ETV Bharat / state

ಎಸ್​ಸಿಎಸ್​ಪಿ/ಟಿಎಸ್​ಪಿ ಅನುದಾನ ಬಳಸದೇ ಇದ್ದರೆ ಕಠಿಣ ಕ್ರಮ.. ಡಿಸಿಎಂ ಕಾರಜೋಳ - Govindha karajola latest news

ವಿಕಾಸಸೌಧದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಎಸ್​ಸಿಎಸ್​ಪಿ/ಟಿಎಸ್​ಪಿ ವಿಶೇಷ ಕಾಯ್ದೆಯಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ನೀಡಿದರು.

govindha karajola
ಗೋವಿಂದ ಕಾರಜೋಳ
author img

By

Published : Dec 16, 2019, 9:55 PM IST

ಬೆಂಗಳೂರು: ಎಸ್​ಸಿಎಸ್​ಪಿ/ಟಿಎಸ್​ಪಿ ವಿಶೇಷ ಕಾಯ್ದೆಯಡಿ ಈ ವರ್ಷ 30,445 ಕೋಟಿ ರೂ.ಒದಗಿಸಲಾಗಿದೆ. ನವೆಂಬರ್ ಅಂತ್ಯದೊಳಗೆ 11,861.69 ಕೋಟಿ.ರೂ ವೆಚ್ಚವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಗೋವಿಂದ ಕಾರಜೋಳ..

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾವ ಇಲಾಖೆಯಲ್ಲಿ ಅನುದಾನ ಸಮರ್ಪಕವಾಗಿ ಬಳಸಲು ಸಾಧ್ಯವಾಗಿಲ್ಲ. ಅಂಥಹ ಇಲಾಖೆ ಅಧಿಕಾರಿಗಳು ಕೂಡಲೇ ತಿಳಿಸುವಂತೆ ಸೂಚನೆ ನೀಡಿದ್ದೇವೆ‌. ಅನುದಾನ ನಿರ್ದಿಷ್ಟ ಕಾರ್ಯಕ್ರಮಕ್ಕೆ ಬಳಸಬೇಕು. ಇಲ್ಲವಾದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.

ಯಾವ ಇಲಾಖೆಗಳಲ್ಲಿ ಅನುದಾನ ಖರ್ಚಾಗದೆ ಉಳಿಕೆಯಾಗಿದೆ. ಆ ಅನುದಾನವನ್ನು ಅಗತ್ಯ ಇರುವ ಇಲಾಖೆಗಳಿಗೆ ಮರು ಹಂಚಿಕೆ ಮಾಡಲು ತಿಳಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಎಲ್ಲಾ ಕಾರ್ಯಕ್ರಮಗಳು ಈಗಾಗಲೇ ಅನುಷ್ಠಾನದ ಹಂತದಲ್ಲಿದ್ದು, ಒಟ್ಟು 39% ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳ ದುರಸ್ಥಿಗೆ ₹200 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅಂತರ್ಜಾತಿ ವಿವಾಹ ಪ್ರಕರಣಗಳಲ್ಲಿ 2,184 ದಂಪತಿಗೆ 43.27 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೋನಿಗಳ ಅಭಿವೃದ್ಧಿಗಾಗಿ 160 ಕೋಟಿ ರೂ. ಅನುದಾನ ನೀಡಲಾಗಿದೆ. ಪರಿಶಿಷ್ಟ ಪಂಗಡದ ಆದಿವಾಸಿ ಸಮುದಾಯಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಯೋಜನೆಯಡಿ 37 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಗಂಗಾ ಕಲ್ಯಾಣ ಯೋಜನೆಯಡಿ 300 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.ಅತಿವೃಷ್ಟಿ ಸಂತ್ರಸ್ತರಿಗೆ ಎಸ್​ಸಿಎಸ್​ಪಿ/ಟಿಎಸ್​ಪಿ ಯೋಜನೆಯಡಿ 350 ಕೋಟಿ ರೂ. ನೀಡಲಾಗಿದೆ. ಖರ್ಚಾಗದೆ ಉಳಿದ ಹಣವನ್ನು ವಾಪಸ್ ಇಲಾಖೆಗೆ ಸರೆಂಡರ್ ಮಾಡಲು ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಕೆಲ ಇಲಾಖೆಗಳ ಕಳಪೆ ಪದರ್ಶನ: ಎಸ್​ಸಿಎಸ್​ಪಿ/ಟಿಎಸ್​ಪಿ ಯೋಜನೆಯಡಿ ಕೆಲ ಇಲಾಖೆಗಳು ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದೆ. ಅದರಲ್ಲಿ ಲೋಕೋಪಯೋಗಿ ಇಲಾಖೆಯೂ ಎಸ್‌ಸಿಪಿಟಿಎಸ್‌ಪಿ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದೆ.ಕೃಷಿ‌ ಇಲಾಖೆ ಬರೇ ಶೇ. 39, ಎಸ್​ಸಿಎಸ್​ಪಿ/ಟಿಎಸ್​ಪಿ ಅನುದಾನ ಬಳಕೆ ಮಾಡಿದೆ. ಇತ್ತ ಅರಣ್ಯ ಇಲಾಖೆ ಕೇವಲ ಶೇ.14, ಎಸ್‌ಸಿಎಸ್‌ಪಿ ಹಾಗೂ ಶೇ.13 ಟಿಎಸ್‌ಪಿ ಅನುದಾನ ಬಳಕೆ ಮಾಡಿದೆ.

ಪಶುಸಂಗೋಪನೆ ಇಲಾಖೆ ಕೇವಲ ಶೇ.26 ಎಸ್​ಸಿಎಸ್​ಪಿ/ಟಿಎಸ್​ಪಿ ಅನುದಾನ ಬಳಕೆ ಮಾಡಿದೆ. ಆರೋಗ್ಯ ಇಲಾಖೆ ಕೇವಲ 23ಶೇ. ಎಸ್​ಸಿಎಸ್​ಪಿ/ಟಿಎಸ್​ಪಿ ಅನುದಾನ ಬಳಕೆ ಮಾಡಿದೆ. ಲೋಕೋಪಯೋಗಿ ಇಲಾಖೆ ಕೇವಲ 17ಶೇ. ಎಸ್​ಸಿಎಸ್​ಪಿ/ಟಿಎಸ್​ಪಿ ಅನುದಾನ ಬಳಕೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 26ಶೇ‌. ಎಸ್​ಸಿಎಸ್​ಪಿ ಅನುದಾನ ಬಳಕೆ ಮಾಡಿದರೆ, ಕೇವಲ 14 ಶೇ‌. ಟಿಎಸ್​ಪಿ ಅನುದಾನ ಬಳಸಿದೆ.

Intro:Body:KN_BNG_04_KARAJOLA_PRESSMEET_SCRIPT_7201951

ಎಸ್ ಸಿಎಸ್ ಪಿ/ಟಿಎಸ್ ಪಿ ಅನುದಾನ ಬಳಸದೇ ಇದ್ದರೆ ಕಠಿಣ ಕ್ರಮ: ಸಚಿವ ಕಾರಜೋಳ

ಬೆಂಗಳೂರು: ಎಸ್ ಸಿ ಎಸ್ ಪಿ/ಟಿಎಸ್ ಪಿ ವಿಶೇಷ ಕಾಯ್ದೆಯಡಿಯಲ್ಲಿ ಈ ವರ್ಷ 30,445 ಕೋಟಿ ರೂ.ಒದಗಿಸಲಾಗಿದ್ದು, ನವೆಂಬರ್ ಅಂತ್ಯದೊಳಗೆ 11,861.69 ಕೋಟಿ.ರೂ ವೆಚ್ಚವಾಗಿದೆ ಎಂದು ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾವ ಇಲಾಖೆ ಅನುದಾನವನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗಿಲ್ಲ. ಅಂಥವರು ಕೂಡಲೇ ತಿಳಿಸುವಂತೆ ಸೂಚನೆ ನೀಡಿದ್ದೇವೆ‌. ಅನುದಾನ ನಿರ್ದಿಷ್ಟ ಕಾರ್ಯಕ್ರಮಕ್ಕೆ ಬಳಸಬೇಕು. ಇಲ್ಲವಾದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಯಾವ ಇಲಾಖೆಗಳಲ್ಲಿ ಅನುದಾನ ಖರ್ಚಾಗದೆ ಉಳಿಕೆಯಾಗಿದೆ. ಆ ಅನುದಾನವನ್ನು ಅಗತ್ಯ ಇರುವ ಇಲಾಖೆಗಳಿಗೆ ಮರುಹಂಚಿಕೆ ಮಾಡಲು ತಿಳಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಎಲ್ಲಾ ಕಾರ್ಯಕ್ರಮಗಳು ಈಗಾಗಲೇ ಅನುಷ್ಟಾನದ ಹಂತದಲ್ಲಿದ್ದು, ಒಟ್ಟು 39% ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳ ದುರಸ್ತಿಗೆ ಇನ್ನೂರು ಕೋಟಿ ವೆಚ್ಚ ಮಾಡಲಾಗುತ್ತಿದೆ. ಅಂತರ್ಜಾತಿ ವಿವಾಹ ಪ್ರಕರಣಗಳಲ್ಲಿ 2,184 ದಂಪತಿಗಳಿಗೆ 43.27 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೋನಿಗಳ ಅಭಿವೃದ್ಧಿ ಗಾಗಿ 160 ಕೋಟಿ ರು. ಅನುದಾನ ನೀಡಲಾಗಿದೆ. ಪರಿಶಿಷ್ಟ ಪಂಗಡದ ಆದಿವಾಸಿ ಸಮುದಾಯಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಯೋಜನೆಯಡಿ 37 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 300 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಅತಿವೃಷ್ಟಿ ಸಂತ್ರಸ್ತರಿಗೆ ಎಸ್ ಸಿಎಸ್ ಪಿ/ಟಿಎಸ್ ಪಿ ಯೋಜನೆಯಡಿ 350 ಕೋಟಿ ರೂ. ನೀಡಲಾಗಿದೆ. ಖರ್ಚಾಗದೆ ಉಳಿದ ಹಣವನ್ನು ವಾಪಸ್ ಇಲಾಖೆಗೆ ಸರೆಂಡರ್ ಮಾಡಲು ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಕೆಲ ಇಲಾಖೆಗಳ ಕಳಪೆ ಪದರ್ಶನ:

ಎಸ್ ಸಿಪಿ ಟಿಎಸ್ ಪಿ ಯೋಜನೆಯಡಿ ಕೆಲ ಇಲಾಖೆಗಳು ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದೆ. ಅದರಲ್ಲಿ ಲೋಕೋಪಯೋಗಿ ಇಲಾಖೆಯೂ ಎಸ್ ಸಿಪಿ ಟಿಎಸ್ ಪಿ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದೆ.

ಕೃಷಿ‌ ಇಲಾಖೆ ಬರೇ 39ಶೇ. ಎಸ್ ಸಿಎಸ್ ಪಿ/ ಟಿಎಸ್ ಪಿ ಅನುದಾನ ಬಳಕೆ ಮಾಡಿದೆ. ಇತ್ತ ಅರಣ್ಯ ಇಲಾಖೆ ಕೇವಲ 14 ಶೇ.ಎಸ್ ಸಿಎಸ್ ಪಿ ಹಾಗೂ 13ಶೇ. ಟಿಎಸ್ ಪಿ ಅನುದಾನ ಬಳಕೆ ಮಾಡಿದೆ.

ಪಶುಸಂಗೋಪನೆ ಇಲಾಖೆ ಕೇವಲ ಶೇ.26 ಎಸ್ ಸಿಎಸ್ ಪಿ/ಟಿಎಸ್ ಪಿ ಅನುದಾನ ಬಳಕೆ ಮಾಡಿದೆ. ಆರೋಗ್ಯ ಇಲಾಖೆ ಕೇವಲ 23ಶೇ. ಎಸ್ ಸಿಎಸ್ ಪಿ/ಟಿಎಸ್ ಪಿ ಅನುದಾನ ಬಳಕೆ ಮಾಡಿದೆ. ಇನ್ನು ಲೋಕೋಪಯೋಗಿ ಇಲಾಖೆ ಕೇವಲ 17ಶೇ. ಎಸ್ ಸಿಎಸ್ ಪಿ/ಟಿಎಸ್ ಪಿ ಅನುದಾನ ಬಳಕೆ ಮಾಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 26ಶೇ‌. ಎಸ್ ಸಿಎಸ್ ಪಿ ಅನುದಾನ ಬಳಕೆ ಮಾಡಿದರೆ, ಕೇವಲ 14 ಶೇ‌. ಟಿಎಸ್ ಪಿ ಅನುದಾನ ಬಳಸಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.