ETV Bharat / state

ಬ್ಲಾಕ್​ ಫಂಗಸ್​​ ಚುಚ್ಚುಮದ್ದಿಗೆ ಎಲ್ಲಿಲ್ಲದ ಬೇಡಿಕೆ : ತಜ್ಞರ ಸಭೆ ಕರೆದ ಸಚಿವ ಸುಧಾಕರ್ - ತಜ್ಞರ ಸಭೆ ಕರೆದ ಸಚಿವ ಸುಧಾಕರ್

ಕರ್ನಾಟಕ ಡ್ರಗ್ ಕಂಟ್ರೋಲ್ ರೂಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಬ್ಲಾಕ್ ಫಂಗಸ್ ರಾಜ್ಯಕ್ಕೆ ದಿಢೀರ್​ ಆಗಿ ಕಾಣಿಸಿಕೊಂಡಿರುವುದರಿಂದ ಸಮಸ್ಯೆ ಎದುರಾಗಿದೆ. ಬೇಡಿಕೆ ಜಾಸ್ತಿ ಆಗಿರುವ ಹಿನ್ನೆಲೆ ಇಂಜೆಕ್ಷನ್ ಎಲ್ಲೂ ಸಿಗುತ್ತಿಲ್ಲ. ಕೆಲವು ಖಾಸಗಿ ಕಂಪನಿಗಳಲ್ಲಿ ಲಭ್ಯವಿರುವ ಬಗ್ಗೆ ಪರಿಶೀಲಿಸುತ್ತಿದ್ದು, ಇಂದು ರಾಜ್ಯಕ್ಕೆ ಇಂಜೆಕ್ಷನ್ ಬರುವ ಸಾಧ್ಯತೆ ಇದೆ. ಖಾಸಗಿ ಕಂಪನಿಗಳಿಂದ ಮೆಡಿಷನ್ ತರಿಸಿ ರಾಜ್ಯಕ್ಕೆ ಪೂರೈಕೆ ಮಾಡಲಾಗುತ್ತದೆ..

Minister Dr Sudhakar
ಸಚಿವ ಸುಧಾಕರ್
author img

By

Published : May 17, 2021, 12:18 PM IST

ಬೆಂಗಳೂರು : ಕೊರೊನಾ ಸೋಂಕು ಕಾಲಿಟ್ಟು ರಾಜ್ಯದಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ಅಭಾವ ಸೃಷ್ಟಿಸಿದೆ. ಆಸ್ಪತ್ರೆಯಲ್ಲಿ ಬೆಡ್ ಬೇಕೆಂದರೆ ಹತ್ತಾರು ಆಸ್ಪತ್ರೆ ಸುತ್ತಬೇಕು.

ಆಕ್ಸಿಜನ್ ಬೇಕು ಅಂದರೂ ಹತ್ತಾರು ಜನರನ್ನ ಸಂಪರ್ಕ ಮಾಡಬೇಕು. ಅಷ್ಟೇ ಯಾಕೆ ಕೊರೊನಾ ಸೋಂಕಿತರಿಗೆ ನೀಡುವ ರೆಮ್​ಡಿಸಿವಿರ್ ಔಷಧದಿಂದ ಹಿಡಿದು ಪ್ಲಾಸ್ಮಾ ತನಕ ಎಲ್ಲದಕ್ಕೂ ಬೇಡಿಕೆಯಿದೆ. ಆದರೆ, ಸಮರ್ಪಕವಾಗಿ ಪೂರೈಕೆಯಾಗದ ಕಾರಣಕ್ಕೆ ಕೊರತೆ ಸೃಷ್ಟಿಯಾಗಿದೆ.

ಕೊರೊನಾ ಕುರಿತಂತೆ ಸಚಿವ ಸುಧಾಕರ್ ಮಾಹಿತಿ..

ಕೊರೊನಾ ಸೋಂಕಿನ ನಡುವೆ ಇದೀಗ ರಾಜ್ಯದಲ್ಲಿ ಮತ್ತೊಂದು ಕಂಟಕ ಎದುರಾಗಿದೆ. ರೆಮ್​ಡಿಸಿವಿರ್, ಟೊಸಿಲಿಜುಮಾಬ್, ಆಕ್ಸಿಜನ್ ಕೊರತೆ ಬೆನ್ನಲ್ಲೇ ಇದೀಗ ಲಿಪೊಸೋಮಲ್ ಆ್ಯಂಪೊಟೆರಿಸಿನ್ ಬಿ ಇಂಜೆಕ್ಷನ್​​ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.

ಮ್ಯುಕೋ ರ್ಮೈಕೋಸಿಸ್ ( ಶಿಲೀಂಧ್ರ ಸೋಂಕು) ಸೋಂಕಿನ ಚಿಕಿತ್ಸೆಗಾಗಿ 'ಲಿಪೊಸೋಮಲ್ ಆ್ಯಂಪೊಟೆರಿಸಿನ್ ಬಿ' ಇಂಜೆಕ್ಷನ್ ನೀಡಲಾಗುತ್ತೆ. ಒಬ್ಬ ರೋಗಿಗೆ ಕನಿಷ್ಠ 50 ಡೋಸ್ ಇಂಜೆಕ್ಷನ್ ಕೊಡಬೇಕಾಗುತ್ತೆ.

ರಾಜ್ಯದಲ್ಲಿ ಈಗಾಗಲೇ ಅಧಿಕೃತವಾಗಿ 50ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಒಂದು ಡೋಸ್​​ನ ಬೆಲೆ 6,500 ರೂ. ಆಗಿದ್ದು, ಒಬ್ಬ ರೋಗಿಗೆ 50 ಡೋಸ್ ಬೇಕು ಅಂದರೆ ಕನಿಷ್ಠ 3,25,000 ರೂ. ವೆಚ್ಚವಾಗಲಿದೆ.

ಸದ್ಯ ಈ ಇಂಜೆಕ್ಷನ್ ಎಲ್ಲೂ ಸಂಗ್ರಹ ಇಲ್ಲ.‌ ಇತ್ತ ಬ್ಲಾಕ್ ಫಂಗಸ್ ಬರುವುದು ಗೊತ್ತಿದ್ದರೂ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಇದೀಗ ದಿಢೀರ್ ರಾಜ್ಯಕ್ಕೆ ಬ್ಲಾಕ್​ ಫಂಗಸ್ ಸೋಂಕು ಕಾಲಿಟ್ಟಿದ್ದು ಔಷಧಿ ಸಿಗದೆ ಆತಂಕ ಹೆಚ್ಚಿಸಿದೆ.

ಕರ್ನಾಟಕ ಡ್ರಗ್ ಕಂಟ್ರೋಲ್ ರೂಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಬ್ಲಾಕ್ ಫಂಗಸ್ ರಾಜ್ಯಕ್ಕೆ ದಿಢೀರ್​ ಆಗಿ ಕಾಣಿಸಿಕೊಂಡಿರುವುದರಿಂದ ಸಮಸ್ಯೆ ಎದುರಾಗಿದೆ. ಬೇಡಿಕೆ ಜಾಸ್ತಿ ಆಗಿರುವ ಹಿನ್ನೆಲೆ ಇಂಜೆಕ್ಷನ್ ಎಲ್ಲೂ ಸಿಗುತ್ತಿಲ್ಲ.

ಕೆಲವು ಖಾಸಗಿ ಕಂಪನಿಗಳಲ್ಲಿ ಲಭ್ಯವಿರುವ ಬಗ್ಗೆ ಪರಿಶೀಲಿಸುತ್ತಿದ್ದು, ಇಂದು ರಾಜ್ಯಕ್ಕೆ ಇಂಜೆಕ್ಷನ್ ಬರುವ ಸಾಧ್ಯತೆ ಇದೆ. ಖಾಸಗಿ ಕಂಪನಿಗಳಿಂದ ಮೆಡಿಷನ್ ತರಿಸಿ ರಾಜ್ಯಕ್ಕೆ ಪೂರೈಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬ್ಲಾಕ್​ ಫಂಗಸ್ ತಜ್ಞರೊಂದಿಗೆ ಸಭೆ : ಆರೋಗ್ಯ ಸೌಧದಲ್ಲಿ ಇಂದು ಸಚಿವ ಡಾ. ಕೆ. ಸುಧಾಕರ್ ತಜ್ಞರ ಸಭೆ ಕರೆದಿದ್ದಾರೆ. ಕಣ್ಣು, ದಂತ ತಜ್ಞರು ಸೇರಿದಂತೆ ವಿವಿಧ ವೈದ್ಯರು ಸಮಿತಿಯಲ್ಲಿ ಇರುತ್ತಾರೆ.

ಈ ಕುರಿತು‌ ಮಾತಾನಾಡಿದ ಸಚಿವ ಸುಧಾಕರ್, ಸಭೆಯಲ್ಲಿ ಯಾವ ರೀತಿ ನಿಯಂತ್ರಣ ಮಾಡಬೇಕು?, ಎಷ್ಟು ಕೇಂದ್ರ ಸ್ಥಾಪನೆ ಮಾಡಬೇಕು? ವಿಭಾಗವಾರು ಮಾಡಬೇಕಾ ಅಥವಾ ಹೇಗೆ? ಎಂಬುದರ ಕುರಿತು ಚರ್ಚೆ ಮಾಡಲಾಗುತ್ತದೆ. ಇದರೊಟ್ಟಿಗೆ ಔಷಧಿ ಕೊರತೆ, ಸರಬರಾಜು ಬಗ್ಗೆಯೂ ಮಾಹಿತಿ ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದರು.

ಓದಿ: ಬ್ಲಾಕ್ ಫಂಗಸ್ ಅಧಿಕೃತ ರೋಗ ಪಟ್ಟಿಗೆ ಸೇರಿಸಿ, ಉಚಿತ ಚಿಕಿತ್ಸೆ ನೀಡಿ : ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.