ಬೆಂಗಳೂರು : 'ಸಕಾಲ'ಕ್ಕೆ ಮೂರು ಅಡ್ಡಿಗಳಿವೆ. ಅರ್ಜಿ ಸ್ವೀಕರಿಸಲ್ಲ, ಅರ್ಜಿಯನ್ನು ಅಧಿಕಾರಿಗಳು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾಯಿಸುತ್ತಾರೆ, ಎರಡನೇಯದು ಅರ್ಜಿ ತಿರಸ್ಕರಿಸಲಾಗುತ್ತದೆ. ಹಾಗೂ ಮೂರನೆಯದು ವಿಳಂಬ ಧೋರಣೆ. ಇದನ್ನು ಸರಿಪಡಿಸಲು 'ಸಕಾಲ ಸಪ್ತಾಹ' ಆಚರಣೆ ಪ್ರಾರಂಭಿಸಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
'ಸಕಾಲ' ದಲ್ಲಿ ಮಂಡ್ಯ ಬೆಸ್ಟ್, ಬೆಂಗಳೂರು ಲಾಸ್ಟ್ : ಸಚಿವ ಸುರೇಶ್ ಕುಮಾರ್ - mandya is best in sakala impliment
ಸಕಾಲ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಸಕಾಲ ಮಾಹಿತಿ ನೀಡುವ ಬಗ್ಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕೋದು ಕಡ್ಡಾಯ. ಜನಸಾಮಾನ್ಯರಿಂದಲೂ ಫೀಡ್ ಬ್ಯಾಕ್ ಪಡೆಯೋದು ಕಡ್ಡಾಯ. ಜಿಲ್ಲಾಧಿಕಾರಿಗಳು ಮೇಲುಸ್ತುವಾರಿ ಮಾಡಿ ಪರಿಶೀಲನೆ ನಡೆಸುವುದು ಕಡ್ಡಾಯ..
ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿ
ಬೆಂಗಳೂರು : 'ಸಕಾಲ'ಕ್ಕೆ ಮೂರು ಅಡ್ಡಿಗಳಿವೆ. ಅರ್ಜಿ ಸ್ವೀಕರಿಸಲ್ಲ, ಅರ್ಜಿಯನ್ನು ಅಧಿಕಾರಿಗಳು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾಯಿಸುತ್ತಾರೆ, ಎರಡನೇಯದು ಅರ್ಜಿ ತಿರಸ್ಕರಿಸಲಾಗುತ್ತದೆ. ಹಾಗೂ ಮೂರನೆಯದು ವಿಳಂಬ ಧೋರಣೆ. ಇದನ್ನು ಸರಿಪಡಿಸಲು 'ಸಕಾಲ ಸಪ್ತಾಹ' ಆಚರಣೆ ಪ್ರಾರಂಭಿಸಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಮೊದಲ ಹಂತದಲ್ಲಿ ನಗರಾಭಿವೃದ್ದಿ ಇಲಾಖೆ ಹಾಗೂ ಎರಡನೆ ಹಂತದಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆಯನ್ನು ಕೈಗೆತ್ತಿಕೊಳ್ಳುತ್ತೇವೆ. ಇದುವರೆಗೆ 22 ಕೋಟಿಗೂ ಹೆಚ್ಚು ಅರ್ಜಿಗಳು ಬಂದಿವೆ. ಬಹುತೇಕ ಅಷ್ಟೂ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ.
ಸಕಾಲ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಸಕಾಲ ಮಾಹಿತಿ ನೀಡುವ ಬಗ್ಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕೋದು ಕಡ್ಡಾಯ. ಜನಸಾಮಾನ್ಯರಿಂದಲೂ ಫೀಡ್ ಬ್ಯಾಕ್ ಪಡೆಯೋದು ಕಡ್ಡಾಯ. ಜಿಲ್ಲಾಧಿಕಾರಿಗಳು ಮೇಲುಸ್ತುವಾರಿ ಮಾಡಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ವಿವರಿಸಿದರು.
'ಸಕಾಲ'ದಲ್ಲಿ ಮಂಡ್ಯ ಬೆಸ್ಟ್, ಬೆಂಗಳೂರು ಬ್ಯಾಡ್ : ಅಕ್ಟೋಬರ್‌ನಲ್ಲಿ ಸಕಾಲದಲ್ಲಿ ಮಂಡ್ಯ ಅತ್ಯುತ್ತಮ ನಿರ್ವಹಣೆ ತೋರಿದೆ. ಮಂಡ್ಯ ನಂಬರ್ ಒನ್ ಆಗಿ ಹೊರ ಹೊಮ್ಮಿದೆ. ಚಿಕ್ಕಮಗಳೂರು ಎರಡನೇ ಸ್ಥಾನ ಹಾಗೂ ಚಿಕ್ಕಬಳ್ಳಾಪುರ ಮೂರನೆ ಸ್ಥಾನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿವೆ ಎಂದರು. ಆದರೆ, ಸಕಾಲ ನಿರ್ವಹಣೆಯಲ್ಲಿ ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ.
ಬೆಂಗಳೂರು ನಗರ ಜಿಲ್ಲೆ ಕೊನೆ 30ನೇ ಸ್ಥಾನದಲ್ಲಿದೆ. 29ನೇ ಸ್ಥಾನದಲ್ಲಿ ಬೀದರ್ ಹಾಗೂ 28ನೇ ಸ್ಥಾನದಲ್ಲಿ ರಾಯಚೂರು ಜಿಲ್ಲೆ ಇದೆ. ಬೆಂಗಳೂರು ನಗರ ಜಿಲ್ಲೆ ಮತ್ತು ಕಂದಾಯ ಇಲಾಖೆಯಲ್ಲಿ ಅತಿ ಹೆಚ್ಚು ಅರ್ಜಿಗಳು ಸ್ವೀಕಾರವಾಗಿವೆ ಎಂದರು. ಸಕಾಲ ಸಂಬಂಧ ಸಾರ್ವಜನಿಕರು ಎಸ್ಎಂಎಸ್ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಆ ಮೂಲಕ ಸಕಾಲದಲ್ಲಿನ ಸಮಸ್ಯೆ ಬಗ್ಗೆ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.