ETV Bharat / state

ಹಿಂದುಳಿದ ತಾಲೂಕುಗಳ ವಾಸ್ತವ ಪರಿಶೀಲನೆಗಾಗಿ ಹೊಸ ಸಮಿತಿ ರಚಿಸಲು ಚಿಂತನೆ : ಸಚಿವ ಜೆ ಸಿ ಮಾಧುಸ್ವಾಮಿ

ಚರ್ಮಗಂಟು ರೋಗದಿಂದ ಸಾವನ್ನಪ್ಪುವ ರಾಸುಗಳಿಗೆ ಪರಿಹಾರ ಹೆಚ್ಚಳ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು - ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​

ಸಚಿವ ಜೆ ಸಿ ಮಾಧುಸ್ವಾಮಿ
ಸಚಿವ ಜೆ ಸಿ ಮಾಧುಸ್ವಾಮಿ
author img

By

Published : Feb 13, 2023, 6:00 PM IST

ಬೆಂಗಳೂರು : ರಾಜ್ಯದ ಹಿಂದುಳಿದ ತಾಲೂಕುಗಳ ವಾಸ್ತವ ಪರಿಸ್ಥಿತಿಯ ಪರಿಶೀಲನೆಗಾಗಿ ಹೊಸ ಸಮಿತಿ ರಚಿಸುವ ಚಿಂತನೆ ಸರ್ಕಾರಕ್ಕಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಇಂದು ಹಿಂದುಳಿದ ವರ್ಗಗಳ ತಾಲ್ಲೂಕುಗಳ ಅಭಿವೃದ್ಧಿ ಸ್ಥಿತಿಗತಿಯ ಬಗ್ಗೆ ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಧ್ಯೆ ಪ್ರವೇಶಿಸಿ, ಹಿಂದುಳಿದ ವರ್ಗಗಳ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಡಾ ಡಿ ಎಂ ನಂಜುಂಡಪ್ಪ ಅವರ ವರದಿ ನೀಡಿ 20 ವರ್ಷಗಳಾಗಿದೆ. ಈ ಬಗ್ಗೆ ವಾಸ್ತವಾಂಶ ಪರಿಶೀಲಿಸಲು ಹೊಸ ಸಮಿತಿ ರಚಿಸುವುದಾಗಿ ಸರ್ಕಾರ ಹೇಳಿತ್ತು. ಈ ಸಮಿತಿ ರಚನೆಯಿಂದ ಆಗಿರುವ ತಾರತಮ್ಯ ಸರಿಪಡಿಸಬಹುದಾಗಿದೆ. ಸಮಿತಿ ರಚನೆ ವಿಚಾರ ಏನಾಗಿದೆ ಎಂದು ಪ್ರಶ್ನಿಸಿದರು.

ಆಗ ಸಚಿವ ಮಾಧುಸ್ವಾಮಿ ಅವರು ಮಾತನಾಡಿ, ಈಗ ತಾಲೂಕುಗಳ ವಿಭಜನೆ, ಹೊಸ ತಾಲೂಕುಗಳ ರಚನೆಯಿಂದ ಹಿಂದುಳಿದ ತಾಲೂಕುಗಳ ಸ್ಥಿತಿಗತಿಯೇ ಬದಲಾಗಿದೆ. ಕೆಲವು ಹಿಂದುಳಿದ ತಾಲೂಕುಗಳು ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿವೆ. ಕೆಲವೆಡೆ ಕೈಗಾರಿಕೆಗಳು ಬಂದಿವೆ. ಹಾಗಾಗಿ ವಾಸ್ತವಾಂಶವನ್ನು ಪರಿಶೀಲಿಸಲು ಸಮಿತಿ ರಚಿಸುವುದು ಸರಿಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಚಿಂತನೆ ನಡೆಸಲಿದೆ ಎಂದು ಹೇಳಿದರು.

ಸಿಎಂ ಜೊತೆ ಚರ್ಚೆ : ಚರ್ಮಗಂಟು ರೋಗದಿಂದ ಸಾವನ್ನಪ್ಪುವ ರಾಸುಗಳಿಗೆ ಪರಿಹಾರ ಹೆಚ್ಚಳ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ವಿಧಾನಸಭೆಯಲ್ಲಿ ಇಂದು ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಅವರ ಪ್ರಶ್ನೆಗೆ ಉತ್ತರಿಸಿದರು. ಚರ್ಮಗಂಟು ರೋಗದಿಂದ ಸಾವನ್ನಪ್ಪುವ ರಾಸುಗಳಿಗೆ ಇಡೀ ದೇಶದಲ್ಲೇ ಪರಿಹಾರ ನೀಡಿದ ರಾಜ್ಯ ಕರ್ನಾಟಕ. ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟಿದ್ದರೂ ಅಲ್ಲಿ ಪರಿಹಾರ ನೀಡಿಲ್ಲ. ಕರ್ನಾಟಕ ಪ್ರತಿ ಹಸುವಿಗೆ 20 ಸಾವಿರ ಪರಿಹಾರ ನೀಡುತ್ತಿದೆ ಎಂದರು.

ಕರ್ನಾಟಕ ಸರ್ಕಾರ ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ಘೋಷಿಸಿರುವುದನ್ನು ಗಮನಿಸಿ ಈಗ ಮಹಾರಾಷ್ಟ್ರ ಸರ್ಕಾರ ಪರಿಹಾರ ಘೋಷಿಸುತ್ತಿದೆ. ಪರಿಹಾರ ನೀಡಿಕೆಯಲ್ಲಿ ಕರ್ನಾಟಕವೇ ಮೊದಲ ರಾಜ್ಯ ಎಂದು ಹೇಳಿದರು. ಈ ಪರಿಹಾರವನ್ನು ಹೆಚ್ಚಳ ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಭರವಸೆಯನ್ನು ಅವರು ನೀಡಿ, ಇದುವರೆಗೂ ಚರ್ಮಗಂಟು ರೋಗದಿಂದ ಮೃತಪಟ್ಟ ಹಸುಗಳಿಗೆ ಪರಿಹಾರ ನೀಡಲು 37 ಕೋಟಿ ರೂ. ಹಣ ಒದಗಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಿಮೆಗೆ ಮಲೆನಾಡು ಗಿಡ್ಡ ಸೇರ್ಪಡೆ : ರಾಸುಗಳಿಗೆ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ವಿಮೆಗೆ ಒಳಪಡಿಸುವ ಸಂಬಂಧ ವಿಮಾ ಸಂಸ್ಥೆಯನ್ನು ಗುರುತಿಸಲು ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ 14 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಈ ವಿಮೆಗೆ ಒಳಪಡುವ ಜಾನುವಾರುಗಳಲ್ಲಿ ಮಲೆನಾಡು ಗಿಡ್ಡ ರಾಸುಗಳನ್ನು ಸೇರಿಸಲು ಕ್ರಮ ವಹಿಸುವುದಾಗಿಯೂ ಅವರು ಕಾಂಗ್ರೆಸ್ ಸದಸ್ಯ ಅಜಯ್ ಧರ್ಮಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದರು.

ಆಡಳಿತ ಸೌಧ ನಿರ್ಮಿಸಲು ಪ್ರಸ್ತಾವನೆ : ವಿಜಯಪುರ ಜಿಲ್ಲೆಯ ನೂತನ ನಿಡಗುಂದಿ ಮತ್ತು ಕೊಲ್ಲಾರ ತಾಲ್ಲೂಕುಗಳಲ್ಲಿ ಹೊಸ ಆಡಳಿತ ಸೌಧ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದಷ್ಟು ಶೀಘ್ರ ಇದಕ್ಕೆ ಅನುಮೋದನೆ ಸಿಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಶಿವಾನಂದ ಎಸ್. ಪಾಟೀಲ್ ಪ್ರಶ್ನೆಗೆ ಉತ್ತರಿಸಿದರು.

ಹೊಸ ತಾಲೂಕುಗಳಲ್ಲಿ ಆಡಳಿತ ಸೌಧ ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಹೊಸದಾಗಿ ರಚನೆಯಾದ ಕೆಜಿಎಫ್, ಮೂಡುಬಿದರೆ, ಕಡಬ, ಮುಲ್ಕಿ, ಬ್ರಹ್ಮಾವರ, ಕಾಪು, ಬೈಂದೂರು, ಹೆದ್ರಿ, ಕುರಗೋಡು, ಕಂಪ್ಲಿ, ಬಬಲೇಶ್ವರ, ತ್ರಿಕೋಟ ಮತ್ತು ದಾಂಡೇಲಿ ತಾಲೂಕುಗಳಲ್ಲಿ ಆಡಳಿತ ಸೌಧ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ನಿಡಗುಂದ ಮತ್ತು ಕೊಲ್ಲಾರ ತಾಲೂಕುಗಳ ಆಡಳಿತ ಸೌಧ ನಿರ್ಮಾಣಕ್ಕೆ ತಲಾ 10 ಕೋಟಿ ರೂ. ಪ್ರಸ್ತಾವನೆ ಸ್ವೀಕೃತವಾಗಿದೆ. ಇದನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದ್ದು, ಆದಷ್ಟು ಶೀಘ್ರ ಅನುದಾನ ಮಂಜೂರು ಮಾಡುವುದಾಗಿ ಸಚಿವರು ಹೇಳಿದರು.

ಇದಕ್ಕೂ ಮೊದಲು ಸದಸ್ಯ ಶಿವಾನಂದ ಪಾಟೀಲ್, ಬಬಲೇಶ್ವರ, ತ್ರಿಕೋಟಗಳು ಒಂದೇ ಕ್ಷೇತ್ರಕ್ಕೆ ಬರುತ್ತವೆ. ಒಂದು ಕ್ಷೇತ್ರಕ್ಕೆ ಎರಡೆರಡು ಆಡಳಿತ ಸೌಧ ಕೊಟ್ಟಿದ್ದೀರಿ, ನಮಗೆ ಕೊಟ್ಟಿಲ್ಲ. ಹಾಗಾಗಿ ನಮಗೂ ಆದಷ್ಟು ಶೀಘ್ರ ಮಂಜೂರು ಮಾಡಿಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ನೀವು ಮುಖ್ಯಮಂತ್ರಿಯಾಗುವವರು : ಇದೇ ಸಂದರ್ಭದಲ್ಲಿ ಶಿವಾನಂದ ಪಾಟೀಲ್ ಅವರು ಪ್ರಶ್ನೆ ಕೇಳುವಾಗ, ನೀವು ಹಿರಿಯ ಸಚಿವರು (ಅಶೋಕ್). ನೀವು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವವರು ಎಂದು ಕಾಲೆಳೆದರು. ಆಗ ಸಚಿವ ಆರ್. ಅಶೋಕ್ ಅವರು ಮಾತನಾಡಿ, ಎಲ್ಲದಕ್ಕೂ ಹಣೆಬರಹ ಬೇಕು. ಹಣೆಬರಹ ಇದ್ದರೆ ಸಿಎಂ ಆಗಬಹುದು ಎಂದು ತಿರುಗೇಟು ನೀಡಿದರು. ಇದರ ಮಧ್ಯೆಯಲ್ಲಿ ಸಚಿವ ಜೆ. ಸಿ ಮಾಧುಸ್ವಾಮಿ ಅವರು, ಶಿವಾನಂದ ಪಾಟೀಲ್ ಅವರೇ ನೀವು ಬೆಂಬಲ ಕೊಟ್ಟರೆ ಸಿಎಂ ಆಗಬಹುದು ಎಂದು ಟಾಂಗ್ ಕೊಟ್ಟರು.

ಇದನ್ನೂ ಓದಿ : ಹುಲಿ ದಾಳಿ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಶಿಸ್ತು ಕ್ರಮ: ಸಚಿವ ಜೆ.ಸಿ.ಮಾಧುಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.