ಬೆಂಗಳೂರು : ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆ ಕಾರ್ಯಕ್ರಮ 'ಹಳ್ಳಿ ಕಡೆ ಜಿಲ್ಲಾಧಿಕಾರಿಗಳ ನಡಿಗೆ' ವಿನೂತನ ಕಾರ್ಯಕ್ರಮ ಫೆ.20ರಂದು 227 ಕಡೆ ನಡೆಯಲಿದೆ. ಈ ಸಂಬಂಧ ವಿಕಾಸಸೌಧದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಂದಾಯ ಸಚಿವ ಆರ್.ಅಶೋಕ್ ವಿಡಿಯೋ ಸಂವಾದ ನಡೆಸಿದ್ದಾರೆ.
ಕಂದಾಯ ಇಲಾಖೆ ಮಾತೃ ಇಲಾಖೆಯಾಗಿದ್ದು, ಜನರ ಬಳಿಗೆ ಈ ಇಲಾಖೆ ಕೊಂಡೊಯ್ಯುತ್ತೇವೆ. ಪ್ರತಿ ತಿಂಗಳ ಮೂರನೇ ಶನಿವಾರ ಅಧಿಕಾರಿಗಳು ಹಳ್ಳಿಗಳಲ್ಲಿ ಇರಬೇಕು. ಫೆಬ್ರವರಿ 20ರಂದು 227 ಕಡೆ ಅಧಿಕಾರಿಗಳು ಹೋಗುತ್ತಾರೆ. ಪ್ರತಿ ತಾಲೂಕಿಗೆ ತಹಸೀಲ್ದಾರ್, ಎಸಿ ಭೇಟಿ ನೀಡುತ್ತಾರೆ. ಬೆಳಗ್ಗೆ 10ರಿಂದಲೇ ಅವರ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
'ವೀಕ್ಷಕರಾಗಿ ಹೋಗದೇ ಸಮಸ್ಯೆ ಪರಿಹರಿಸಿ'
ಅಧಿಕಾರಿಗಳು ವಿಸಿಂಟಿಂಗ್ ಅಧಿಕಾರಿಗಳಾಗಿ ಹೋಗಬಾರದು. ಅಲ್ಲಿನ ಸಮಸ್ಯೆಗಳನ್ನ ಅರಿಯಬೇಕು. ಜನರ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹರಿಸಬೇಕು. ಹಳ್ಳಿಗರಿಗೆ ಕಚೇರಿ ಅಲೆಯುವುದಕ್ಕೆ ಸಾಧ್ಯವಿಲ್ಲ. ವಿಕಲಚೇತನರನ್ನು ಗುರುತಿಸಬೇಕು. ಕಣ್ಣಿಲ್ಲದವರು, ಪಿಂಚಣಿ ಪಡೆಯುವವರನ್ನು ಭೇಟಿ ಮಾಡಬೇಕು. ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಸರ್ಕಾರಿ ಭೂಮಿ ಗುರುತಿಸಿ ಅಲ್ಲಿ ಗಿಡ ನೆಡಬೇಕು. ಯಾವ ಗ್ರಾಮಕ್ಕೆ ಹೋಗುತ್ತಾರೋ ಅಲ್ಲಿನ ಶಾಲೆ, ಅಂಗನವಾಡಿ ಕೇಂದ್ರ ಅಥವಾ ಹಾಸ್ಟೆಲ್ಗಳಲ್ಲೇ ಪುರುಷ ಡಿಸಿ, ಎಸಿಗಳು ಮಲಗಬೇಕು. ಅಲ್ಲೇ ಇದ್ದು ಅಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಆರ್.ಅಶೋಕ್ ಸೂಚನೆ ನೀಡಿದರು.
ಇದನ್ನೂ ಓದಿ: ಟೂಲ್ಕಿಟ್ ವಿವಾದದಲ್ಲಿ ದಿಶಾ ರವಿ ಬಂಧನ:ದೆಹಲಿ ಪೊಲೀಸ್ಗೆ ಮಹಿಳಾ ಆಯೋಗ ನೋಟಿಸ್..!
ಇನ್ನು, ಮಹಿಳಾ ಡಿಸಿಗಳು ಗ್ರಾಮ ವಾಸ್ತ್ಯವಕ್ಕೆ ಒಪ್ಪಿದ್ದಾರೆ. ಪ್ರವಾಹ ಸಂತ್ರಸ್ತರ ಸಮಸ್ಯೆಯನ್ನೂ ಬಗೆಹರಿಸುತ್ತಾರೆ. ಕೆಲವು ಕಡೆ ಕಾಲು ದಾರಿಗಳಿಲ್ಲ. ಅಂತಹ ಕಡೆ ಕಾಲು ದಾರಿಗಳನ್ನು ಮಾಡಬೇಕು. ಡಿಸಿಗಳು ಅಲ್ಲಿ ತೆರಳಿ ಸಮಸ್ಯೆ ಬಗೆಹರಿಸಬೇಕು. ಜೊತೆಗೆ ಜನರಿಂದ ಜಿಲ್ಲಾಧಿಕಾರಿಗಳು ಅಹವಾಲು ಸ್ವೀಕರಿಸಬೇಕು. ನಂತರ ಅಲ್ಲೇ ಅವರ ಸಮಸ್ಯೆ ಬಗೆಹರಿಸಬೇಕು. ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಕೂಡ ಒಂದು ಗಂಟೆ ಭಾಗಿಯಾಗಬೇಕು. ಸಂಜೆ ಸ್ಥಳೀಯ ಜನಪ್ರತಿನಿಧಿಗಳ ಸಭೆ ಮಾಡಬೇಕು. ಆದರೆ, ಹಾರ ತುರಾಯಿ, ಹಾಕುವ ಹಾಗಿಲ್ಲ. ಬದಲಾಗಿ ಕನ್ನಡ ಪುಸ್ತಕ ನೀಡಬೇಕು ಎಂದು ಆರ್.ಅಶೋಕ್ ಹೇಳಿದರು.
'ನಾನೂ ಕೂಡಾ ಗ್ರಾಮ ವಾಸ್ತವ್ಯ ಮಾಡ್ತೇನೆ'
ನಾನು ಕೂಡ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತೇನೆ. ಚಕ್ಕಡಿಯಲ್ಲಿ ಹೋಗಿ ದೇವರ ದರ್ಶನ ಮಾಡುತ್ತೇನೆ. ಅಲ್ಲಿಂದ ದಲಿತ ಕೇರಿಗೆ ತೆರಳಿ ಸಮಸ್ಯೆಗಳನ್ನು ಆಲಿಸುತ್ತೇನೆ. ನಂತರ ಹಳ್ಳಿಯ ಎಲ್ಲ ಮನೆಗಳಿಗೆ ಭೇಟಿ ನೀಡುತ್ತೇನೆ. ಅದೇ ಹಳ್ಳಿಯಲ್ಲಿ ಆರೋಗ್ಯ ಶಿಬಿರ ನಡೆಯುತ್ತದೆ. ಅಲ್ಲಿನ ಸ್ಥಳೀಯ ಶಾಸಕರ ಜೊತೆ ಚರ್ಚಿಸುತ್ತೇನೆ. ಸಮಸ್ಯೆಗಳನ್ನ ಸರಿಪಡಿಸುತ್ತೇನೆ ರಾತ್ರಿ ಸ್ಥಳೀಯ ಕಲಾವಿದರ ಜೊತೆ ಕೂರುತ್ತೇನೆ. ರಾತ್ರಿ ಒಬಿಸಿ ಹಾಸ್ಟೆಲ್ನಲ್ಲೇ ವಾಸ್ತವ್ಯ ಹೂಡುತ್ತೇನೆ ಎಂದು ಸಚಿವರು ಮಾಹಿತಿ ನೀಡಿದರು.
ಮನೆ ಮನೆಗೆ ಮಾಸಾಶನ
ನೇರವಾಗಿ ಅವರ ಖಾತೆಗೆ ಹಣ ಹಾಕುತ್ತೇವೆ. ಪಿಂಚಣಿದಾರ ಒಂಬತ್ತು ತಿಂಗಳವರೆಗೆ ಹಣ ಡ್ರಾ ಮಾಡದೇ ಇದ್ದರೆ, ಅಂತವರ ಬ್ಯಾಂಕ್ ಖಾತೆ ಸೀಜ್ ಆಗುತ್ತದೆ ಎಂದು ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು.