ETV Bharat / state

ರಸ್ತೆ ಅಪಘಾತ ತಗ್ಗಿಸಲು ಸಮೂಹ ಮಾಧ್ಯಮ ಅಭಿಯಾನ: ಸಚಿವ ರಾಮಲಿಂಗಾರೆಡ್ಡಿ ಚಾಲನೆ

ವಾಹನ ಚಲಾಯಿಸುವವರು ತಮ್ಮ ಕುಟುಂಬದ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡ ವಾಹನ ಚಲಾಯಿಸಿದಾಗ ಮಾತ್ರ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Etv Bharatminister-ramalingareddy-reaction-on-road-accidents
ರಸ್ತೆ ಅಪಘಾತ ತಗ್ಗಿಸಲು ಸಮೂಹ ಮಾಧ್ಯಮ ಅಭಿಯಾನ: ಸಚಿವ ರಾಮಲಿಂಗಾರೆಡ್ಡಿ ಚಾಲನೆ
author img

By ETV Bharat Karnataka Team

Published : Dec 1, 2023, 10:51 PM IST

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸಲು ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ ವಾಹನಗಳ ವೇಗವನ್ನು ಕಡಿಮೆ ಮಾಡಲು ಸಮೂಹ ಮಾಧ್ಯಮ ಅಭಿಯಾನ ಆರಂಭಿಸಿದ್ದು, ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಜಂಟಿ ಅಭಿಯಾನಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಾಹನ ಚಲಾಯಿಸುವವರು ತಮ್ಮ ಕುಟುಂಬದ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡ ವಾಹನ ಚಲಾಯಿಸಿದಾಗ ಮಾತ್ರ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯ. ಏನೆಲ್ಲಾ ಜಾಗೃತಿ ಮೂಡಿಸಿದರೂ ಅಪಘಾತ ಪ್ರತಿವರ್ಷ ಕಡಿಮೆಯಾಗುತ್ತಿಲ್ಲ. ಕಳೆದ ವರ್ಷ 35,550 ರಸ್ತೆ ಅಪಘಾತಗಳಾಗಿವೆ. ಇದರಿಂದ 10,723 ಜನ ಸತ್ತಿದ್ದಾರೆ, 42,135 ಗಾಯಾಳುಗಳಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಪಘಾತ ಪ್ರಮಾಣ ಶೇ. 13 ಜಾಸ್ತಿ ಆಗಿದೆ. ಪ್ರತಿ ವರ್ಷ ಎಲ್ಲಾ ರಾಜ್ಯಗಳು ತಿಳಿವಳಿಕೆ ನೀಡಿದರೂ ರಸ್ತೆ ಅಪಘಾತಗಳ ಕಡಿಮೆಯಾಗುತ್ತಿಲ್ಲ ಎಂದು ಹೇಳಿದರು.

ಅತಿವೇಗದ ಚಾಲನೆ ಬದಲು ನಿಧಾನಕ್ಕೆ ವಾಹನಗಳ ಸಂಚಾರ ಮಾಡಬೇಕು: ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ, ವಾಹನ ಚಲಾಯಿಸುವವರಿಗೆ ಈ ಬಗ್ಗೆ ಜಾಗೃತಿ ಇರಬೇಕು. ದೂರವಾಣಿ ಕರೆ ಮಾಡುತ್ತಾ ವಾಹನ ಚಾಲನೆ, ಹೆಲ್ಮೆಟ್ ರಹಿತ ಚಾಲನೆ, ವ್ಹೀಲಿಂಗ್ ಮಾಡಿ ಅಪಘಾತಕ್ಕೀಡಾಗಿ ಅನಾಹುತ ಮಾಡಿಕೊಳ್ಳುತ್ತಾರೆ. ದ್ವಿಚಕ್ರ ವಾಹನ ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಅನಾಹುತ ಆಗುತ್ತಿದೆ. ಇದಕ್ಕೆಲ್ಲ ಚಾಲಕರು ಹೆಚ್ಚು ಜವಾಬ್ದಾರಿ ವಹಿಸಬೇಕು. ಅತಿವೇಗದ ಚಾಲನೆ ಬದಲು ನಿಧಾನಕ್ಕೆ ವಾಹನಗಳ ಸಂಚಾರ ಮಾಡಬೇಕು ಎಂದು ಸಲಹೆ ನೀಡಿದರು.

ಚಾಲಕರು ಜವಾಬ್ದಾರಿಯುತವಾಗಿ ವಾಹನ ಚಲಾಯಿಸಬೇಕು, ಅವರ ಕುಟುಂಬದ ಬಗ್ಗೆ ಅರಿತು ವಾಹನ ಚಾಲನೆ ಮಾಡಿದರೆ ಮಾತ್ರ ಅಪಘಾತ ಕಡಿಮೆಯಾಗಬಹುದು. ಆದರೂ ನಾವು ನಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜಾಗೃತಿ ಕುರಿತು ಮಾಧ್ಯಮಗಳಲ್ಲಿ ಜಾಹೀರಾತು ಕೊಡುತ್ತೇವೆ, ಸಿನಿಮಾ ಮಂದಿರಗಳಲ್ಲಿ ಸಣ್ಣ ಸಣ್ಣ ಕಿರುಚಿತ್ರದ ಮೂಲಕ ಪ್ರಚಾರ ಮಾಡುತ್ತೇವೆ, ಅಪಘಾತಕ್ಕೊಳಗಾದವರ ಸ್ಥಿತಿ ಕುರಿತು ವಿಡಿಯೋ ತೋರಿಸಿ ಜಾಗೃತಿ ಮೂಡಿಸಿದಲ್ಲಿ ಇದು ಕೆಲವರ ಮೇಲಾದರೂ ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕಾಗಿ ಸಮೂಹ ಮಾಧ್ಯಮದ ಮೂಲಕ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದ್ದೇವೆ ಎಂದರು.

ಶಾಂತಿನಗರದಲ್ಲಿರುವ ಕೆಎಸ್ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ, ವೇಗದ ಬೆಲೆ ದುಬಾರಿ: ಪುರುಷೋತ್ತಮ, ಗೀತಮ್ಮ ಮತ್ತು ಕುಟುಂಬದ ಕಥೆ ಎನ್ನುವ ಶೀರ್ಷಿಕೆಯಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನ ತುಮಕೂರು ಜಿಲ್ಲೆಯ ಕೆ.ಎನ್ ಪುರುಷೋತ್ತಮ ಎನ್ನುವ ರಸ್ತೆ ಅಪಘಾತ ಸಂತ್ರಸ್ತನ ಜೀವನವನ್ನು ಆಧರಿಸಿದೆ.

ಇದನ್ನೂ ಓದಿ: ಹುಸಿ ಬಾಂಬ್ ಬೆದರಿಕೆ ಪ್ರಕರಣ: ಮೇಲ್ನೋಟಕ್ಕೆ ಇದು ಕಿಡಿಗೇಡಿಗಳ ಕೃತ್ಯದಂತಿದೆ.. ಪೊಲೀಸ್ ಕಮೀಷನರ್ ದಯಾನಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.