ETV Bharat / state

ಮೂರು ದಿನ ಹೆಚ್ಚು ಮಳೆ ಸಾಧ್ಯತೆ.. ಎಲ್ಲಾ ಡಿಸಿಗಳಿಗೆ ಅಲರ್ಟ್ ಇರಲು ಸೂಚನೆ.. ಕಂದಾಯ ಸಚಿವ ಆರ್ ಅಶೋಕ್ - ಕಂದಾಯ ಸಚಿವ ಆರ್. ಅಶೋಕ್

ಈವರೆಗೆ ಮಳೆಯಿಂದ ಮೂವರು 3 ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. ಚಿಕ್ಕಮಗಳೂರು ಮನೆ ಕುಸಿತದಿಂದ ಓರ್ವ, ಉತ್ತರ ಕನ್ನಡದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈವರೆಗೆ 830 ಮನೆಗಳು ಹಾನಿಗೀಡಾಗಿವೆ. 8733 ಜನರನ್ನು ಸ್ಥಳಾಂತರಿಸಲಾಗಿದೆ. 80 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ..

minister-r-ashok
ಸಚಿವ ಆರ್ ಅಶೋಕ್
author img

By

Published : Jul 23, 2021, 5:02 PM IST

ಬೆಂಗಳೂರು : ಇನ್ನೂ ಮೂರು ದಿನಗಳು ಹೆಚ್ಚು ಮಳೆಯಾಗಬಹುದು. ಹೀಗಾಗಿ, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಇರುವಂತೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಳಜಿ ಕೇಂದ್ರಗಳನ್ನು ತೆರೆದು ವ್ಯವಸ್ಥೆ ಮಾಡುತ್ತಿದ್ದೇವೆ. ವಾಸ್ತವಿಕ ಮಳೆಗಿಂತ 10 ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಿದೆ. ಕಾಣೆಯಾದವರನ್ನು ಪತ್ತೆ ಹಚ್ಚುವುದಕ್ಕೆ ತಂಡಗಳನ್ನು ಕಳುಹಿಸಲಾಗಿದೆ. ಹೆಚ್ಚುವರಿಯಾಗಿ ಕೃಷ್ಣ ನದಿಯಿಂದ ಮತ್ತಷ್ಟು ನೀರು ಹೊರ ಹರಿವು ಜಾಸ್ತಿ ಆಗುವ ಸಾಧ್ಯತೆ ಇದೆ.

ನಾಲ್ಕು ಎನ್​ಡಿಆರ್​ಎಫ್ ತಂಡಗಳನ್ನು ನಾಲ್ಕು ವಲಯಗಳಿಗೆ ಕಳುಹಿಸಿದ್ದೇವೆ ಎಂದರು. ಉತ್ತರಕನ್ನಡದಲ್ಲಿ ಇಬ್ಬರು ಕಾಣೆಯಾಗಿದ್ದು, ನದಿ ನೀರಲ್ಲಿ ಮುಳುಗಿದ್ದಾರೆ. 18 ತಾಲೂಕುಗಳಿಗೆ ಮಳೆಯಿಂದ ಎಫೆಕ್ಟ್ ಆಗಿದೆ.

131 ಗ್ರಾಮಗಳು ಮಳೆ ಪೀಡಿತವಾಗಿವೆ. ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವ ಕೆಲಸ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಂದ ಹಾನಿಯಾಗಿರುವ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಈವರೆಗೆ ಮಳೆಯಿಂದ ಮೂವರು 3 ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. ಚಿಕ್ಕಮಗಳೂರು ಮನೆ ಕುಸಿತದಿಂದ ಓರ್ವ, ಉತ್ತರ ಕನ್ನಡದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈವರೆಗೆ 830 ಮನೆಗಳು ಹಾನಿಗೀಡಾಗಿವೆ. 8733 ಜನರನ್ನು ಸ್ಥಳಾಂತರಿಸಲಾಗಿದೆ. 80 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಓದಿ: ಉತ್ತರಕನ್ನಡದಲ್ಲಿ ಹೆದ್ದಾರಿ ಸಂಚಾರ ಬಂದ್​, ಕಾಪ್ಟರ್ ಬಳಸಿ ಹೋಟೆಲ್​​ನಲ್ಲಿ ಸಿಲುಕಿದ್ದವರ ರಕ್ಷಣೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.