ETV Bharat / state

ಸಿಡಿ ತನಿಖೆ ನಡೆಸಲು ಸಿಎಂಗೆ ಮನವಿ: ಸಚಿವ ಆರ್.ಅಶೋಕ್ - ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ

ಸಿಡಿ ಬಗ್ಗೆ ತನಿಖೆ ನಡೆಸಲು ಸಿಎಂಗೆ ಮನವಿ ಮಾಡುತ್ತೇವೆ.‌ ಇದು ಸುಳ್ಳು ದಾಖಲೆ ರೀತಿಯಲ್ಲಿ ಕಾಣುತ್ತಿದೆ. ಹೀಗಾಗಿ ತನಿಖೆ ನಡೆಸಲು ನಾನೂ ಮನವಿ ಮಾಡುತ್ತೇನೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

Minister R Ashok
ಸಚಿವ ಆರ್.ಅಶೋಕ್
author img

By

Published : Mar 9, 2021, 12:29 PM IST

ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ನಾನೂ ಕೂಡ ತನಿಖೆ ನಡೆಸುವಂತೆ ಮನವಿ ಮಾಡುತ್ತೇವೆ. ಇದು ಸುಳ್ಳು ದಾಖಲೆ ರೀತಿಯಲ್ಲಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಸಿಡಿ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತನಿಖೆ ನಡೆಸಲು ಸಿಎಂಗೆ ಮನವಿ ಮಾಡುತ್ತೇವೆ.‌ ಇದು ಸುಳ್ಳು ದಾಖಲೆ ರೀತಿಯಲ್ಲಿ ಕಾಣುತ್ತಿದೆ. ಹೀಗಾಗಿ ತನಿಖೆ ನಡೆಸಲು ನಾನೂ ಮನವಿ ಮಾಡುತ್ತೇನೆ ಎಂದರು.

ಸಚಿವ ಆರ್.ಅಶೋಕ್

ಒಕ್ಕಲಿಗರ ನಿಗಮಕ್ಕೆ ಬಜೆಟ್‌ನಲ್ಲಿ 500 ಕೋಟಿ ಮೀಸಲಿಟ್ಟಿದ್ದಾರೆ. ಸ್ವಾಮೀಜಿ ಜೊತೆ ಫೋನ್ ಮೂಲಕ ಸಿಎಂಗೆ ಮಾತನಾಡಿಸಿದ್ದೇನೆ. ಒಕ್ಕಲಿಗರ ಸಮುದಾಯದಲ್ಲಿ ಬಡ ರೈತಾಪಿ ವರ್ಗದವರಿದ್ದಾರೆ. ಅವರಿಗೆ ಅನುಕೂಲ ಮಾಡುವಂತೆ ಮನವಿ ಮಾಡಿದ್ದೆವು. ಅದನ್ನು ಸಿಎಂ ಪುರಸ್ಕರಿಸಿದ್ದಾರೆ. ಬ್ರಾಹ್ಮಣ ನಿಗಮಕ್ಕೂ ಹಣ ಮೀಸಲಿಟ್ಟು ಮುಖ್ಯ ವಾಹಿನಿಗೆ ಬರಲು ಸಹಾಯ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಯೂ-ಟರ್ನ್ ಹೊಡೆದಿದೆ:

ಕಳೆದ ಬಿಎಸಿ ಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ವಿಚಾರ ಚರ್ಚೆ ಮಾಡಿದ್ದೆವು. ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡೋದಾಗಿ ಸಿದ್ದರಾಮಯ್ಯ ಹೇಳಿದ್ದರು. ಪ್ಯಾನಲ್‌ನಲ್ಲಿ ಇಂತಿಷ್ಟು ಜನ ಮಾತಾಡ್ತಾರೆ ಅಂತ ಪಟ್ಟಿ ನೀಡಿದ್ದರು. ಈಗ ಯೂ ಟರ್ನ್ ಹೊಡೆದಿದ್ದಾರೆ ಎಂದು ಆರೋಪಿಸಿದರು.

ಅವರು ಮಾತನಾಡಿರೋದು ರೆಕಾರ್ಡ್ ಇದೆ. ಮುಜುಗರದಿಂದ ತಪ್ಪಿಸಿಕೊಳ್ಳಲು ಸಭೆಯಿಂದ ಹಿಂದೆ ಸರಿದಿದ್ದಾರೆ. ಸಭಾಪತಿ ಅವರಿಗೆ ಮನವಿ ಕೊಟ್ಟು, ಮತ್ತೊಮ್ಮೆ ಚರ್ಚೆಗೆ ಮನವಿ ಮಾಡುತ್ತೇವೆ. ಪ್ರಜಾಪ್ರಭುತ್ವ ಇರೋದ್ರಿಂದ ನಾವು ಚರ್ಚೆಗೆ ಅವಕಾಶ ಕೊಡುತ್ತೇವೆ‌. ಮಾತನಾಡಲೇಬಾರದು ಅಂದ್ರೆ ದೇಶದಲ್ಲಿ ಕಾಂಗ್ರೆಸ್ ಎಮರ್ಜೆನ್ಸಿ ತಂದ ರೀತಿ ಕಾಣುತ್ತಿದೆ. ರಾಹುಲ್ ಈಗಾಗಲೇ ಎಮರ್ಜೆನ್ಸಿ ಬಗ್ಗೆ ಕ್ಷಮಾಪಣೆ ಕೇಳಿದ್ದಾರೆ. ಒಂದು ವಿಚಾರವಾಗಿ ಬಾಯ್ಕಾಟ್ ಮಾಡೋದು ಸರಿಯಲ್ಲ. ಚರ್ಚೆಯಲ್ಲಿ ಭಾಗಿಯಾಗಿ ವಿರೋಧ ವ್ಯಕ್ತಪಡಿಸಲಿ ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.