ETV Bharat / state

ಸಂಸ್ಥೆ ನೋಂದಾಯಿಸಲು ಆಗದ್ದಕ್ಕೆ ಉದ್ಯಮಿ ಅಸಮಾಧಾನ: ಸಮಸ್ಯೆ ಬಗೆಹರಿಸುವುದಾಗಿ ಸಚಿವ ಎಂ ಬಿ ಪಾಟೀಲ್ ಭರವಸೆ - ಉದ್ಯಮಿ ಬ್ರಿಜ್ ಸಿಂಗ್

ಸಂಸ್ಥೆಯನ್ನು ನೋಂದಾಯಿಸಲು ಆಗದೇ ಇರುವುದಕ್ಕೆ ನೊಂದು ಅಮೆರಿಕಕ್ಕೆ ಮರಳುವುದಾಗಿ ಹೇಳಿದ್ದ ಉದ್ಯಮಿಯ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಚಿವ ಎಂ ಬಿ ಪಾಟೀಲ್ ನೀಡಿದ್ದಾರೆ.

minister-mb-patil-assured-the-businessman-that-he-would-solve-the-problem
ಸಂಸ್ಥೆಯನ್ನು ನೋಂದಾಯಿಸಲು ಆಗದಕ್ಕೆ ಉದ್ಯಮಿ ಅಸಮಾಧಾನ: ಸಮಸ್ಯೆ ಬಗೆಹರಿಸುವುದಾಗಿ ಉದ್ಯಮಿಗೆ ಭರವಸೆ ನೀಡಿದ ಸಚಿವ ಎಂ.ಬಿ ಪಾಟೀಲ್
author img

By

Published : Jul 30, 2023, 7:23 PM IST

ಬೆಂಗಳೂರು: ಭಾರತೀಯ ಮೂಲದ ಉದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಹೊಸ ಸಂಸ್ಥೆಯನ್ನು ನೋಂದಾಯಿಸಲು ಎದುರಿಸುತ್ತಿರುವ ಸಂಕಷ್ಟವನ್ನು ಹಂಚಿಕೊಂಡು, ಅಮೆರಿಕಕ್ಕೆ ಮರುಳುವುದಾಗಿ ಹೇಳಿ ಟ್ವಿಟರ್​ನಲ್ಲಿ ತಮ್ಮ ನೋವು ತೋಡಿಕೊಂಡಿದ್ದರು. ಸದ್ಯ ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಸಮಸ್ಯೆ ಬಗೆಹರಿಸುವುದಾಗಿ ಉದ್ಯಮಿಗೆ ಭರವಸೆ ನೀಡಿದ್ದಾರೆ.

ಈ ಕುರಿತು ಸಚಿವ ಎಂ ಬಿ ಪಾಟೀಲ್, " ನಿಮ್ಮ ಈ ಸಮಸ್ಯೆಗಾಗಿ ಕ್ಷಮೆಯಾಚಿಸುತ್ತೇನೆ. ಕಂಪನಿಯ ಸ್ಥಾಪನೆಯನ್ನು ಸಾಮಾನ್ಯವಾಗಿ ಸಿಎಗಳು ಮಾಡುತ್ತಾರೆ ಮತ್ತು ಅದಕ್ಕೆ ಆರ್​ಒಸಿ ನಿಂದ ಅನುಮೋದನೆ ಪಡೆಯಲು 15-20 ದಿನಗಳಿಗಿಂತ ಹೆಚ್ಚು ತೆಗೆದುಕೊಳ್ಳಬಾರದು. (ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಹಾಗೂ ಎಲ್ಲಾ ರಾಜ್ಯಗಳಿಗೂ ಒಂದೇ ಆಗಿರುತ್ತದೆ) ನಿಮಗೆ ಏನಾದರೂ ಸಮಸ್ಯೆಯಿದ್ದರೆ ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ಅದನ್ನು ಬಗೆಹರಿಸಲು ಸಂತೋಷಪಡುತ್ತೇನೆ” ಎಂದು ಉದ್ಯಮಿ ಬ್ರಿಜ್ ಸಿಂಗ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

  • Sorry to hear about your problem.

    Company formation is usually done by CAs and shouldn’t take more than 15-20 days, to get it cleared by RoC(which falls under the central government, and is the same for all states).

    However if you have any issues I’d be happy to meet personally… https://t.co/VudqgIt4CT

    — M B Patil (@MBPatil) July 29, 2023 " class="align-text-top noRightClick twitterSection" data=" ">

ಸಚಿವರ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿರುವ ಉದ್ಯಮಿ ಬ್ರಿಜ್ ಸಿಂಗ್, " ನನ್ನ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ನಿಮ್ಮನ್ನು ಶ್ಲಾಘಿಸುತ್ತೇನೆ. ನಿಮ್ಮ ಟ್ವೀಟ್ ನನಗೆ ಹೆಚ್ಚು ಆತ್ಮವಿಶ್ವಾಸ ನೀಡಿದೆ. ಅಗತ್ಯವಿದ್ದರೆ ನಿಮ್ಮ ತಂಡವನ್ನು ನಾನು ಭೇಟಿಯಾಗುವೆ. ನಿಮ್ಮ ಬೆಂಬಲಕ್ಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ" ಎಂದು ರಿಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಸಂಸ್ಥೆಯನ್ನು ನೋಂದಾಯಿಸಲು ಆಗದ್ದಕ್ಕೆ ಅಸಮಾಧಾನಗೊಂಡಿದ್ದ ಉದ್ಯಮಿ: ಎರಡು ತಿಂಗಳು ಕಳೆದರೂ ತಮ್ಮ ಹೊಸ ಸಂಸ್ಥೆಯನ್ನು ನೋಂದಾಯಿಸಲು ಆಗದಿದ್ದ ಕಾರಣಕ್ಕೆ, ಭಾರತೀಯ ಮೂಲದ ಉದ್ಯಮಿ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿ ಅಮೆರಿಕಾಗೆ ವಾಪಸ್ ಹೋಗುವುದಾಗಿ ತಿಳಿಸಿದ್ದರು. ಈ ಕುರಿತು ಗುರುವಾರ ಟ್ವಿಟ್ ಮಾಡಿದ್ದ ಉದ್ಯಮಿ ಬ್ರಿಜ್ ಸಿಂಗ್ "ಎರಡು ತಿಂಗಳು ಕಳೆದರೂ ಬೆಂಗಳೂರಲ್ಲಿ ನನ್ನ ಹೊಸ ಕಂಪನಿ ನೋಂದಣಿ ಮಾಡಲು ಆಗಲಿಲ್ಲ. ಭಾರವಾದ ಹೃದಯದಿಂದ ಅಮೆರಿಕಕ್ಕೆ ವಾಪಸ್ ಹೋಗುತ್ತಿದ್ದೇನೆ" ಎಂದು ತಮ್ಮ ಟ್ವೀಟ್​ನಲ್ಲಿ ಬರೆದುಕೊಂಡಿದ್ದರು.

ಭಾರತವನ್ನು ಪ್ರೀತಿಸುತ್ತೇನೆ. ಆದರೆ, ಮನೆಗೆ ಬಂದ ನಂತರ ಸಾಕಷ್ಟು ಕೆಟ್ಟ ಅನುಭವವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಪನಿ ನೋಂದಾಯಿಸಲು ಎರಡು ತಿಂಗಳು ಕಳೆದರೂ ಆಗಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಕಂಪನಿಯ ಸಹ ಸಂಸ್ಥಾಪಕರು, ಹೂಡಿಕೆದಾರರಿಗೆ ಅಸಮಾಧಾನವಾಗಿದೆ. ಹೀಗಾಗಿ ಅಮೆರಿಕಾಗೆ ಹಿಂದಿರುಗುತ್ತಿದ್ದೇನೆ. ಇದನ್ನು ಭಾರವಾದ ಹೃದಯದಿಂದ ಹೇಳಬೇಕಾಗಿದೆ ಎಂದು ಬರೆದುಕೊಂಡಿದ್ದರು.

ಬ್ರಿಜ್ ಸಿಂಗ್ ಅವರು ತಂತ್ರಜ್ಞಾನದ ಉದ್ಯಮಗಳನ್ನು ಅಮೆರಿಕ ಹಾಗೂ ಭಾರತದಲ್ಲಿ ನಡೆಸುತ್ತಿದ್ದಾರೆ. ಅವರು ಟ್ವಿಟರ್​ ಬ್ಲ್ಯೂಟಿಕ್ ವೆರಿಫೈಡ್ ಖಾತೆ ಹೊಂದಿದ್ದು, 8,403 ಫಾಲೋವರ್‌ಗಳು ಇದ್ದಾರೆ.

ಮಿಶ್ರ ಪ್ರತಿಕ್ರಿಯೆ: ಈ ಟ್ವಿಟ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಲಕ್ಷಾಂತರ ರಿಟ್ವಿಟ್ ಆಗಿತ್ತು. ಕೆಲವರು ನಿಮ್ಮ ಅನುಭವ ನಿಜ ಎಂದು ಹೇಳಿದರೆ, ಇನ್ನೂ ಕೆಲವರು ಆರೋಪವನ್ನು ಅಲ್ಲಗಳೆದಿದ್ದರು. ಕೆಲವರು ಬೆಂಗಳೂರಿನಲ್ಲಿ ಕಂಪನಿ ನೋಂದಾಯಿಸುವುದು ಸುಲಭ. ಏಳು ದಿನಗಳಲ್ಲಿ ಮಾಡಬಹುದಾದ ಪ್ರಕ್ರಿಯೆಯಾಗಿದೆ ಎಂದು ರಿಯಾಕ್ಟ್ ಮಾಡಿದ್ದರು.

ಇದನ್ನೂ ಓದಿ: Jay Sha: ಕುಕ್ಕೆ ದೇವಳದಲ್ಲಿ ಅಮಿತ್ ಶಾ ಪುತ್ರ.. ಆಶ್ಲೇಷ ಬಲಿ ಸೇವೆ ಸಲ್ಲಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.