ETV Bharat / state

ಕೆರೆಗಳನ್ನು ಮುಚ್ಚಿದ್ದರಿಂದಲೇ ನೆರೆ ಸ್ಥಿತಿ ಎದುರಾಗಿದೆ: ಕಂದಾಯ ಸಚಿವ ಆರ್ ಅಶೋಕ್ - ಮೆಜೆಸ್ಟಿಕ್ ಬಸ್ ನಿಲ್ದಾಣ

ಕೆರೆಗಳನ್ನು ಒತ್ತುವರಿ ಮಾಡಿದವರ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ತಿಳಿಸಿದ್ದಾರೆ.

ಕಂದಾಯ ಸಚಿವ ಆರ್ ಅಶೋಕ್
ಕಂದಾಯ ಸಚಿವ ಆರ್ ಅಶೋಕ್
author img

By

Published : Sep 14, 2022, 8:13 PM IST

Updated : Sep 14, 2022, 8:45 PM IST

ಬೆಂಗಳೂರು: ಬೆಂಗಳೂರಿನ 30 ಕೆರೆಗಳನ್ನು ಮುಚ್ಚಲಾಗಿದ್ದು, ಅದರಿಂದ ಈ ನೆರೆ ಪರಿಸ್ಥಿತಿ ಎದುರಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಆರೋಪಿಸಿದರು.

ಕಂದಾಯ ಸಚಿವ ಆರ್ ಅಶೋಕ್ ಅವರು ಮಾತನಾಡಿದರು

ವಿಧಾನಸಭೆಯಲ್ಲಿ ಮಳೆ ಅವಾಂತರದ ಬಗ್ಗೆ ಚರ್ಚೆ ವೇಳೆ ಮಾತನಾಡಿದ ಅವರು, ಕೆರೆಗಳನ್ನು ಒತ್ತುವರಿ ಮಾಡಿದವರ ಬಗ್ಗೆ ಮಾಹಿತಿ ಕೊಡುತ್ತೇನೆ. ಕೆರೆಗೆ ಕೆರೆನೇ ಮುಚ್ಚಿ ಹಾಕಿದ್ದಾರೆ. ಹಾಗಾದರೆ ಅವರಿಗೆ ಶಿಕ್ಷೆ ಆಗಬೇಕಲ್ವಾ?. ಕೆರೆಗಳನ್ನು ಮುಚ್ಚಿದ ಕಾರಣಕ್ಕೆ ಇಂದು ಸ್ಥಿತಿ ಹೀಗಾಗಿದೆ. ಅದು ಬಿಟ್ಟು ನಮ್ಮ ಮೇಲೆ ಆರೋಪ‌ ಮಾಡಿದರೆ ಹೇಗೆ?. ಬ್ರಾಂಡ್ ಬೆಂಗಳೂರು ಹಾಳಾದರೆ ನಮಗೆ ಕೆಟ್ಟ ಹೆಸರು ಬರೋದು ಎಂದು ವಿಷಾದ ವ್ಯಕ್ತಪಡಿಸಿದರು.

ಸುಮಾರು 30 ಕೆರೆ ಮುಚ್ಚಿ ಹಾಕಲಾಗಿದೆ. ಬಿಡಿಎ ಕೆರೆಗಳನ್ನು ಮುಚ್ಚಿದೆ. ಅಪರಾಧಿ ಯಾರಾದರೂ ಇದ್ದರೆ ದೊಡ್ಡ ಅಪರಾಧಿ ಬಿಡಿಎ. ಯಾರು ಇವರಿಗೆ ಅಧಿಕಾರ ಕೊಟ್ಟರು. ಅಂದಿನ ಸರ್ಕಾರ ಆವಾಗ ಏನು ಮಾಡುತ್ತಿತ್ತು. ಡ್ರೈ ಆದ ಕೆರೆ ಮುಚ್ಚಲು ಕ್ಯಾಬಿನೆಟ್​ನಲ್ಲಿ ಆದೇಶ ಮಾಡಲಾಗಿದೆ.

ಈ ತಪ್ಪು ನಿರ್ಧಾರದಿಂದಾಗಿ ನಾವು ಇಂದು ಎದುರಿಸುತ್ತಿದ್ದೇವೆ. ಕೆರೆಗಳನ್ನು ಒತ್ತುವರಿ ಮಾಡಿದ್ದಾರೆ ಎಂಬ ಬಗ್ಗೆ ನಾಳೆ ಪಟ್ಟಿ ಕೊಡುತ್ತೇನೆ. ಡಾಲರ್ಸ್ ಕಾಲೋನಿ, ಹೆಚ್​ಎಸ್​ಆರ್ ಬಡಾವಣೆ, ಕೋರಮಂಗಲ ಎಲ್ಲಿಂದ ಬಂತು? ಎಂದು ಕಾಂಗ್ರೆಸ್ ಅನ್ನು ಪರೋಕ್ಷವಾಗಿ ಪ್ರಶ್ನಿಸಿದರು.

ಇಡೀ ಕೆರೆಯನ್ನೇ ಮುಚ್ಚಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕಿತ್ತಲ್ಲ?. ಕಂಠೀರವ ಸ್ಟೇಡಿಯಂ ಆಗಲಿ, ಮೆಜೆಸ್ಟಿಕ್ ಬಸ್ ನಿಲ್ದಾಣ ಆಗಲಿ ಕೆರೆ ಮುಚ್ಚಿ ಮಾಡಲಾಗಿದೆ. ಬಿಡಿಎನೇ ಇದನ್ನು ಮುಚ್ಚಿದೆ. ಇದಕ್ಕೆ ಕಾರಣ ಬಿಡಿಎನೇ. ಆಗಿನ ಸರ್ಕಾರ ಏನು ಮಾಡುತ್ತಿತ್ತು. ಬಿಜೆಪಿ ಸರ್ಕಾರನೇ ಮಾಡಿದ್ದು ಅಂತಾ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಖಾಯಿಲೆ ಇಂದಿನದ್ದಲ್ಲ. ಯಾವತ್ತೋ ಬಂದಿದ್ದು ಎಂದು ಆರೋಪಿಸಿದರು.

ಆಗ ಎದ್ದು ನಿಂತ ರಾಮಲಿಂಗಾ ರೆಡ್ಡಿ ಕೆರೆ ಮುಚ್ಚಿರುವಲ್ಲಿ ಏನೂ ಸಮಸ್ಯೆ ಆಗಿಲ್ಲ. ಹಳೆ ಬೆಂಗಳೂರಲ್ಲಿ ಏನು ಮಳೆ ಅನಾಹುತ ಆಗಿಲ್ಲ. ನಾವು ಕೆರೆ ಮುಚ್ಚಿ ಅಂತಾ ಹೇಳುತ್ತೇವಾ?. ನಗರಾಭಿವೃದ್ಧಿ ಅಧಿಕಾರಿಗಳು ಅದನ್ನು ಮಾಡಿದ್ದಾರೆ. ಅದಕ್ಕೆ ಕಾರಣ ಅಧಿಕಾರಿಗಳು ಎಂದು ಆರೋಪಿಸಿದರು.

ಮಧ್ಯಪ್ರವೇಶಿಸಿದ ಅರವಿಂದ ಲಿಂಬಾವಳಿ ಬಿಡಿಎ ಹೊಸ ಬಡಾವಣೆ ಮಾಡಿದಾಗ ಅದಕ್ಕೆ ಅನುಮೋದನೆ ನೀಡುವುದು ಉಸ್ತುವಾರಿ ಸಚಿವರೇ. ಕೆರೆ ಜಾಗದಲ್ಲಿ ಬೇರೆಯದ್ದಕ್ಕೆ ಅನುಮತಿ ಕೊಡುವವರು ಮಂತ್ರಿಗಳೇ ಎಂದು ತಿಳಿಸಿದರು.

ಕುಮಾರಸ್ವಾಮಿ ನಿಲುವು ಯಾರಿಗೂ ಗೊತ್ತಾಗಲ್ಲ: ಹೆಚ್​ಡಿಕೆ ನಮ್ಮ ಪರವಾಗಿನೂ ಇಲ್ಲ, ನಿಮ್ಮ ಪರವಾಗಿನೂ ಇಲ್ಲ. ಅವರು ನಮ್ಮ‌ ಜೊತೆನೂ ಸರ್ಕಾರ ನಡೆಸಿದ್ದಾರೆ. ನಿಮ್ಮ ಜೊತೆನೂ ಸರ್ಕಾರ ನಡೆಸಿದ್ದಾರೆ. ಅವರ ನಿಲುವುನೇ ಬೇರೆ ಎಂದು ಸಚಿವ ಆರ್. ಅಶೋಕ್ ಅವರು ಸೂಚ್ಯವಾಗಿ ತಿಳಿಸಿದರು.

ಹರಿ ಹರ ಬ್ರಹ್ಮ ಬಂದರೂ ಅವರ ನಿಲುವು ಯಾರಿಗೂ ಗೊತ್ತಾಗಲ್ಲ. ನಿಮಗೂ ಗೊತ್ತಾಗಲ್ಲ. ಕ್ಯಾಬಿನೆಟ್​ಗೆ ಬರದೇ ಕೆರೆ ಮುಚ್ಚಲು ಸಾಧ್ಯನೇ ಇಲ್ಲ. ನಾವಂತೂ ಬೆಂಗಳೂರು ‌ಕಟ್ಟಿಲ್ಲ. ನಾವು ಬೆಂಗಳೂರು ಕಟ್ಟಿದ್ದು ಅಂತನೂ ಹೇಳಿಲ್ಲ ಎಂದರು.

ಓದಿ: ಈಗಿನ ಕಾಲದಲ್ಲಿ ಯಾರನ್ನೂ ನಂಬಕ್ಕಾಗಲ್ಲ, ನಾವು ಬಹಳ ಹುಷಾರಾಗಿರಬೇಕು: ಡಿ ಕೆ ಶಿವಕುಮಾರ್

Last Updated : Sep 14, 2022, 8:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.