ಬೆಂಗಳೂರು: ಕಾಂಗ್ರೆಸ್ನವರಿಗೆ ನಕಲಿ ಗಾಂಧಿಗಳ ಬಗ್ಗೆನೇ ಅಪಾರ ಭಕ್ತಿ, ಬೇರೆಯವರನ್ನು ಗುರುತಿಸುವ, ಗೌರವಿಸುವ ಗುಣ ಅವರ ರಕ್ತದಲ್ಲೇ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ನವರಿಗೆ ಸೋನಿಯಾ, ರಾಹುಲ್, ನೆಹರು ಅವರ ಹೆಸರುಗಳು ಮಾತ್ರ ನೆನಪಾಗುತ್ತವೆ. ಆದರೆ ವೀರ ಸಾವರ್ಕರ್ ಅಂಡಮಾನ್-ನಿಕೋಬಾರ್ ಜೈಲಿನಲ್ಲಿದ್ದದ್ದು ಗೊತ್ತಿಲ್ವಾ? ಇಂದಿರಾ ಗಾಂಧಿ ಸಂತತಿ ಹೆಸರಿಟ್ಟರೆ ಇವರಿಗೆಲ್ಲಾ ಹಬ್ಬ. ಬೇರೆಯವರ ಹೆಸರಿಟ್ಟರೆ ಆಗಲ್ಲ ಎಂದು ಕಿಡಿಕಾರಿದರು.
ಹಿಂದೂ ಪ್ರತಿಪಾಕರಾಗಿದ್ದೇ ಸಾವರ್ಕರ್ ಮಾಡಿದ ತಪ್ಪಾ? ಈ ಬಗ್ಗೆ ಸರ್ಕಾರದ ನಿಲುವು ದೃಢವಾಗಿದೆ. 25 ವರ್ಷ ಸೆರೆ ವಾಸ ಅನುಭವಿಸಿದ ಹೋರಾಟಗಾರನ ಬಗ್ಗೆ ವಿರೋಧ ಸರಿಯಲ್ಲ. ಹಿಂದೆಲ್ಲಾ ಯಾಕೆ ಕೆಂಪೇಗೌಡರ ಹೆಸರು ಇಡಲಿಲ್ಲ. ರಾಯಣ್ಣ ಹೆಸರು ಯಾಕೆ ಇಡಲಿಲ್ಲ. ಸಾವರ್ಕರ್ ಹೆಸರಿಡೋಕೆ ಪೂರ್ಣ ಬೆಂಬಲವಿದೆ. ಹಿಂದೂ ಪ್ರತಿಪಾದಕರೆಂಬ ಕಾರಣಕ್ಕೆ ವಿರೋಧ ಸರಿಯಲ್ಲ. ಹಿಂದೂ ಆಗಿ ಹುಟ್ಟುವುದೇ ತಪ್ಪಾ? ಅವರನ್ನ ವಿರೋಧ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಹೋಟೆಲ್ ಪ್ರಾರಂಭದ ವಿಚಾರವಾಗಿ ಮಾತನಾಡಿದ ಅವರು, ಸಂಪನ್ಮೂಲ ಕ್ರೋಢೀಕರಣ ಮಾಡಬೇಕಿದೆ. ಕಾಯಿಲೆ ಗುಣಪಡಿಸುವುದಕ್ಕೂ ಒತ್ತು ನೀಡುತ್ತೇವೆ. ಜೂನ್ 1ರ ನಂತರ ಕೇಂದ್ರದ ನಿರ್ದೇಶನ ನೋಡಿ ನಂತರ ಹೋಟೆಲ್ ಪ್ರಾರಂಭಕ್ಕೆ ಅವಕಾಶ ಕೊಡುತ್ತೇವೆ ಎಂದರು.
ಇನ್ನು ಬಾರ್, ರೆಸ್ಟೋರೆಂಟ್ ಆರಂಭ ಸಂಬಂಧ ಮಾತನಾಡಿದ ಅವರು, ಇವುಗಳನ್ನು ಆರಂಭ ಮಾಡಲು ಯಾವುದೇ ಅವಕಾಶವಿಲ್ಲ. ಎಲ್ಲಾ ಓಪನ್ ಆದ್ರೂ ಬಾರ್ ಓಪನ್ ಆಗಲ್ಲ ಎಂದು ಇದೇ ವೇಳೆ ತಿಳಿಸಿದರು.