ETV Bharat / state

ಆರ್ಥಿಕ ಪರಿಸ್ಥಿತಿ ಸರಿದೂಗಿಸಲು 33 ಸಾವಿರ ಕೋಟಿ ರೂ. ಸಾಲ ಪಡೆಯಲು ಸಂಪುಟ ಸಭೆ ಒಪ್ಪಿಗೆ - J.C. Madhuswamy press meet

ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 11 ಸಾವಿರ ಕೋಟಿ ರೂ. ಒದಗಿಸಬೇಕು ಎಂಬ ನಮ್ಮ ಪ್ರಸ್ತಾವ ಕೇಂದ್ರದ ಮುಂದಿದೆ. ಜಿಎಸ್‌ಟಿ ಪರಿಹಾರ ಸಾಲಕ್ಕೂ, ಇದಕ್ಕೂ ಸಂಬಂಧ ಇಲ್ಲ. ಇದು ಜಿಎಸ್‌ಡಿಪಿ ಹಾಗೂ ವಿತ್ತೀಯ ಕೊರತೆಯ ಮಿತಿಯೊಳಗೆ ಸರ್ಕಾರ ವಾರ್ಷಿಕವಾಗಿ ತೆಗೆದುಕೊಳ್ಳುವ ಸಾಲ..

madhuswamy
ಜೆ.ಸಿ. ಮಾಧುಸ್ವಾಮಿ
author img

By

Published : Sep 15, 2020, 6:03 PM IST

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ನಿಂದಾಗಿ ಉಂಟಾಗಿದ್ದ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಹಾಗೂ ಅಭಿವೃದ್ಧಿಯ ಕಾರ್ಯಗಳಿಗೆ ಹಣ ಕಲ್ಪಿಸುವ ಉದ್ದೇಶದಿಂದ ಈ ವರ್ಷ ಹೊಸದಾಗಿ 33 ಸಾವಿರ ಕೋಟಿ ರೂ.ಗಳ ಸಾಲ ಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು, ಕೋವಿಡ್‌ನಿಂದ ರಾಜ್ಯದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಕಡಿಮೆಯಾಗಿರುವುದರಿಂದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಹಾಗಾಗಿ, ಆರ್ಥಿಕ ಪರಿಸ್ಥಿತಿ ಸರಿದೂಗಿಸಿ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲು 33 ಸಾವಿರ ಕೋಟಿ ರೂ. ಸಾಲ ಮಾಡುವ ತೀರ್ಮಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಆರ್ಥಿಕ ಪರಿಸ್ಥಿತಿ ಸರಿದೂಗಿಸುವ ನಿಟ್ಟಿನಲ್ಲಿ 33 ಸಾವಿರ ಕೋಟಿ ರೂ. ಹೊಸ ಸಾಲ ಪಡೆಯಲು ಅನುವಾಗುವಂತೆ ಆರ್ಥಿಕ ಹೊಣೆಗಾರಿಕ ಅಧಿನಿಯಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ಈ ತಿದ್ದುಪಡಿಯಿಂದ ಸಾಲ ಪಡೆಯಲು ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಈವರೆಗೂ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಡಿ ವಿತ್ತೀಯ ಕೊರತೆ ಮಿತಿಯೊಳಗೆ ಜಿಎಸ್‌ಡಿಪಿಯ ಶೇ. 3ರಷ್ಟು ಸಾಲ ಪಡೆಯಲು ಅವಕಾಶವಿತ್ತು. ಈಗ ಕೋವಿಡ್‌-19 ನಿಂದ ಶೇ.2ರಷ್ಟು ಹೆಚ್ಚು ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆ ಕಾರಣಕ್ಕಾಗಿ ಆರ್ಥಿಕ ಹೊಣೆಗಾರಿಕಾ ಅಧಿನಿಯಮಕ್ಕೆ ತಿದ್ದುಪಡಿ ತಂದು ಸಾಲದ ಪ್ರಮಾಣವನ್ನು ಶೇ. 3 ರಿಂದ 5ಕ್ಕೆ ಹೆಚ್ಚಿಸಿಕೊಂಡು 33 ಸಾವಿರ ಕೋಟಿ ರೂ. ಸಾಲ ಪಡೆಯಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 11 ಸಾವಿರ ಕೋಟಿ ರೂ. ಒದಗಿಸಬೇಕು ಎಂಬ ನಮ್ಮ ಪ್ರಸ್ತಾವ ಕೇಂದ್ರದ ಮುಂದಿದೆ. ಜಿಎಸ್‌ಟಿ ಪರಿಹಾರ ಸಾಲಕ್ಕೂ, ಇದಕ್ಕೂ ಸಂಬಂಧ ಇಲ್ಲ. ಇದು ಜಿಎಸ್‌ಡಿಪಿ ಹಾಗೂ ವಿತ್ತೀಯ ಕೊರತೆಯ ಮಿತಿಯೊಳಗೆ ಸರ್ಕಾರ ವಾರ್ಷಿಕವಾಗಿ ತೆಗೆದುಕೊಳ್ಳುವ ಸಾಲ. ಈ ಮೊದಲು ಶೇ. 3 ರಷ್ಟು ಮಿತಿಯೊಳಗೆ ಸಾಲ ಮಾಡಲಾಗುತ್ತಿತ್ತು. ಈ ವರ್ಷ ಕೋವಿಡ್‌ನಿಂದ ಶೇ.5ರಷ್ಟರವರೆಗೂ ಸಾಲ ಮಾಡಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಅದರಂತೆ 33 ಸಾವಿರ ಕೋಟಿ ರೂ.ಗಳ ಸಾಲ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಬಳಲಾಗುವುದು ಎಂದು ಹೇಳಿದರು.

ಅನುದಾನ: ಸರ್ಕಾರಿ ಆಸ್ಪತ್ರೆಗಳಲ್ಲಿ ಎಇಆರ್‌ಟಿ ಸುರಕ್ಷತಾ ಘಟಕ ಅಳವಡಿಸಲು ತೀರ್ಮಾನ. 583 ಎಕ್ಸ್‌ರೇ ಘಟಕಗಳಿಗೆ ಸುರಕ್ಷತಾ ಕ್ರಮಕ್ಕಾಗಿ 11.66 ಕೋಟಿ ರೂ. ಅನುದಾನ ಹಾಗೂ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ 84.69 ಕೋಟಿ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಲು ಸಂಪುಟ ತೀರ್ಮಾನಿಸಿದೆ ಎಂದರು.

ಸಾದಿಲ್ವಾರು ನಿಧಿ 80 ರಿಂದ 500 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಕೈಗಾರಿಕಾ ಕಾಯ್ದೆ ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಲಾಗಿದೆ. ಬೆಳಗಾವಿ ತಾಲೂಕಿನಲ್ಲಿ ರಾಣಿ ಚೆನ್ನಮ್ಮ ವಿವಿಗೆ 87.31 ಎಕರೆ ಜಮೀನು ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ. ನೆಲಮಂಗಲದಲ್ಲಿ ಮೂರು ಎಕರೆ ಜಮೀನನ್ನು ಶ್ರೀಗುರುದೇವ ಸಂಸ್ಥೆಗೆ ಆಶ್ರಮ ನಿರ್ಮಿಸಲು ಮಂಜೂರು ಮಾಡಲು ಒಪ್ಪಿದ್ದು, ಮಾರ್ಗಸೂಚಿ ದರದಲ್ಲಿ ಶೇ‌.25 ವಿನಾಯಿತಿ, ಲಕ್ಕುಂಡಿ ಪ್ರಾಧಿಕಾರ ರಚನೆಗೆ ಅನುಮತಿ, ಹಾಸನ ನಗರಾಭಿವೃದ್ಧಿಗೆ ಬಡಾವಣೆ ನಿರ್ಮಿಸಲು15.31 ಕೋಟಿ ರೂ. ಮಂಜೂರು ಮಾಡಲು ಒಪ್ಪಿಗೆ, ಶ್ರೀಜಗದ್ಗುರು ಮುರುಘ ರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕಗಳಿಗೆ ಸಂಪುಟ ಸಭೆ ಅನುಮೋದನೆ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳೊಂದಿಗೆ ಬದಲಿಸುವ ಇಂಧನ ಕ್ಷಮತೆಯ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ 109.91 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಬೆಂಗಳೂರಿನ ಅಗರ ಕೆರೆಯಿಂದ 35 ಎಂಎಲ್‌ಡಿ ನೀರನ್ನು ಕೊಂಡೊಯ್ಯಲು ಅಳವಡಿಸುವ ಕಾಮಗಾರಿಯ ಪೈಪ್‌ಲೈನ್‌ನಲ್ಲಿ ಭಾಗಶಃ ಮಾರ್ಪಾಡು ಮಾಡಿ ಹೆಚ್ಚುವರಿಯಾಗಿ ಹುಳಿಮಾವು ಮತ್ತು ಚಿಕ್ಕ ಬೇಗೂರು ಎಸ್‌ಟಿಪಿಯಿಂದ ಲಭ್ಯ ಇರುವ 15 ಎಂಎಲ್‌ಡಿಯೊಂದಿಗೆ ಒಟ್ಟು 50 ಎಂಎಲ್‌ಡಿ ನೀರನ್ನು ಈಗಾಗಲೇ ಅಳವಡಿಸಿರುವ ಆನೇಕಲ್ ಯೋಜನೆಯ ಪೈಪ್‌ಲೈನ್‌ಗೆ ಜೋಡಣೆ ಮಾಡುವ 30 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ದಾವಣಗೆರೆ ಜಿಲ್ಲೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಮಾಚೇನಹಳ್ಳಿ ಗುರುಕುಲ ವಿದ್ಯಾ ಸಂಸ್ಥೆಗೆ ವಿದ್ಯಾರ್ಥಿ ನಿಲಯ ಕಟ್ಟಲು ಪ್ರತಿ ಚದುರ ಅಡಿಗೆ 100 ರೂ. ಗೆ ನೀಡಲು ತೀರ್ಮಾನ. ಹಾಸನ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಎಸ್ ಎಂ ಕೃಷ್ಣ ಬಡಾವಣೆಯಲ್ಲಿ ಅಭಿವೃದ್ಧಿ 15.34 ಕೋಟಿ ಮಂಜೂರು, ಎಸ್ಕಾಂಗಳು ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿ ನಷ್ಟ ಉಂಟಾಗಿದ್ದು, ಇದರಿಂದಾಗಿ 5,500 ಕೋಟಿ ರೂ. ಸಾಲ ಮಾಡಲು ಸರ್ಕಾರದ ಖಾತ್ರಿ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

2020-25 ಪ್ರವಾಸೋದ್ಯಮ ನೀತಿ ತಾಂತ್ರಿಕವಾಗಿ ಒಪ್ಪಿಗೆ ನೀಡಿದ್ದು, ಸೆ. 27ರಂದು ಪ್ರವಾಸೋದ್ಯಮ ದಿನವಾಗಿದೆ. ಅಂದು ಮುಖ್ಯಮಂತ್ರಿಗಳು ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.