ETV Bharat / state

ಜಾತಿ ಹೆಸರಲ್ಲಿ ಮತ ಕೇಳುವ ‌ನಿಮಗೆ ‌ನಾಚಿಕೆ ಆಗಲ್ವಾ: ಆರ್ ಅಶೋಕ್ ಟಾಂಗ್

ಆರ್​ಆರ್ ನಗರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸಚಿವ ಆರ್.ಅಶೋಕ್ ರೋಡ್ ಶೋ ಮೂಲಕ ಮತಯಾಚನೆ ಮಾಡಿ, ಕಾಂಗ್ರೆಸ್ ಪಕ್ಷದ ಅಧರ್ಮ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದರು..

minister-r-ashok-by-election-canvas-rr-nagara
ಜಾತಿ ಹೆಸರಲ್ಲಿ ಮತ ಕೇಳುವ ‌ನಿಮಗೆ ‌ನಾಚಿಕೆ ಆಗಲ್ವಾ: ಆರ್ ಅಶೋಕ್ ಟಾಂಗ್
author img

By

Published : Oct 31, 2020, 4:56 PM IST

ಬೆಂಗಳೂರು: ಧರ್ಮಯುದ್ಧದ ಅರ್ಥ ಗೊತ್ತೇನ್ರಿ ನಿಮಗೆ, ಜಾತಿ ಹೆಸರಲ್ಲಿ ಮತ ಕೇಳೋದು ಧರ್ಮನಾ.. ನಾಚಿಕೆ ಆಗಬೇಕು ನಿಮಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಧರ್ಮಯುದ್ಧ ಹೇಳಿಕೆಗೆ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.

ಜಾತಿ ಹೆಸರಲ್ಲಿ ಮತ ಕೇಳುವ ‌ನಿಮಗೆ ‌ನಾಚಿಕೆ ಆಗಲ್ವಾ: ಆರ್ ಅಶೋಕ್ ಟಾಂಗ್

ಮುನಿರತ್ನ ಪರ ರೋಡ್ ಶೋ ವೇಳೆ ಮಾತನಾಡಿದ ಅವರು, ಮುನಿರತ್ನ ಜಾತಿ ಕೇಳದೇ ರೇಷನ್ ಕಿಟ್ ಕೊಟ್ಟರು. ಡಿಕೆಶಿ, ಡಿಕೆಸು ಒಂದು ಕೆಜಿ, ಅರ್ಧ ಕೆಜಿ, ಹತ್ತು ಗ್ರಾಂ ಅಕ್ಕಿ ಕೊಟ್ಟರಾ?. ಅವರಿಬ್ಬರು ಕನಕಪುರದ ಜಪ ಮಾಡ್ತಿದ್ದಾರೆ. ಕನಕಪುರದಿಂದ ಆಚೆ ಬಂದು ಅವರು ಅಭಿವೃದ್ಧಿ ಮಾಡಲಿಲ್ಲ. ಕಾಂಗ್ರೆಸ್ ಪಕ್ಷದ್ದು ಅಧರ್ಮದ ರಾಜಕಾರಣ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಮನೆ ಬಾಗಿಲಿಗೆ ರಾಜ್ಯದ ಮುಖ್ಯಮಂತ್ರಿ ಬಂದಿದ್ದಾರೆ. ರಾಜ್ಯಕ್ಕೆ ಅಭಿವೃದ್ಧಿ ಹೆಸರು ಕೊಟ್ಟವರು ಬಿಎಸ್​​ವೈ. ಇವತ್ತು ನನ್ನನ್ನು ಕರೆದು 950 ಕೋಟಿ ರೂ. ಬಿಡುಗಡೆ ಮಾಡಿದರು. ಸಿದ್ದರಾಮಯ್ಯರವರು ನಯಾ ಪೈಸೆ ಕೊಟ್ಟಿಲ್ಲ. ಡಿಕೆಶಿ ವಿದ್ಯುತ್ ಸಚಿವರು ಆಗಿದ್ದರೂ, ಒಂದು ಎಲೆಕ್ಟ್ರಿಕ್ ಪೋಲ್ ಕೂಡ ಹಾಕಿಲ್ಲ. ಕಾಂಗ್ರೆಸ್‌ನವರು ಈಗ ಜಾತಿ ಹೆಸರಿನಲ್ಲಿ ಮತ ಕೇಳ್ತಾ ಇದ್ದಾರೆ. ನಿಮಗೆ ನಾಚಿಗೆ ಆಗಲ್ವಾ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ನವರು ಕೊಡೋದು ಈಸ್ಕೊಳ್ಳಿ: ಇದೇ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ಕಾಂಗ್ರೆಸ್‌ನವರು ಕೊಡುವ ಹಣವನ್ನು ಪಡೆಯಿರಿ. ಆದರೆ, ಮುನಿರತ್ನಗೆ ಮತ ಕೊಡಿ ಎಂದರು.

50 ಸಾವಿರ ಮತಗಳ ಅಂತರದಲ್ಲಿ ಮುನಿರತ್ನರನ್ನು ಗೆಲ್ಲಿಸಿ. ಯಾರ್ಯಾರು ಏನೇನು ಮಾತನಾಡುತ್ತಿದ್ದಾರೆ ಅಂತ ನಾವು ಗಮನಿಸ್ತಿದ್ದೇವೆ. ಕೊರೊನಾ ಸಂದರ್ಭದಲ್ಲಿ ಮುನಿರತ್ನ ಸಹಸ್ರಾರು ಕುಟುಂಬಗಳಿಗೆ ಊಟ ಕೊಟ್ಟವರು. ಸೂರ್ಯ ಚಂದ್ರರಷ್ಟೇ ಸತ್ಯ ಮುನಿರತ್ನರೇ ಗೆಲ್ಲೋದು. ಮುನಿರತ್ನರ ಗೆಲುವು ನಿಮ್ಮ ಅಭಿವೃದ್ಧಿ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.