ETV Bharat / state

ಪ್ರವಾಹ ಸಂತ್ರಸ್ತರ ನೋವಿಗಿಂತ ಸಚಿವರಿಗೆ ಉಪಚುನಾವಣಾ ಸಿದ್ಧತೆಯೇ ಮುಖ್ಯವಾಯ್ತಾ?!

author img

By

Published : Oct 23, 2019, 1:20 PM IST

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಪೂರ್ಣಪ್ರಮಾಣದ ನೆರವು ನೀಡದೇ ರಾಜ್ಯದ ಕಂದಾಯ ಸಚಿವರು ಚುನಾವಣಾ ಸಭೆಯಲ್ಲಿ ಫುಲ್ ಬ್ಯುಸಿಯಾಗಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಂದಾಯ ಸಚಿವ ಆರ್​.ಅಶೋಕ್

ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಜವಾಬ್ದಾರಿ ನಿಭಾಯಿಸಬೇಕಿದ್ದ ಕಂದಾಯ ಸಚಿವರು ಮಾತ್ರ ಚುನಾವಣಾ ಸಭೆಯಲ್ಲಿ ಫುಲ್ ಬ್ಯುಸಿಯಾಗಿದ್ದು, ಪಕ್ಷದ ಚಟುವಟಿಕೆಯಲ್ಲಿ ತೊಡಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಆಯೋಜಿಸಿರುವ ಉಪಚುನಾವಣಾ ಸಿದ್ಧತಾ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಭಾಗಿಯಾಗಿದ್ದಾರೆ. ಸಭೆ ಆರಂಭಕ್ಕೂ ಒಂದು ಗಂಟೆ ಮೊದಲೇ ಆಗಮಿಸಿ ಕಾದು ಕುಳಿತಿದ್ದರು.

ಕಂದಾಯ ಸಚಿವ ಆರ್​.ಅಶೋಕ್

ಸತತ ಎರಡನೇ ಬಾರಿಗೆ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆ ನಲುಗಿದರೂ ಬೆಳಗಾವಿ ಜಿಲ್ಲೆಯತ್ತ ತಲೆಹಾಕದ ಅಶೋಕ್ ಸಂತ್ರಸ್ತರನ್ನು ಮರೆತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕಂದಾಯ ಸಚಿವರದ್ದೇ ಇಲ್ಲಿ ಪ್ರಮುಖ ಪಾತ್ರವಾದರೂ ಅತ್ತ ಸುಳಿಯದೇ ಅಶೋಕ್ ಪಕ್ಷದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇನ್ನು ಪ್ರವಾಹ ಪೀಡಿತರ ನೆರವಿಗೆ ಸರ್ಕಾರದ ಜೊತೆ ಕೈ ಜೋಡಿಸಬೇಕಿರುವ ಆಡಳಿತ ಪಕ್ಷ ಚುನಾವಣೆ ಸಿದ್ಧತೆಯಲ್ಲಿ ಬ್ಯುಸಿಯಾಗಿದೆ. ಜನರ ಕಷ್ಟ ಆಲಿಸುವ ಬದಲು ಚುನಾವಣೆ ಗೆಲ್ಲುವುದಕ್ಕೆ ಆದ್ಯತೆ ಕೊಟ್ಟಿರುವ ಆರೋಪಕ್ಕೆ ಸಿಲುಕಿದೆ.

Intro:

ಬೆಂಗಳೂರು: ಪ್ರವಾಹದಲ್ಲಿ ಮುಳುಗಿರುವ ಉತ್ತರ ಕರ್ನಾಟಕ ಸರ್ಕಾರದ ನೆರವಿ ನಿರೀಕ್ಷೆಯಲ್ಲಿದ್ದರೆ ಗುರುತರ ಜವಾಬ್ದಾರಿ ಹೊರಬೇಕಾದ ಕಂದಾಯ ಸಚಿವರು ಮಾತ್ರ ಚುನಾವಣಾ ಸಭೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿ ಜನರ ಕಷ್ಟಕ್ಕೆ ನೆರವಾಗುವ ಬದಲು ಪಕ್ಷದ ಚಟುವಟಿಕೆಯಲ್ಲಿ ತೊಡಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವದನಲ್ಲಿ ಆಯೋಜಿಸಿರುವ ಉಪಚುನಾವಣಾ ಸಿದ್ದತಾ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಭಾಗಿಯಾಗಿದ್ದಾರೆ. ಸಭೆ ಆರಂಭಕ್ಕೂ ಒಂದು ಗಂಟೆ ಮೊದಲೇ ಆಗಮಿಸಿ ಸಭೆಗಾಗಿ ಕಾದು ಕುಳಿತಿದ್ದಾರೆ.

ಸತತ ಎರಡನೇ ಬಾರಿಗೆ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆ ನಲುಗಿದರೂ ಬೆಳಗಾವಿ ಜಿಲ್ಲೆಯತ್ತ ತಲೆ ಹಾಕದ ಅಶೋಕ್ ಸಂತ್ರಸ್ತರನ್ನು ಮರೆತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಕಂದಾಯ ಸಚಿವರದ್ದೇ ಇಲ್ಲಿ ಪ್ರಮುಖ ಪಾತ್ರವಾದರೂ ಅತ್ತ ಸುಳಿಯದೇ ಅಶೋಕ್ ಪಕ್ಷದ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಇನ್ನು ಪ್ರವಾಹ ಪೀಡಿತರ ನೆರವಿಗೆ ಸರ್ಕಾರದ ಜೊತೆ ಕೈ ಜೋಡಿಸಬೇಕಿರುವ ಆಡಳಿತ ಪಕ್ಷ ಚುನಾವಣೆ ಸಿದ್ಧತೆಯಲ್ಲಿ ಬ್ಯುಸಿಯಾಗಿದೆ ಜನರ ಕಷ್ಟ ಆಲಿಸುವ ಬದಲು ಚುನಾವಣೆ ಗೆಲ್ಲುವುದಕ್ಕೆ ಆದ್ಯತೆ ಕೊಟ್ಟ ಆರೋಪಕ್ಕೆ ಸಿಲುಕಿದೆ.

ನಿನ್ನೆಯಷ್ಟೇ ಇಂದಿನಿಂದ ಸಚಿವರು ಮತ್ತು ಡಿಸಿಗಳು ನೆರೆ ಪೀಡಿತ ಪ್ರದೇಶಗಳಲ್ಲಿ ಭೇಟಿ ಕೊಟ್ಟು ವಾಸ್ತವ್ಯ ಹೂಡುವುದಾಗಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆ ನೀಡಿದ್ದರು ಆದರೆ ಅದನ್ನು ಮರೆತು ಪಕ್ಷದ ಸಭೆಯಲ್ಲಿ ನಿರತರಾಗಿದ್ದಾರೆ.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.