ETV Bharat / state

ಐಎಂಎ ಜ್ಯುವೆಲರ್ಸ್​ ಪ್ರಕರಣ: ಸಚಿವರು, ಶಾಸಕರಿಂದ ಗೃಹ ಸಚಿವರ ಭೇಟಿ, ಚರ್ಚೆ

ಐಎಂಎ ಜ್ಯುವೆಲರ್ಸ್​ನಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣ ಸಂಬಂಧ ಶಾಸಕರು, ಸಚಿವರು ಗೃಹ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಅಲ್ಪಸಂಖ್ಯಾತ ಸಚಿವರು, ಶಾಸಕರಿಂದ ಗೃಹ ಸಚಿವರ ಭೇಟಿ
author img

By

Published : Jun 11, 2019, 7:00 PM IST

ಬೆಂಗಳೂರು: ಐಎಂಎ ಜ್ಯುವೆಲರ್ಸ್​ನಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣ ಸಂಬಂಧ ಶಾಸಕರು, ಸಚಿವರು ಗೃಹ ಸಚಿವರನ್ನು ಭೇಟಿ ಮಾಡಿ ಕೆಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.

ಗೃಹ ಸಚಿವ ಎಂ.ಬಿ.ಪಾಟೀಲರ ಸದಾಶಿವನಗರದ ನಿವಾಸದಲ್ಲಿ ಸಭೆ ನಡೆಯಿತು. ಸಚಿವ ಜಮೀರ್ ಅಹ್ಮದ್ ಖಾನ್​, ಶಾಸಕ ಎನ್.ಎ.ಹ್ಯಾರಿಸ್, ರಿಜ್ವಾನ್ ಅರ್ಷದ್, ನಾಸೀರ್ ಅಹ್ಮದ್ ಸೇರಿ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಆಂಬಿಡೆಂಟ್, ಐಎಂಎ ಎರಡೂ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಮೋಸವಾಗಿದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಜನರಿಗೆ ವಂಚನೆ ಎಸಗಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ನಾಯಕರು ಗೃಹ ಸಚಿವ ಎಂ.ಬಿ.ಪಾಟೀಲ್​​ಗೆ ಮಾಹಿತಿ ಒದಗಿಸಿದರು. ತನಿಖೆಯನ್ನು ಸೂಕ್ತವಾಗಿ ನಡೆಸಿ ನ್ಯಾಯ ಕೊಡಿಸುವಂತೆ ಒತ್ತಡ ಹೇರಿದರು.

ಅಲ್ಪಸಂಖ್ಯಾತ ಸಮುದಾಯದ ಸಚಿವರು, ಶಾಸಕರಿಂದ ಗೃಹ ಸಚಿವರ ಭೇಟಿ

ಐಎಂಎ ಜ್ಯುವೆಲರ್ಸ್ ಪ್ರಕರಣ ಸಂಬಂಧ ಗೃಹ ಸಚಿವ ಎಂಬಿಪಿ ಭೇಟಿ ಬಳಿಕ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಮುಸ್ಲಿಂ ಫೆಡರೇಷನ್‌ ಮುಖಂಡರೆಲ್ಲ ಭೇಟಿಯಾಗಿದ್ದೇವೆ. ಪಾಪ ಬಡವರೆಲ್ಲ ಜೀವನ ಚೆನ್ನಾಗಿರುತ್ತೆ ಅಂತಾ ಹಣ ಹಾಕಿದ್ರು. ಇದಕ್ಕೆ ಎಸ್​​ಐಟಿ ರಚನೆ ಮಾಡಿ ಅಂತ ಹೇಳಿದ್ದೇವೆ. ಚಿನ್ನ, ಬೆಳ್ಳಿ, ಡೈಮಂಡ್ ಆಸ್ತಿಗಳನ್ನು ಸರ್ಕಾರ ಜಪ್ತಿ ಮಾಡಲಿ. ಐಪಿಎಸ್ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಿ ಎಂದು ಒತ್ತಾಯಿಸಿದ್ದೇವೆ. ತಪ್ಪಿತಸ್ಥರು ಯಾರು ಅನ್ನೋದು ಗೊತ್ತಾಗಲಿ ಎಂದರು. ಇದರ ಹಿಂದೆ ಯಾರಾದ್ರೂ ಇರಲಿ ಅದರಲ್ಲಿ ಭಾಗಿಯಾದವರು ಯಾರೇ ಆಗಿರಲಿ ತನಿಖೆ ಆಗಲಿ. ಐಎಂಎ ಜ್ಯುವೆಲರ್ಸ್ ಮಾಲೀಕ 2018ರ ತನಕ ನನಗೆ ಯಾರು ಅಂತ ಗೊತ್ತಿರಲಿಲ್ಲ. ಇಫ್ತಿಯಾರ್ ಕೂಟಕ್ಕೆ ಕರೆದಿದ್ದರು, ಹೋಗಿದ್ದೆ. ಇದರ ಹಿಂದೆ ಯಾರೇ ದೊಡ್ಡ ರಾಜಕಾರಣಿ ಇರಲಿ ಬಿಡಬಾರದು ಎಂದರು. ಎಸ್​ಐಟಿ ತನಿಖೆಗೆ ಸಚಿವರು, ಶಾಸಕರು ಒತ್ತಾಯಿಸಿದ್ದು, ತನಿಖೆ ತೃಪ್ತಿ ತರದೇ ಹೋದರೆ ಉನ್ನತ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಒತ್ತಾಯ ಮಾಡಿದ್ದಾರೆ.

Intro:newsBody:
ಗೃಹ ಸಚಿವರನ್ನು ಭೇಟಿಯಾಗಿ ಚರ್ಚಿಸಿದ ಅಲ್ಪಸಂಖ್ಯಾತ ಸಚಿವರು, ಶಾಸಕರು

ಬೆಂಗಳೂರು: ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ ಸಂಬಂಧ ಅಲ್ಪ ಸಂಖ್ಯಾತ ಶಾಸಕರು, ಸಚಿವರಿಂದ ಗೃಹ ಸಚಿವರ ಭೇಟಿ ಹಾಗೂ ಕೆಲವು ವಿಚಾರಗಳ ಕುರಿತು ಚರ್ಚೆ ನಡೆಯಿತು.
ಗೃಹ ಸಚಿವ ಎಂ.ಬಿ. ಪಾಟೀಲರ ಸದಾಶಿವನಗರದ ನಿವಾಸದಲ್ಲಿ ಸಭೆ ನಡೆಯಿತು, ಸಚಿವ ಝಮೀರ್ ಅಹ್ಮದ್, ಶಾಸಕ ಎನ್ ಎ ಹ್ಯಾರಿಸ್, ರಿಜ್ವಾನ್ ಅರ್ಷದ್, ನಾಸೀರ್ ಅಹ್ಮದ್ ಸೇರಿ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಆಂಬಿಡೆಂಟ್, ಐಎಂಎ ಎರಡೂ ಪ್ರಕರಣಗಳಲ್ಲಿ ಅಲ್ಪಸಂಖ್ಯಾತ ರಿಗೆ ಹೆಚ್ಚಿನ ಮೋಸವಾಗಿದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಜನರಿಗೆ ವಂಚನೆ ಎಸಗಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ನಾಯಕರು ಗೃಹ ಸಚಿವ ಎಂಬಿ ಪಾಟೀಲ್ ಗೆ ಮಾಹಿತಿ ಒದಗಿಸಿದರು. ತನಿಖೆಯನ್ನು ಸೂಕ್ತವಾಗಿ ನಡೆಸಿ ನ್ಯಾಯ ಕೊಡಿಸುವಂತೆ ಒತ್ತಡ ಹೇರಿದರು.
ಈ ಹಿನ್ನೆಲೆ ಗೃಹ ಸಚಿವರು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಡಿಜಿ ಐಜಿಯವರಿಗೂ ಸಭೆಗೆ ಸೂಚನೆ ನೀಡಿದ್ದರು. ಈ ಹಿನ್ನೆ ಸಂಜೆ ವಿಧಾನಸೌಧದಲ್ಲಿ ಸಭೆ ನಡೆದಿದೆ.
ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ ಸಂಬಂಧ ಗೃಹ ಸಚಿವ ಎಂಬಿಪಿ ಭೇಟಿ ಬಳಿಕ ಮಾತನಾಡಿದ ಸಚಿವ ಝಮೀರ್ ಅಹ್ಮದ್, ಮುಸ್ಲಿಂ ಫೆಡರೇಷನ್‌ ಮುಖಂಡರೆಲ್ಲ ಭೇಟಿಯಾಗಿದ್ದೇವೆ. ಪಾಪ ಬಡವರೆಲ್ಲ ಜೀವನ ಚೆನ್ನಾಗಿರತ್ತೆ ಹಣ ಹಾಕಿದ್ರು. ಇದಕ್ಕೆ ಎಸ್ ಐ ಟಿ ರಚನೆ ಮಾಡಿ ಅಂತ ಹೇಳಿದ್ದೇವೆ. ಚಿನ್ನ, ಬೆಳ್ಳಿ, ಡೈಮಂಡ್ ಆಸ್ತಿಗಳನ್ನು ಸರ್ಕಾರ ಜಪ್ತಿ ಮಾಡಲಿ. ಐಪಿಎಸ್ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಿ ಎಂದು ಒತ್ತಾಯಿಸಿದ್ದೇವೆ. ಬೇಕಿದ್ರೆ ಆಮೇಲೆ ಸಿಬಿಐ ತನಿಖೆ ಮಾಡಲಿ ಎಲ್ಲ ಗೊತ್ತಾಗಿಬಿಡತ್ತೆ. ತಪ್ಪಿತಸ್ಥರ ಯಾರೂ ಅನ್ನೋದು ಗೊತ್ತಾಗಲಿ ಎಂದರು.
ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಸಿಗೋದು ಕಷ್ಟ. ಇವರು ಹೇಗೆ ಜಾಸ್ತಿ ಇಂಟರೆಸ್ಟ್ ಕೊಡ್ತಾರೆ? ಹೆಚ್ವಿನ ಸಂಖ್ಯೆಯಲ್ಲಿ ಅಂದರೆ ಇಲ್ಲಿ ಸುಮಾರು ಶೇ.80 ರಷ್ಟು ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ. ಇದರ ಹಿಂದೆ ಯಾರಾದ್ರೂ ಇರಲಿ ಅದರಲ್ಲಿ ಭಾಗಿಯಾದವರು ಯಾರೇ ಆಗಿರಲಿ ತನಿಖೆ ಆಗಲಿ. ಐಎಂಎ ಜ್ಯುವೆಲ್ಲರ್ಸ್ ಮಾಲೀಕ 2018ರ ತನಕ ನನಗೆ ಯಾರೂ ಅಂತ ಗೊತ್ತಿರಲಿಲ್ಲ. ಇಫ್ತಿಯಾರ್ ಕೂಟಕ್ಕೆ ಕರೆದಿದ್ದರು ಹೋಗಿದ್ದೆ. ಇದರ ಹಿಂದೆ ಯಾರೇ ದೊಡ್ಡ ರಾಜಕಾರಣಿಯೂ ಇರಲಿ ಬಿಡಬಾರದು ಎಂದರು.
ಎಸ್ ಐ ಟಿ ತನಿಖೆಗೆ ಮುಸ್ಲಿಂ ಸಚಿವರು, ಶಾಸಕರ ಒತ್ತಾಯ ಮಾಡಿದ್ದು, ಎಸ್ ಐ ಟಿ ತನಿಖೆ ತೃಪ್ತಿ ತರದೇ ಹೋದರೆ ಉನ್ನತ ತನಿಖೆ ನಡೆಸುವಂತೆ ಗೃಹಸಚಿವರಿಗೆ ಒತ್ತಾಯ ಮಾಡಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.