ETV Bharat / state

ಬಿಜೆಪಿಯವರ ದಂಧೆಯೇ ಆಪರೇಷನ್ ಮಾಡುವುದು: ಸಚಿವ ಪ್ರಿಯಾಂಕ್​ ಖರ್ಗೆ

ಶಾಸಕರನ್ನು ಸೆಳೆಯೋದು ಬಿಜೆಪಿ ತಂತ್ರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಚಿವ ಪ್ರಿಯಾಂಕ ಖರ್ಗೆ
ಸಚಿವ ಪ್ರಿಯಾಂಕ ಖರ್ಗೆ
author img

By ETV Bharat Karnataka Team

Published : Oct 30, 2023, 3:15 PM IST

ಬೆಂಗಳೂರು : ಬಿಜೆಪಿಯವರಿಗೆ ಅಧಿಕಾರ ಇಲ್ಲ. ವಾಮ ಮಾರ್ಗದಿಂದ ಬರಲು ಪ್ರಯತ್ನ ಮಾಡ್ತಾರೆ. ಬಿಜೆಪಿಯವರ ದಂಧೆಯೇ ಆಪರೇಷನ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉನ್ನತ ಸ್ಥಾನ, ಹಣದ ಆಮಿಷ ಇಡ್ತಾರೆ. ಶಾಸಕರನ್ನು ಸೆಳೆಯೋದು ಬಿಜೆಪಿ ತಂತ್ರ. ಈಗ ರಾಜ್ಯದಲ್ಲಿ ಅವರು ಅಧಿಕಾರಕ್ಕೆ ಬಂದಿಲ್ಲ, ಸೋತಿದ್ದಾರೆ. ಅವರನ್ನು ಹೈಕಮಾಂಡ್ ನಿರ್ಲಕ್ಷ್ಯ ಮಾಡಿದೆ. ಅವರ ರಾಜ್ಯದ ನಾಯಕರನ್ನ ನಿರ್ಲಕ್ಷ್ಯ ಮಾಡಿದೆ. ಹೈಕಮಾಂಡ್ ನಯಾ ಪೈಸೆ ಬೆಲೆ ಕೊಡ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳೋಕೆ ಹೆಣಗಾಡ್ತಿದ್ದಾರೆ. ನಾವೂ ಜೀವಂತ ಇದ್ದೇವೆಂದು ತೋರಿಸಿಕೊಳ್ತಿದ್ದಾರೆ ಎಂದು ಕಿಡಿಕಾರಿದರು.

ಚರ್ಚೆ ನಡೆದಿದ್ದು ಹುದ್ದೆ ಬಗ್ಗೆ ಅಲ್ಲ ಮುದ್ದೆ ಬಗ್ಗೆ: ಗೃಹ ಸಚಿವ ಜಿ ಪರಮೇಶ್ವರ್​ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅಲ್ಲಿ ನಡೆದಿದ್ದ ಚರ್ಚೆ ಬಗ್ಗೆ ಮಾಧ್ಯಮದವರಿಗೇ ಹೆಚ್ಚಿಗೆ ಗೊತ್ತಿದ್ದಂತಿದೆ. ಆದ್ರೆ ಆವತ್ತು ಚರ್ಚೆ ನಡೆದಿದ್ದು, ಹುದ್ದೆ ಬಗ್ಗೆ ಅಲ್ಲ, ಮುದ್ದೆ ಬಗ್ಗೆ. ನಮ್ಮ ನಾಯಕರನ್ನು ಊಟಕ್ಕೆ ಕರೆದಿದ್ರು ಅಷ್ಟೇ. ಇದರ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಊಟದ ನಂತರ ಏನೇನೋ ವ್ಯಾಖ್ಯಾನ ಆಗ್ತಿದೆ. ಆ ವ್ಯಾಖ್ಯಾನಗಳನ್ನು ನಾವ್ಯಾರು ಕೊಟ್ಟಿಲ್ಲ. ಪರಮೇಶ್ವರ್, ಸಿಎಂ, ಸತೀಶ್ ಜಾರಕಿಹೊಳಿ ಕೊಟ್ಟಿಲ್ಲ. ಆವತ್ತು ಅವರನ್ನ ಊಟಕ್ಕೆ ಕರೆದಿದ್ರು. ಇನ್ನೊಂದು ದಿನ ಡಿಕೆಶಿ ಸಾಹೇಬ್ರಿಗೂ ಕರೀತಾರೆ. ಡಿಸಿಎಂ ಬರದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಖರ್ಗೆ ಹೇಳಿದ್ರು.

ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈಗ ಆ ಪ್ರಶ್ನೆಯೇ ಇಲ್ವಲ್ಲ. ಈಗ ಎಲ್ಲರಿಗೂ ಹುದ್ದೆ ನೀಡಲಾಗಿದೆ. ಕೊಟ್ಟ ಹುದ್ದೆಯನ್ನು ಎಲ್ಲರೂ ನಿರ್ವಹಿಸುತ್ತಿದ್ದಾರೆ. ಮುಂದಿನ ತೀರ್ಮಾನ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧ. ಪರಮೇಶ್ವರ್ ಗೃಹಸಚಿವರಿದ್ದಾರೆ. ಮಹದೇವಪ್ಪ ಅವರಿಗೆ ಸಮಾಜಕಲ್ಯಾಣ ಇಲಾಖೆ ಇದೆ. ನಾನು RDPR ಇದ್ದೇನೆ. ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಎಲ್ಲರಿಗೂ ಜವಾಬ್ದಾರಿ ಕೊಟ್ಟಿದ್ದಾರೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿರ್ವಹಿಸಲಿದ್ದೇವೆ ಎಂದು ತಿಳಿಸಿದರು. ಅಧಿಕಾರ ಹಂಚಿಕೆ ನಾಲ್ವರಿಗಷ್ಟೇ ಗೊತ್ತು. ರಾಜ್ಯದ ಇಬ್ಬರು, ದೆಹಲಿಯ ಇಬ್ಬರಿಗೆ ಗೊತ್ತು. ಇನ್ಯಾರಿಗೂ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ರು.

ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಆಗಿಲ್ಲ: ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಬ್ಲೂಟೂತ್ ಬಳಸಿ ಪರೀಕ್ಷೆ ನಡೆಸುವ ಪ್ರಯತ್ನ ನಡೆದಿದೆ. ಯಾದಗಿರಿ, ಕಲಬುರಗಿಯಲ್ಲಿ ನಡೆದಿದೆ. ಪರೀಕ್ಷೆ ಅಕ್ರಮ ಆಗದಂತೆ ಕ್ರಮ ತೆಗೆದುಕೊಂಡಿದ್ದೇವೆ‌. ಹಾಗಾಗಿ ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ಆಗಿಲ್ಲ. ಪರೀಕ್ಷಾ ಕೇಂದ್ರ ಎಂಟ್ರಿ ಮೊದಲೇ ಅಕ್ರಮ ತಡೆಯಲಾಗಿದೆ. ಎಲ್ಲರನ್ನೂ ವಶಕ್ಕೆ ಪಡೆದಿದ್ದೇವೆ‌. ಪರೀಕ್ಷೆ ನಡೆಯುವ ಒಂದು ಗಂಟೆ ಮೊದಲೇ ಪತ್ತೆ ಹಚ್ಚಲಾಗಿದೆ‌‌. ಈಗಾಗಲೇ 9 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ. ಅಕ್ರಮಕ್ಕೆ ಬ್ರೇಕ್ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮುನ್ನೆಚ್ಚರಿಕೆಯಿಂದ ಅಕ್ರಮಕ್ಕೆ ಬ್ರೇಕ್ ಬಿದ್ದಿದೆ.

ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದೇ ಇಲ್ಲ ಅಂದ್ರು. ನಾವು ಸಾರ್ವಜನಿಕರ ಮುಂದೆ ಇಟ್ರೂ ಕೂಡ ಅಕ್ರಮ ನಡೆದಿಲ್ಲ ಅಂದ್ರು. ಆದ್ರೆ ನಾವು ಹಾಗಲ್ಲ. ಮೆಟಲ್ ಡಿಟೆಕ್ಟರ್, ಬ್ಲೂಟೂತ್, ಎಲ್ಲಾ ಡಿವೈಸ್ ಕೊಟ್ಟು ತಪಾಸಣೆ ಮಾಡಿಸಿದ್ದೇವೆ. ಆದ್ರು ಒಂದೆರಡು ಗೊತ್ತಿಲ್ಲದೆ ಹೋಗಿವೆ. ಇಲ್ಲ ಅಂತ ನಾವು ಹೇಳಲ್ಲ. ಯಾರೇ ಇದ್ರೂ ಕಾನೂನಿಗೆ ಹೊರತಲ್ಲ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಆಗಲಿದೆ ಎಂದು ಸಚಿವ ಖರ್ಗೆ ತಿಳಿಸಿದರು.

ಇದನ್ನೂ ಓದಿ: ಸಾರ್ವಜನಿಕ ದೂರು ಆಧರಿಸಿ ನಳ ಸಂಪರ್ಕ ಕಾಮಗಾರಿಗಳ ತಪಾಸಣೆ ಕಾರ್ಯ ಆರಂಭ: ಪ್ರಿಯಾಂಕ್ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.