ETV Bharat / state

'ಸಿದ್ದರಾಮಯ್ಯ ಅವರೇ ಮನೆಗೆ ಹೋಗಿ ಏನು ಮಾಡ್ತೀರಾ?' ನಗೆಗಡಲಲ್ಲಿ ತೇಲಿದ ಸದನ - ಸದನದಲ್ಲಿ ಸಚಿವ ಮಾಧುಸ್ವಾಮಿ ಮಾತು

ಬೇಗ ಮನೆಗೆ ಹೋಗಿ ಏನು ಮಾಡ್ತೀರಾ? ಎಂದು ಸಚಿವ ಮಾಧುಸ್ವಾಮಿ ಅವರು ಇಂದು ಸದನದಲ್ಲಿ ಸಿದ್ದರಾಮಯ್ಯ ಅವರ ಕಾಲೆಳೆದರು.ಮಾಧುಸ್ವಾಮಿ ‌ಅವರ ಮಾತಿಗೆ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಧುಸ್ವಾಮಿ ನೀವು ಏನು ಮಾಡುತ್ತಿರೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಮನೆಯಲ್ಲಿ ಏನ್ ಮಾಡ್ತಾರೆ ಅಂತ ಹೇಳೋಕೆ ಆಗಲ್ಲ ಎಂದು ಕಿಚಾಯಿಸಿದರು.

session
ಸದನ
author img

By

Published : Sep 21, 2021, 8:30 PM IST

ಬೆಂಗಳೂರು: ಸಿದ್ದರಾಮಯ್ಯ ಅವರೇ ಮನೆಗೆ ಹೋಗಿ ಏನು ಮಾಡ್ತೀರಾ? ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಕೇಳಿದ ಪ್ರಶ್ನೆಗೆ ವಿಧಾನಸಭೆಯಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು.

ಮೈಸೂರು ಅತ್ಯಾಚಾರ ಪ್ರಕರಣದ ವಿಚಾರವಾಗಿ ಮಾತನಾಡಬೇಕು, ಎರಡು ದಿನದಿಂದ ಕಾಯುತ್ತಿದ್ದೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅವಕಾಶ ಕೋರಿದರು.‌ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ವಿಧೇಯಕ ಪಾಸ್ ಮಾಡಿಕೊಳ್ಳೋಣ, ವಿಧಾನಪರಿಷತ್​​ಗೆ ಹೋಗಬೇಕು ಎಂದರು. ಇದಕ್ಕೆ ಮೈಸೂರು ಘಟನೆ ಮೊದಲು ಚರ್ಚೆಯಾಗಲಿ ಆಮೇಲೆ ಬಿಲ್ ಪಾಸ್ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟರು.‌ ಆಗ ಬೇಗ ಮನೆಗೆ ಹೋಗಿ ಏನು ಮಾಡ್ತೀರಾ? ಎಂದು ಮಾಧುಸ್ವಾಮಿ ಅವರು, ಸಿದ್ದರಾಮಯ್ಯ ಅವರ ಕಾಲೆಳೆದರು.

ಮಾಧುಸ್ವಾಮಿ ‌ಅವರ ಮಾತಿಗೆ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಧುಸ್ವಾಮಿ ನೀವು ಏನು ಮಾಡುತ್ತಿರೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಮನೆಯಲ್ಲಿ ಏನ್ ಮಾಡ್ತಾರೆ ಅಂತ ಹೇಳೋಕೆ ಆಗಲ್ಲ ಎಂದು ಕಿಚಾಯಿಸಿದರು. ಇದು ಸದನವನ್ನು ನಗೆಗಡಲಲ್ಲಿ ತೇಲಿಸಿತು. ಬಿಲ್ ಮುಗಿಸಿ ತೆಗೆದುಕೊಳ್ಖುವುದಾಗಿ ಸ್ಪೀಕರ್ ಹೇಳಿದಾಗ, ಸಿದ್ದರಾಮಯ್ಯ ಹೊರ ನಡೆಯಲು ಎದ್ದು ನಿಂತರು.‌ಆಗ ಮನೆಯಲ್ಲಿ ಹೋಗಿ ಏನು ಮಾಡ್ತಿರಿ, ಇಲ್ಲಿ ಕುಳಿತುಕೊಳ್ಳಿ ಎಂದು ಸ್ಪೀಕರ್ ಕಾಗೇರಿ ಹೇಳಿದರು. ಮಾಧುಸ್ವಾಮಿ ಕೂಡಾ ಇದಕ್ಕೆ ಧ್ವನಿಗೂಡಿಸಿದರು.

ಇದಕ್ಕೆ, ನಾನೇನು ಮಾಡ್ತೀನಿ ಅಂತ ನಿಮಗೆ ಗೊತ್ತು, ನೀವೇನು ಮಾಡ್ತೀರಿ ಅಂತ ನನಗೆ ಗೊತ್ತು ಎಂದು ಸಿದ್ದರಾಮಯ್ಯ ಅವರು, ಮಾಧುಸ್ವಾಮಿ ಅವರಿಗೆ ನಗುತ್ತಾ, ನಡೀರಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.