ETV Bharat / state

ಹಲ್ಲೆ ನಡೆಸಿದ್ದ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು... ಪಟ್ಟು ಸಡಿಲಿಸಿದ ವೈದ್ಯರು - assault on minto hospital doctors

ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಪೊಲೀಸರಿಗೆ ಶರಣಾದ ಹಿನ್ನೆಲೆಯಲ್ಲಿ ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರು ಸತತ 8 ದಿನಗಳ ನಂತರ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರ ಪ್ರತಿಭಟನೆ​ ಹಿಂದಕ್ಕೆ
author img

By

Published : Nov 8, 2019, 6:17 PM IST

ಬೆಂಗಳೂರು: ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಪೊಲೀಸರಿಗೆ ಶರಣಾದ ಹಿನ್ನೆಲೆಯಲ್ಲಿ ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರು ಸತತ 8 ದಿನಗಳ ನಂತರ ಇಂದು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಸತತ ಮೂರು ತಾಸಿಗೂ ಹೆಚ್ಚು ಸಮಯ ಸಭೆ ನಡೆಸಿದ ಬಳಿಕ ಪ್ರತಿಭಟನೆ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.‌

ಕಳೆದ 8 ದಿನಗಳಿಂದ ಕಿರಿಯ ಹಾಗೂ ತರಬೇತಿ ವೈದ್ಯರ ಪ್ರತಿಭಟನೆಯ ಕಿಚ್ಚು ಹೆಚ್ಚಾಗ್ತಿದ್ದಂತೆ, ಕರವೇ ಕಾರ್ಯಕರ್ತರು ಇಂದು ದಕ್ಷಿಣ ವಿಭಾಗದ ಡಿಸಿಪಿ ಕಚೇರಿಗೆ ಬಂದು ಶರಣಾದರು. ಅಲ್ಲಿಂದ ವಿ.ವಿ.ಪುರಂ ಪೊಲೀಸರು ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆದು, ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ನಂತರ 24ನೇ ಎಸಿಎಂಎಂ ಕೋರ್ಟ್​ ಮುಂದೆ ಹಾಜರುಪಡಿಸಿದರು. ಇನ್ನು, ಕರವೇ ಕಾರ್ಯಕರ್ತರ ಹಲ್ಲೆ ಖಂಡಿಸಿ, ಪ್ರಧಾನಿಯವರ ಗಮನ ಸೆಳೆಯಲು ವೈದ್ಯರು ಪ್ರಧಾನಿಗೆ ಅಂಚೆ ಪತ್ರವನ್ನೂ ಬರೆದರು.

ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರ ಪ್ರತಿಭಟನೆ​ ವಾಪಸ್​

ಇದೇ ವೇಳೆ ಮಾತನಾಡಿದ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಎಲ್.ಎನ್. ರೆಡ್ಡಿ, ಇವತ್ತಿಗೆ ಈ ಕ್ಷಣದಲ್ಲಿ ಹೋರಾಟ ಹಿಂಪಡೆದಿದ್ದೇವೆ. ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ. ನಮಗೆ ಭದ್ರತೆಯನ್ನು ಕೊಡುತ್ತೇವೆ ಎಂದು ಸರ್ಕಾರದಿಂದಲೂ ಭರವಸೆ ಸಿಕ್ಕಿದ್ದು, ನಾವು ಮುಷ್ಕರ ವಾಪಸ್​​ ಪಡೆಯುತ್ತಿದ್ದೇವೆ ಅಂತಾ ತಿಳಿಸಿದರು.

ನಂತರ ಮಾತನಾಡಿದ ಬೆಂಗಳೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ಜಯಂತಿ ಅವರು, ಕಿರಿಯ ವೈದ್ಯರ ಬೇಡಿಕೆಯಂತೆ ಸುರಕ್ಷತೆ ದೃಷ್ಟಿಯಿಂದ ಎಲ್ಲ ಕಡೆಯಲ್ಲೂ ಸಿಸಿಟಿವಿ ಅಳವಡಿಸಲಾಗುವುದು. ವೈದ್ಯರ ರಕ್ಷಣಾ ಪಡೆಗಳನ್ನು ನಿಯೋಜಿಸಬೇಕು ಎನ್ನುವುದು ಸೇರಿದಂತೆ ಕಿರಿಯ ವೈದ್ಯರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಹೇಳಿದ್ರು.

Intro:ಅಂತೂ ಪ್ರತಿಭಟನೆ ಕೈಬಿಟ್ಟ ಕಿರಿಯ ವೈದ್ಯರು..

ಬೆಂಗಳೂರು: ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರ ಪ್ರತಿಭಟನೆ ಸತತ 8 ದಿನಗಳ ನಂತರ ಇಂದು ಅಂತ್ಯವಾಗಿದೆ.. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಸ್ವಯಂ ಪೊಲೀಸರಿಗೆ ಶರಣಾದ ಹಿನ್ನೆಲೆ ಸತತ ಮೂರು ತಾಸಿಗೂ ಹೆಚ್ಚು ಸಮಯ ಸಭೆ ನಡೆಸಿ, ಬಳಿಕ ಮಾಧ್ಯಮಗಳ ಮುಂದೆ ಬಂದು ಪ್ರತಿಭಟನೆ ಹಿಂಪಡೆಯಲಾಗಿದೆ ಅಂತ ತಿಳಿಸಿದರು.‌

ಕಳೆದ ಎಂಟು ದಿನಗಳಿಂದ ಕಿರಿಯ ಹಾಗೂ ತರಬೇತಿ ವೈದ್ಯರ ಪ್ರತಿಭಟನೆಯ ಕಿಚ್ಚು ಹೆಚ್ಚಾಗ್ತಿದ್ದಂತೆ, ಕರವೇ ಕಾರ್ಯಕರ್ತರು ಇವತ್ತು ದಕ್ಷಿಣ ವಿಭಾಗದ ಡಿಸಿಪಿ ಕಛೇರಿಗೆ ಬಂದು ಶರಣಾದ್ರು. ಅಲ್ಲಿಂದ ವಿವಿಪುರಂ ಪೊಲೀಸರು ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆದು, ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ರು. ನಂತರ ೨೪ನೇ ಎಸಿಎಂಎಂ ಕೋಟ್೯ ಮುಂದೆ ಹಾಜರುಪಡಿಸಿದ್ರು. ಇನ್ನೂ ಕರವೇ ಕಾರ್ಯಕರ್ತರ ಹಲ್ಲೆ ಖಂಡಿಸಿ, ಪ್ರಧಾನಿಯ ಗಮನ ಸೆಳೆಯಲು ವೈದ್ಯರು ಪ್ರಧಾನಿಗೆ ಅಂಚೆ ಪತ್ರವನ್ನೂ ಬರೆದರು..

ಇದೇ ವೇಳೆ ಮಾತಾನಾಡಿದ ಕಿರಿಯ ವೈದ್ಯ ಸಂಘದ ಅಧ್ಯಕ್ಷ ಎಲ್.ಎನ್ ರೆಡ್ಡಿ, ಇವತ್ತಿಗೆ ಈ ಕ್ಷಣದಲ್ಲಿ ಹೋರಾಟ ಹಿಂಪಡೆದಿದ್ದೇವೆ.. ಕರವೇ ಕಾರ್ಯಕರ್ತರು ಅರೆಸ್ಟ್ ಆಗಿದ್ದಾರೆ.. ನಮಗೆ ಭದ್ರತೆಯನ್ನು ಕೊಡುತ್ತೇವೆ ಎಂದು ಸರ್ಕಾರದಿಂದಲೂ ಭರವಸೆ ಬಂದಿದೆ.. ಈ‌ ಹಿನ್ನಲೆ ನಾವು ಮುಷ್ಕರ ವಾಪಸ್ಸು ಪಡೆಯುತ್ತಿದ್ದೇವೆ ಅಂತ ತಿಳಿಸಿದರು..‌

ನಂತರ ಮಾತಾನಾಡಿದ ಬೆಂಗಳೂರು ಮೆಡಿಕಲ್ ಕಾಲೇಜುನ ಡೀನ್ ಡಾ ಜಯಂತಿ, ಕಿರಿಯ ವೈದ್ಯರ ಬೇಡಿಕೆಯಂತೆ ಸುರಕ್ಷತೆ ದೃಷ್ಟಿಯಿಂದ ಎಲ್ಲ ಕಡೆಯಲ್ಲೂ ಸಿಸಿ ಟಿವಿ ಹಾಕಲಾಗುವುದು..
ವೈದ್ಯರ ರಕ್ಷಣೆಗೆ ಪಡೆಗಳ ನಿಯೋಜನೆ ಮಾಡಲಾಗುವುದು ಕಿರಿಯ ವೈದ್ಯರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗಿದೆ ಅಂತ ತಿಳಿಸಿದರು..

ಕೊನೆಗೂ, ಕರವೇ ವರ್ಸಸ್ ಡಾಕ್ಟರ್ ಕಿತ್ತಾಟ ಅಂತ್ಯವಾಗಿದೆ. ಆದರೆ ಇವರಿಬ್ಬರ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು,ಮಾತ್ರ ರೋಗಿಗಳು.. ಚಿಕಿತ್ಸೆಯಿಲ್ಲದೆ ಪರದಾಡಿದ್ದಂತೂ ಸತ್ಯ.

ಬೈಟ್: ಕೆ. ಎನ್ ರೆಡ್ಡಿ, ಅಧ್ಯಕ್ಷ, ವಿದ್ಯಾರ್ಥಿ ವೈದ್ಯಕೀಯ ಸಂಘ

ಬೈಟ್: ಡಾ‌ ಜಯಂತಿ, ಬೆಂಗಳೂರು ಮೆಡಿಕಲ್ ಕಾಲೇಜು ಡೀನ್

KN_BNG_5_END_DOCTORS_PROTEST_SCRIPT_7201801
Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.