ಬೆಂಗಳೂರು: ಮಹಾರಾಷ್ಟ್ರ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಹೇಳಿಕೆ ನೀಡ್ತಾ ಇದ್ದಾರೆ ಎಂದು ಆರ್.ಅಶೋಕ್ ಕಿಡಿ ಕಾರಿದರು.
ಜನರು ಸರ್ಕಾರವನ್ನು ನಂಬುತ್ತಿಲ್ಲ. ಕೋವಿಡ್ ನಿರ್ವಹಣೆ ಸೇರಿ ಬೇರೆ ಬೇರೆ ವಿಚಾರಗಳಲ್ಲಿ ಠಾಕ್ರೆ ಜನಬೆಂಬಲ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ನಾವು ಸೊಪ್ಪು ಹಾಕುವುದಿಲ್ಲ. ನಮ್ಮ ತಂಟೆಗೆ ಬರಬೇಡಿ. ಬಂದರೆ ರಾಮನ ಭಂಟ ಆಂಜನೇಯನ ಅವತಾರ ತಾಳಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಎಚ್ಚರಿಸಿದರು. ಸ್ವಾರ್ಥಕ್ಕಾಗಿ ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ಕಿಚ್ಚು ಹಚ್ಚುವ ಹೀನ ಕೆಲಸವನ್ನು ಮಹಾ ಸಿಎಂ ಮಾಡಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಮಹಾಜನ್ ವರದಿಯಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ತೀಟೆಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅದರ ಬಗ್ಗೆ ಮಾತನಾಡುವ ಯಾವ ನೈತಿಕತೆ ಮಹಾರಾಷ್ಟ್ರ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:'ಶಾಂತಿ ಕದಡುವ ಯತ್ನ ಮಾಡಬೇಡಿ, ಅದಕ್ಕೆ ನಾವು ಜಗ್ಗಲ್ಲ': ಬೊಮ್ಮಾಯಿ ಎಚ್ಚರಿಕೆ