ಬೆಂಗಳೂರು : ಕಾಂಗ್ರೆಸ್ನಿಂದ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ. ನಮ್ಮಲ್ಲಿ ಒಬ್ಬರೇ ನಾಯಕರು, ಒಂದೇ ಬಾಗಿಲು. ಆದರೆ ಕಾಂಗ್ರೆಸ್ನಲ್ಲಿ ಒಂದು ಮನೆ ನಾಲ್ಕು ಬಾಗಿಲು ಎಂದು ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ. ನಮ್ಮಲ್ಲಿ ಬಿದ್ದಿರುವ ನೊಣ ನೋಡೋದಕ್ಕೆ ಅವರು ಬಂದಿದ್ದಾರೆ. ಮೊದಲು ನಿಮ್ಮ ತಟ್ಟೆ ಶುದ್ಧ ಮಾಡಿಕೊಳ್ಳಿ. ಆಮೇಲೆ ಬೇರೆಯವರನ್ನು ಟೀಕೆ ಮಾಡುವುದನ್ನು ಕಲಿಯಿರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ದಲಿತರು ಸಿಎಂ ಆಗಬೇಕು ಅಂತ ಒಂದು ಬಾಗಿಲು, ಒಕ್ಕಲಿಗರು ಆಗಬೇಕು ಅಂತ ಇನ್ನೊಂದು ಬಾಗಿಲು, ಹಿಂದುಳಿದ ವರ್ಗ ಆಗಬೇಕು ಅಂತ ಮತ್ತೊಂದು ಬಾಗಿಲು, ಲಿಂಗಾಯತರು ಸಿಎಂ ಆಗಬೇಕು ಅಂತ ಮಗದೊಂದು ಬಾಗಿಲು. ನಿಮ್ಮ ಮನೆಯಲ್ಲಿ ಕಾಣಿಸಿಕೊಂಡಿರುವ ಬಿಲಗಳನ್ನು ಮೊದಲು ಮುಚ್ಚಿ ಎಂದು ಟಾಂಗ್ ನೀಡಿದರು.
ಇದನ್ನು ಓದಿ: ಗಡಿಯಲ್ಲಿ High Alert: ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್
ಎರಡು ಫ್ರಂಟ್ ಈಗಾಗಲೇ ದೆಹಲಿಗೆ ಹೋಗಿದೆ, ಉಳಿದೆರಡು ಬೆಂಗಳೂರಿನಲ್ಲೇ ಇವೆ. ನಮ್ಮಲ್ಲಿ ಎಲ್ಲವೂ ಕ್ಲೀಯರ್ ಇದೆ. ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.