ETV Bharat / state

BJP ಹೈಕಮಾಂಡ್​​​ ಬ್ಯಾಲೆನ್ಸಿಂಗ್ ಕ್ಯಾಬಿನೆಟ್ ಫಾರ್ಮುಲಾ: ಯುವ ನಾಯಕರಿಗೆ ಅವಕಾಶ ಸಾಧ್ಯತೆ

ರಾಜ್ಯ ಸಚಿವ ಸಂಪುಟ ರಚನೆ ಕಸರತ್ತು ಕ್ಲೈಮ್ಯಾಕ್ಸ್ ಹಂತ ತಲುಪಿದೆ, ಬಹುತೇಕ ಇಂದು ಸಂಜೆಯೇ ಪಟ್ಟಿ ಅಂತಿಮವಾಗಲಿದೆ. ನಾಲ್ಕು ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯೊಂದಿಗೆ ಸಂಪುಟ ರಚನೆಗೆ ಹೈಕಮಾಂಡ್ ಅನುಮತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

author img

By

Published : Aug 2, 2021, 4:32 PM IST

Updated : Aug 2, 2021, 4:54 PM IST

ministry-for-youths-in-cm-basavaraj-bommai-cabinet
ಬೊಮ್ಮಾಯಿ ಕ್ಯಾಬಿನೆಟ್ ರಚನೆ

ಬೆಂಗಳೂರು: ರಾಜ್ಯದಲ್ಲಿ ಬ್ಯಾಲೆನ್ಸಿಂಗ್ ಕ್ಯಾಬಿನೆಟ್ ರಚನೆ ಮಾಡುವ ಕುರಿತು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ಸಮತೋಲಿತ ಸಂಪುಟ ರಚನೆಗೆ ಒಲವು ಹೊಂದಿದೆ. ಮುಂಬರಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಹಳಬರು, ವಲಸಿಗರು ಮತ್ತು ಹೊಸ ಮುಖಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಆಪ್ತರನ್ನು ಕಡೆಗಣಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡಿರುವ ಹೈಕಮಾಂಡ್ ಬಿಎಸ್​​ವೈ ವಿಶ್ವಾಸಕ್ಕೆ ಪಡೆದುಕೊಂಡೇ ಸಂಪುಟ ರಚನೆ ಅಂತಿಮಗೊಳಿಸುತ್ತಿದೆ ಎನ್ನಲಾಗಿದೆ. ಪ್ರಾದೇಶಿಕ ಸಮತೋಲನ, ಹಳಬರು, ವಲಸಿಗರು, ಹೊಸಬರನ್ನು ಹೊಂದಿದ ಸಮತೋಲಿತ ಕ್ಯಾಬಿನೆಟ್ ರಚಿಸಿ ಅತೃಪ್ತಿಯ ಹೊಗೆ ಹೆಚ್ಚಿನ ಮಟ್ಟದಲ್ಲಿ ಆಗದಂತೆ ನೋಡಿಕೊಳ್ಳಲು ಮುಂದಾಗಿದೆ.

ಯಡಿಯೂರಪ್ಪ ಸಂಪುಟದಲ್ಲಿ ಮೂರು ಡಿಸಿಎಂ ಹುದ್ದೆಗಳಿದ್ದವು ಆದರೆ. ಈಗ ಬೊಮ್ಮಾಯಿ ಸಂಪುಟದಲ್ಲಿ ನಾಲ್ಕು ಹುದ್ದೆ ಸೃಷ್ಟಿಸಲು ಹೈಕಮಾಂಡ್ ನಿರ್ಧರಿಸಿದ್ದು, ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಸಿಕ್ಕಿರುವ ಹಿನ್ನೆಲೆಯಲ್ಲಿ ಇತರ ವರ್ಗಕ್ಕೆ ಡಿಸಿಎಂ ನೀಡಲಾಗುತ್ತದೆ.

ಪ್ರಬಲ ಒಕ್ಕಲಿಗ ಸಮುದಾಯದಿಂದ ಆರ್.ಅಶೋಕ್, ಬಳ್ಳಾರಿ, ಚಿತ್ರುದುರ್ಗ, ರಾಯಚೂರು, ಬೆಳಗಾವಿ ಭಾಗದಲ್ಲಿ ಪ್ರಬಲವಾಗಿರುವ ವಾಲ್ಮೀಕಿ ಸಮುದಾಯದ ಶ್ರೀರಾಮುಲು, ಹಿಂದುಳಿದ ವರ್ಗದಿಂದ ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ ಹಾಗೂ ದಲಿತ ಸಮುದಾಯದಿಂದ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಸ್ಥಾನ ನೀಡಲಾಗುತ್ತದೆ, ಆ ಮೂಲಕ ಲಿಂಗಾಯತ, ಒಕ್ಕಲಿಗ, ಹಿಂದುಳಿದ, ದಲಿತ ಸಮುದಾಯಕ್ಕೆ ಆದ್ಯತೆ ನೀಡಿ ಸಂಪುಟದಲ್ಲಿ ಇತರ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಯಡಿಯೂರಪ್ಪ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ ಇತ್ತು ಎನ್ನುವ ಆರೋಪ ಕೇಳಿಬಂದಿತ್ತು. ಈಗ ಬೊಮ್ಮಾಯಿ ಸಂಪುಟದಲ್ಲಿ ಈ ಅಸಮತೋಲನ ಆಗದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.‌ ರಾಜ್ಯದ ಎಲ್ಲ ಜಿಲ್ಲೆಗೆ ಅವಕಾಶ ಸಿಗದೇ ಇದ್ದರೂ ಎಲ್ಲ ಭಾಗಕ್ಕೂ ಅವಕಾಶ ನೀಡಿ ನ್ಯಾಯವೊದಗಿಸಬೇಕು ಎನ್ನುವ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಯುವ ನಾಯಕರ ಸೃಷ್ಟಿ: ಯಡಿಯೂರಪ್ಪ ಸಂಪುಟದಲ್ಲಿದ್ದ ಹಿರಿಯರಲ್ಲಿ ಕೆಲವರನ್ನು ಕೈಬಿಡಲು ನಿರ್ಧರಿಸಲಾಗಿದೆ. ಪಕ್ಷದಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ನೀಡದಿರುವ ನಿಯಮವಿದ್ದು, ಅದರಂತೆ ಮುಂದಿನ ಚುನಾವಣೆಯಲ್ಲಿ 75 ವರ್ಷ ದಾಟುವ ಅಥವಾ ಅದರ ಸಮೀಪಕ್ಕೆ ಬಂದು ನಿಲ್ಲುವ ಕೆಲ ನಾಯಕರಿಗೆ ಈಗಲೇ ಸಂಪುಟದಿಂದ ಹೊರಗಿಡುವ ನಿರ್ಧಾರ ಮಾಡಲಾಗಿದೆ. ಕೆಲ ಹಿರಿಯರನ್ನು ಬಿಟ್ಟು ಕಿರಿಯರಿಗೆ ಅವಕಾಶ ಕಲ್ಪಿಸಿ ಮುಂಬರಲಿರುವ ಚುನಾವಣೆಗೆ ನಾಯಕರನ್ನು ರೂಪಿಸಬೇಕು ಎನ್ನುವುದು ಹೈಕಮಾಂಡ್ ಲೆಕ್ಕಾಚಾರವಾಗಿದೆ.

ಬಿಎಸ್​ವೈ ಆಪ್ತರಿಗೆ ಮಣೆ: ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶಾಸಕರಲ್ಲಿ ಕೆಲವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಹೈಕಮಾಂಡ್ ಅನುಮತಿ ನೀಡಲಿದೆ ಆ ಮೂಲಕ ಯಡಿಯೂರಪ್ಪ ವಿಶ್ವಾಸ ಪಡೆದುಕೊಂಡು ಉಳಿದಂತೆ ಸಂಪುಟ ರಚನೆಯಲ್ಲಿ ತಮ್ಮ ತಂತ್ರಗಾರಿಕೆಯಂತೆ ನಿರ್ಧಾರ ಕೈಗೊಳ್ಳಲಿದೆ.

ಹಳಬರು, ವಲಸಿಗರಿಗೆ ಕೋಕ್: ಯಡಿಯೂರಪ್ಪ ಸಂಪುಟದಲ್ಲಿದ್ದ ಕೆಲ ಸಚಿವರಿಗೆ ಕಮ್ ಬ್ಯಾಕ್ ಕಷ್ಟ ಎನ್ನುವಂತಾಗಿದೆ. ಇಲಾಖೆಯಲ್ಲಿ ಕಳಪೆ ಸಾಧನೆ ಮಾಡಿದವರು, ಹಗರಣಗಳ ಆರೋಪ ಎದುರಿಸಿದವರನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ. ಮೂಲ ಬಿಜೆಪಿಗರಲ್ಲಿಯೂ ಕೆಲ ಸಚಿವರು ಈ ಪಟ್ಟಿಗೆ ಬರಲಿದ್ದು, ವಲಸಿಗರಲ್ಲಿಯೂ ಕೆಲವರು ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ವಲಸಿಗರಿಗೆ ಯಡಿಯೂರಪ್ಪ ಅಭಯ ನೀಡಿದ್ದರೂ ಕಳಪೆ ಸಾಧನೆ ವಲಸಿಗರ ಕೈಹಿಡಿಯುವುದು ಕಷ್ಟವಾಗುವಂತೆ ಮಾಡಿದೆ.

ಹೊಸಬರಿಗೆ ಮಣೆ: ಸತತವಾಗಿ ಗೆದ್ದು ಒಮ್ಮೆಯೂ ಸಚಿವರಾಗದ ಆರಗ ಜ್ಞಾನೇಂದ್ರರಂತಹ ಪಕ್ಷ ನಿಷ್ಟ ಶಾಸಕರು, ಪಿ.ರಾಜೀವ್, ಅರವಿಂದ ಬೆಲ್ಲದ್ ರಂತಹ ಯುವ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಮತಗಳನ್ನು ಸೆಳೆಯುವಂತ ಲೀಡರ್ ಗಳಾಗುವ ಶಕ್ತಿ ಹಾಗೂ ವರ್ಚಸ್ಸು ಕಾಣಿಸುವಂತಹ ಯುವ ಪಡೆಗೆ ಸಂಪುಟದಲ್ಲಿ ಜಾಗ ಕೊಡಲಾಗುತ್ತದೆ ಎನ್ನಲಾಗಿದೆ.

ಒಟ್ಟಿನಲ್ಲಿ ಹೈಕಮಾಂಡ್ ನ ಬ್ಯಾಲೆನ್ಸಿಂಗ್ ಕ್ಯಾಬಿನೆಟ್ ಸೂತ್ರದಿಂದಾಗಿ ಕೆಲ ಹಿರಿಯರು, ವಲಸಿಗರು ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಯುವ ನಾಯಕರಿಗೆ ಬಂಪರ್ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ. ಇಂದು ಸಂಜೆ ಅಥವಾ ರಾತ್ರಿ ಕ್ಯಾಬಿನೆಟ್ ಕುತೂಹಲಕ್ಕೆ ತೆರೆ ಬೀಳಲಿದೆ.

Last Updated : Aug 2, 2021, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.