ಬೆಂಗಳೂರು: ಇನ್ಮುಂದೆ ವಸತಿ ಇಲಾಖೆಯಲ್ಲಿ ಗೋಲ್ಮಾಲ್ ನಡೆಯಲು ಬಿಡುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವಿಧಾನ ಸೌಧದಲ್ಲಿ ವಸತಿ ಇಲಾಖೆ ಕುರಿತ ಸಂಪುಟ ಉಪ ಸಮಿತಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ವಸತಿ ಇಲಾಖೆಯಲ್ಲಿ ಅರ್ಹರಿಗೆ ಮನೆ ಸಿಗಲಿ ಅನ್ನೋ ಕಾರಣಕ್ಕೆ ಸಮಿತಿ ರಚನೆ ಆಗಿದೆ. ವಿವಿಧ ಸಚಿವರನ್ನು ಒಳಗೊಂಡಂತೆ ಸಮಿತಿಯ ಮೊದಲ ಸಭೆ ನಡೆಸಿದ್ದೇವೆ. ಸೂರಿಲ್ಲದ ಬಡವರಿಗೆ ಮನೆ ಸಿಗಬೇಕು ಅನ್ನೋದೆ ನಮ್ಮ ಆಶಯ ಎಂದು ತಿಳಿಸಿದರು.
ಇನ್ಮುಂದೆ ವಸತಿ ಇಲಾಖೆಯಲ್ಲಿ ಗೋಲ್ಮಾಲ್ ನಡೆಯಲು ಬಿಡದೆ, ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದೇವೆ. ಒಂದೇ ಸೂರಿನಡಿ ಇಲಾಖೆಗೆ ಸೌಲಭ್ಯ ತರುವ ಮೂಲಕ ಅಕ್ರಮಕ್ಕೆ ಬ್ರೇಕ್ ಹಾಕುತ್ತೇವೆ ಎಂದರು.
ಇನ್ನು ಅರ್ಧ ಮನೆ ನಿರ್ಮಿಸಿದ ಹಲವು ಫಲಾನುಭವಿಗಳಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಈ ನಿಟ್ಟಿನಲ್ಲಿ ಎಲ್ಲರಿಗೂ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.