮೆಟೊ ಬೆಳೆ ಬೆಳೆದಿದ್ದೆವು. ಬೆಂಗಳೂರಿನಲ್ಲಿ ಕೆಜಿ ಟೊಮೆಟೊ 120 ರೂ. ತಲುಪಿದ್ದರಿಂದ ಬೆಳೆ ಕತ್ತರಿಸಿ ಮಾರುಕಟ್ಟೆಗೆ ಸಾಗಿಸಲು ಮುಂದಾಗಿದ್ದೆವು. ಈ ಬಾರಿ ಉತ್ತಮ ಫಸಲು ಬಂದಿದ್ದು, ಬೆಲೆಯೂ ಹೆಚ್ಚಿತ್ತು. ಆದರೆ ರಾತ್ರಿ ಕಳ್ಳರು 50-60 ಚೀಲ ಟೊಮೆಟೊ ತೆಗೆದುಕೊಂಡು ಹೋಗಿದ್ದಲ್ಲದೆ, ಉಳಿದ ಬೆಳೆಯನ್ನೂ ನಾಶಪಡಿಸಿದ್ದಾರೆ. ಕೆಳಗಡೆ ಹೊಲದಲ್ಲಿ ಸಂಪೂರ್ಣ ಲೂಟಿ ಮಾಡಿ ಹೋಗಿದ್ದಾರೆ" ಎಂದು ರೈತ ಮಹಿಳೆ ಧರಣಿ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: ಹಾಸನ: ರಾತ್ರೋರಾತ್ರಿ ಜಮೀನಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನ

Last Updated : Jul 10, 2023, 2:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.