ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಬೆಂಗಳೂರಿನ ಸಿ.ವಿ.ರಾಮನ್ ನಗರದಲ್ಲಿರುವ ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸಿಎಸ್ ನಿರ್ದೇಶಕರ ಕಾರ್ಯಾಲಯಕ್ಕೆ ಭೇಟಿ ನೀಡಿದರು.
ಸಂಸ್ಥೆ ಕೋವಿಡ್ ಚಿಕಿತ್ಸೆಗೆ ಅಭಿವೃದ್ಧಿಪಡಿಸಿರುವ 2-ಡಿಜಿ ಔಷಧ, ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಮೇಕ್ ಶಿಫ್ಟ್ ಹಾಸ್ಪಿಟಲ್ ಮತ್ತು ಆಕ್ಸಿಜನರೇಷನ್ ಪ್ಲಾಂಟ್ ಅಳವಡಿಕೆಗೆ ಸಂಬಂಧಿಸಿದಂತೆ ನಿರ್ದೇಶಕಿ ಮಂಜುಳಾ, ಡಿಇಬಿಇಎಲ್ ನಿರ್ದೇಶಕ ಡಾ. ಯು.ಕೆ.ಸಿಂಗ್, ಎಲ್ಆರ್ಡಿಇ ನಿರ್ದೇಶಕ ಪಿ.ರಾಧಾಕೃಷ್ಣ, ಎಸ್ಟೇಟ್ ಮ್ಯಾನೇಜರ್ ಜೆ.ಡಿ.ಜಿ.ಪ್ರಸಾದ್ ರಾಜು ಜತೆ ಸಮಾಲೋಚನೆ ನಡೆಸಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಸಾವಿನ ಮನೆಗೆ ತೆರಳಿದ್ದ 22 ಜನರಿಗೆ ಕೊರೊನಾ
ಹೊಸದಿಲ್ಲಿಯ ಕೇಂದ್ರ ಕಚೇರಿಯಿಂದ ಐಎನ್ಎಂಎಎಸ್ನ ಡಾ. ಅನಂತ ಭಟ್, ಸಿಸಿ ಅಂಡ್ ಆರ್ ಅಂಡ್ ಡಿ ವಿಭಾಗದ ಡಾ. ರಾಧಾಕೃಷ್ಣ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಾದ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ನಿರ್ದೇಶಕ ಓಂಪ್ರಕಾಶ್ ಪಾಟೀಲ್, ಡ್ರಗ್ಸ್ ಕಂಟ್ರೋಲ್ ಇಲಾಖೆಯ ಅಮರೇಶ್ ತುಂಬಗಿ, ನಗರ ಜಿಲ್ಲೆಯ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಪಾಲ್ಗೊಂಡಿದ್ದರು.