ETV Bharat / state

ಹುಡುಗಿಗೆ 18 ತುಂಬುವವರೆಗೂ ಕಾದು ಮದ್ವೆಯಾದ; ತಾನು ಅಪ್ರಾಪ್ತ ಎಂಬುದನ್ನು ಮರೆತಿದ್ದ!

ಅಪ್ರಾಪ್ತನೋರ್ವ ಯುವತಿಯನ್ನು ಮದುವೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಮದುವೆಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ತಿಳಿಸಿರುವ ಪೊಲೀಸರು ಆರೋಪಿಗಳನ್ನು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಬಂಧಿಸಿದ್ದಾರೆ.

minor-who-married-a-young-woman-in-bengaluru
ಹುಡುಗಿಗೆ 18 ತುಂಬುವರೆಗೂ ಕಾದು ಮದುವೆಯಾದ... ಆದರೆ ತಾನೇ ಅಪ್ರಾಪ್ತ ಎಂಬುದನ್ನು ಮರೆತಿದ್ದ! ಮುಂದಾಗಿದ್ದೇನು ?
author img

By

Published : Dec 29, 2022, 9:51 PM IST

ಬೆಂಗಳೂರು : ಸಾಮಾನ್ಯವಾಗಿ ಯುವತಿಗೆ 18 ವರ್ಷ ಆಗಿಲ್ಲ ಎಂದು ಮದುವೆ ರದ್ದಾಗಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಇಲ್ಲೊಂದು ಅಪರೂಪದ ಘಟನೆ ನಡೆದಿದೆ. ಹುಡುಗನಿಗೆ ಮದುವೆ ವಯಸ್ಸು ತುಂಬಿಲ್ಲ ಎಂಬ ಕಾರಣಕ್ಕೆ ಇಬ್ಬರ ವಿವಾಹ ಕಾನೂನುಬಾಹಿರವಾಗಿದೆ. ಬಾಲ್ಯವಿವಾಹ ಮಾಡಿಸಿದ ಆರೋಪದಡಿ ಅಪ್ರಾಪ್ತನ ಸಹೋದರಿ ಹಾಗೂ ಆಕೆಯ ಸ್ನೇಹಿತನನ್ನು ಅಶೋಕನಗರ ಪೊಲೀಸರು ಬಂಧಿಸಿ ಠಾಣಾ ಜಾಮೀನು ಮೇರೆಗೆ ಬಿಟ್ಟು ಕಳುಹಿಸಿದ್ದಾರೆ.

ಘಟನೆಯ ಸಂಪೂರ್ಣ ವಿವರ: ನೀಲಸಂದ್ರದಲ್ಲಿ ವಾಸವಾಗಿದ್ದ ಬಾಲಕ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಯುವತಿ ಕೂಡ ಇದೇ ಪ್ರದೇಶದಲ್ಲಿ ವಾಸವಾಗಿದ್ದಳು‌. ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಪರಸ್ಪರ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.‌ ಯುವತಿಗೆ 18 ವರ್ಷ ಆಗುವವರೆಗೆ ಕಾದ ಅಪ್ರಾಪ್ತ, ಮನೆಯವರ ವಿರೋಧ‌ದ ನಡುವೆಯೂ ಕಳೆದ ನ.4 ರಂದು ತಮಿಳುನಾಡಿನ ತಿರುವಳ್ಳೂರು ಓಡಿಹೋಗಿ ಮದುವೆ ಮಾಡಿಕೊಂಡಿದ್ದರು‌.

ಇತ್ತ ಯುವತಿ ನಾಪತ್ತೆಯಾಗಿರುವ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿ ಯುವಕನ ಬಗ್ಗೆ ಮಾಹಿತಿ ನೀಡಿದ್ದರು.‌ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ‌‌ ಪೊಲೀಸರು ಇದೇ ಡಿಸೆಂಬರ್ 23ರಂದು ತಿರಿವಳ್ಳೂರಿನಲ್ಲಿ ಇಬ್ಬರನ್ನು ಪತ್ತೆ ಹಚ್ಚಿ‌ ನಗರಕ್ಕೆ‌ ಕರೆತಂದಿದ್ದರು.

ಯುವತಿಯ ಒಪ್ಪಿಗೆ ಪಡೆದೇ ಮದುವೆ- ಅಪ್ರಾಪ್ತನ ವಾದ: ಪೊಲೀಸ್ ವಿಚಾರಣೆಯ ವೇಳೆ ಕಾನೂನು ಪ್ರಕಾರವೇ ಯುವತಿ ಒಪ್ಪಿಗೆ ಪಡೆದೇ ಮದುವೆಯಾಗಿದ್ದೇನೆ ಎಂದು ಯುವಕ ವಾದಿಸಿದ್ದ. ಯುವತಿಯೂ ಪ್ರಿಯಕರ‌ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಳು. ಇಬ್ಬರ ಆಧಾರ್ ಕಾರ್ಡ್ ತರಿಸಿಕೊಂಡು ಪರಿಶೀಲಿಸಿದಾಗ ಪೊಲೀಸರಿಗೆ ಆಶ್ಚರ್ಯ ಕಾದಿತ್ತು.‌ ಹುಡುಗಿಗೆ 18 ವರ್ಷ ತುಂಬಿದ್ದರೆ ಹುಡುಗನಿಗೆ 20 ವರ್ಷ 6 ತಿಂಗಳು ಮಾತ್ರ ಆಗಿತ್ತು‌.

ಕಾನೂನು ಪ್ರಕಾರ ಮದುವೆ ಮಾಡಿಕೊಳ್ಳಲು ಹುಡುಗನ ವಯಸ್ಸು 21 ಆಗಿರಬೇಕು. ಹೀಗಾಗಿ ಇಬ್ಬರ ನಡುವಿನ ವಿವಾಹಕ್ಕೆ ಕಾನೂನು ಮಾನ್ಯತೆಯಿಲ್ಲ.‌ ಇವರನ್ನು ಮದುವೆ ಮಾಡಿಸಿದ ಆರೋಪದಡಿ ಹುಡುಗನ ಅಕ್ಕ ಹಾಗೂ ಸ್ನೇಹಿತನನ್ನು ಬಾಲ್ಯವಿವಾಹ ತಡೆ ಕಾಯ್ದೆಯಡಿ ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಬಿಟ್ಟುಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮೂರನೇ ಮದುವೆಯಾದರೂ ಎರಡನೇ ಗಂಡನ ಜೊತೆ ಸಂಬಂಧ; ಹೆಂಡತಿ ಕೊಂದು ಶವದ ಜೊತೆ ರಾತ್ರಿ ಕಳೆದ ಗಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.