ETV Bharat / state

ಇನ್ನೂ 25 ವರ್ಷ ಬಿಜೆಪಿ ಆಡಳಿತ : ಸಚಿವ ನಾರಾಯಣ ಗೌಡ ಭವಿಷ್ಯ

ಬೇರೆ ಪಕ್ಷದಿಂದ ನಾನೂ ಬಂದವನು. ನನಗೆ ಅಲ್ಲಿ ಅಸಮಾಧಾನವಿತ್ತು. ನನಗೆ ಅಲ್ಲಿ ಇಷ್ಟವಿರಲಿಲ್ಲ ಹೀಗಾಗಿ ನಾನು ಬಿಜೆಪಿಗೆ ಸೇರಿದೆ. ಬಿಜೆಪಿ ಶುದ್ಧ ಪಕ್ಷ. ಯಾವುದೇ ಹಣ ಪಡೆದು ನಾನು ಬಿಜೆಪಿ ಸೇರಿಲ್ಲಾ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹೇಳಿಕೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ Etv Bharat
Narayana Gowda Minister in charge of Shimoga districtEtv Bharat
author img

By

Published : Nov 2, 2022, 12:15 PM IST

ಶಿವಮೊಗ್ಗ: ಬಿಜೆಪಿ ಶುದ್ಧ ಪಕ್ಷ. ಯಾವುದೇ ಹಣ ಪಡೆದು ನಾನು ಬಿಜೆಪಿ ಸೇರಿಲ್ಲಾ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣ ಗೌಡ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟಿಬಿ ಅವರು ಏತಕ್ಕಾಗಿ ಆ ರೀತಿ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನಿನ್ನೂ ಅವರನ್ನೂ ಭೇಟಿ ಮಾಡಿಲ್ಲ. ಭೇಟಿ ನಂತರ ತಿಳಿಸುತ್ತೇನೆ. ಈ ಕುರಿತು ವಿವರವಾಗಿ ಚರ್ಚಿಸುವೆ ಎಂದರು.

ಇನ್ನೂ 25 ವರ್ಷ ಬಿಜೆಪಿ ಅಧಿಕಾರದಲ್ಲಿ: ಆಪರೇಷನ್‌ ಕಮಲಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ನೋಡಿ ನಾನೂ ಬೇರೆ ಪಕ್ಷದಿಂದ ಬಂದವನು. ನನಗೆ ಅಲ್ಲಿ ಅಸಮಾಧಾನವಿತ್ತು. ನನಗೆ ಅಲ್ಲಿ ಇಷ್ಟವಿರಲಿಲ್ಲ, ಹಾಗಾಗಿ ನಾನು ಬಿಜೆಪಿಗೆ ಸೇರಿದೆ. ದೇಶದಲ್ಲಿ ನಾನು ಯೋಚಿಸಿದ ಹಾಗೆ ಇನ್ನೂ 25 ವರ್ಷ ಬಿಜೆಪಿ ಅಧಿಕಾರದಲ್ಲಿ ಇರುತ್ತೆ ಎಂದು ಭವಿಷ್ಯ ನುಡಿದರು.

ಬೊಮ್ಮಾಯಿ ಸಿಎಂ ಆಗಿ ಉತ್ತಮ ಆಡಳಿತ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಅದನ್ನು ಮೆಚ್ಚಿ ನಾನು ಬಿಜೆಪಿಗೆ ಬಂದೆ. ನಾನು ಇಷ್ಟಪಟ್ಟು ಬಿಜೆಪಿಗೆ ಬಂದೆ. ನಾವೆಲ್ಲ ಬಿಜೆಪಿಗೆ ಬಂದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಉತ್ತಮ ಸರ್ಕಾರವನ್ನೂ ನೀಡಿದರು. ಈಗ ಬಸವರಾಜ ಬೊಮ್ಮಾಯಿ ಸಹ ಸಿಎಂ ಆಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಇಂತಹ ಸರ್ಕಾರ ನೋಡಿ ಮೆಚ್ಚಿ ಬರುವವರನ್ನು ನಾವೇಕೆ ತಡೆಯಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಪ್ರತಿಕ್ರಿಯೆ

ತೆಲಂಗಾಣ ಆಪರೇಷನ್‌ ಕಮಲ ಸುಳ್ಳು: ಎಲ್ಲರ ಹಿನ್ನೆಲೆ ನೋಡಿಯೇ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಮ್ಮ ಬ್ಯಾಕ್​ಗ್ರೌಂಡ್‌ ನೋಡಿಯೇ ಸೇರಿಸಿಕೊಂಡರು. ಬಿಜೆಪಿ ಎಂದರೆ ಶುದ್ಧವಾದ ಅಭಿವೃದ್ಧಿ ಮಾಡುವ ಪಕ್ಷ. ಹಾಗಾಗಿ ನಮ್ಮ ಪಕ್ಷಕ್ಕೆ ಬೇರೆ ಬೇರೆ ಪಕ್ಷಗಳಿಂದ ನಾಯಕರು ಬರ್ತಾರೆ. ತೆಲಂಗಾಣದಲ್ಲಿನ ಆಪರೇಷನ್‌ ಕಮಲ ನಡೆದಿದೆ ಅನ್ನೋದು ಸುಳ್ಳು. ಬಿಜೆಪಿಯವರು ಎಂದು ಅವರು ಹೇಳಿ ಹಿಡಿಸಿದ್ದು, ಅವರಿಗೆ ಕರ್ನಾಟಕದಲ್ಲಿ ಏನೂ ಬೇಸ್ ಇದೆ. ಮೂರು ದಿನಕ್ಕೊಮ್ಮೆ ಬರ್ತಿದ್ದಾರೆ. ಕರ್ನಾಟಕದಲ್ಲಿ ನಾವೆಲ್ಲಾ ಹದಿನೇಳು ಜನ ಬಿಜೆಪಿಗೆ ಬರುವಾಗ ಹಣ ಪಡೆದು ಸೇರಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೋಡಿ ಸೇರಿದ್ವಿ. ನಮ್ಮ ಮೇಲೂ ಆರೋಪ ಮಾಡಿದ್ದರು ಎಂದು ಹೇಳಿದರು.

ಡಿಕೆಶಿಗೆ ವಿಷಯ ಗೊತ್ತಿಲ್ಲದೆ ಮಾತಾಡ್ತಾರೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಏನೂ ವಿಷಯ ಗೊತ್ತಿಲ್ಲ. ಹಾಗಾಗಿ ಮತ್ತೆ ಆಪರೇಷನ್‌ ಕಮಲದ ಬಗ್ಗೆ ಮಾತನಾಡುತ್ತಾರೆ. ನಮಗೆ ಕೆಲಸವಿದೆ ಜೊತೆಗೆ ಜವಾಬ್ದಾರಿ ಸಹ ಇದೆ. ನಾವು ಬಿಜೆಪಿಯಲ್ಲಿ ಕೆಲಸ ಮಾಡಿಯೇ ಗುರುತಿಸಿಕೊಂಡಿದ್ದೇವೆ. ಬೇರೆಯವರ ಬಗ್ಗೆ ಅನಗತ್ಯ ಟೀಕೆ ಟಿಪ್ಪಣಿಗಳೇಕೆ ಎಂದು ಸುಮ್ಮನ್ನಿದ್ದೇವೆ ಎಂದರು.

ಏಕರೂಪ ನೀತಿ ಸಂಹಿತೆ ಜಾರಿ ಕುರಿತು ಚರ್ಚೆಗಳಾಗುತ್ತಿವೆ. ಈಗಲೇ ಏನೂ ಹೇಳಲು ಬರೋದಿಲ್ಲ. ಚುನಾವಣೆ ಸಮಯದಲ್ಲಿ ಈ ವಿಷಯಗಳು ಚರ್ಚೆಗೆ ಬರುತ್ತವೆ ಎಂಬುದು ಸುಳ್ಳು. ಯಾವಾಗ ಕಾನೂನು ಜಾರಿ ತರಬೇಕೋ ಆ ಸಮಯದಲ್ಲಿ ತರುತ್ತಾರೆ. ಕಾದು ನೋಡೋಣ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ಕಟೀಲ್ ಜೋಕರ್​ಗಿಂತ ಕಡೆ: ಕಾಂಗ್ರೆಸ್​ ವಕ್ತಾರ ಲಕ್ಷ್ಮಣ್ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.