ಬೆಂಗಳೂರು: ಎಣ್ಣೆ ಸಹವಾಸ ಹೆಂಡತಿ ಮಕ್ಕಳ ಉಪವಾಸ, ಎಣ್ಣೇ ಬೇಡವೇ ಬೇಡ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಇಂದು ಸುದ್ದಿಗಾರರು ಲಾಕ್ ಡೌನ್ ಮೇ 3 ರಂದು ಮುಗಿಯಲಿದ್ದು, ಬಾರ್ಗಳು ತೆರೆಯಲಾಗುತ್ತದೆಯೇ? ಎಂಬ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದ ಸಚಿವ ಅಶೋಕ್, ಮದ್ಯದಂಗಡಿ ಸದ್ಯಕ್ಕೆ ತೆರೆಯುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಬಾರ್ ತೆರೆದರೆ ನಾವು ಈಗ ಕೊಟ್ಟಿರುವ ರೇಷನ್ ಹಾಳಾಗುತ್ತೆದೆ. ಎಣ್ಣೆ ಸದ್ಯಕ್ಕೆ ಬೇಡವೇ ಬೇಡ ಎಂದರು.
ಇಂದು ಸಂಜೆ ಸಭೆ : ಬೆಂಗಳೂರಿನಲ್ಲಿ ಮಳೆ ಬಂದು ರಸ್ತೆಗಳು ಹಾಳಾಗಿವೆ. ಜೊತೆಗೆ ಇತರ ಸಮಸ್ಯೆಗಳು ಮಳೆಯಿಂದ ಎದುರಾಗಿವೆ. ಹಾಗಾಗಿ, ಇದನ್ನು ಹೇಗೆ ತಡೆಯುವುದು ಎಂಬ ಬಗ್ಗೆ ಇಂದು ಸಂಜೆ ಬಿಬಿಎಂಪಿಯಲ್ಲಿ ಸಭೆ ಕರೆಯಲಾಗಿದೆ ಎಂದರು. ಅಲ್ಲದೇ ನಮಗೀಗ ಕೊರೊನಾ ನಿಯಂತ್ರಣ ಒಂದು ಕಡೆ ಸವಾಲಾದ್ರೆ ಮತ್ತೊಂದು ಕಡೆ ಮಳೆಯದ್ದೊಂದು ಸವಾಲಾಗಿದೆ. ಈ ಸಂಬಂಧ ಇಂಜಿನಿಯರ್ಸ್ ಸೇರಿದಂತೆ ಇತರ ಅಧಿಕಾರಿಗಳ ಸಭೆ ಕರೆದಿದ್ದು, ಮಳೆಯಿಂದಾಗುವ ಅನಾಹುತ ತಡೆಯುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.