ETV Bharat / state

ಕೃಷ್ಣಾ ಯೋಜನೆಯಡಿ ಮುಳುಗಡೆಯಾಗುವ ಪ್ರತಿ ಇಂಚು ಭೂಮಿಗೂ ಪರಿಹಾರ ನೀಡಿ ನೀರು ನಿಲ್ಲಿಸುತ್ತೇವೆ : ಕಾರಜೋಳ

author img

By

Published : Dec 21, 2021, 3:59 PM IST

ಒಂದು ಇಂಚು ಭೂಮಿ ಮುಳುಗಡೆ ಆದರೂ ನಾವು ಪರಿಹಾರ ಕೊಡಲಿದ್ದೇವೆ, ಸರ್ವೆ ಮುಗಿದು ಎಲ್ಲಿವರೆಗೆ ನೀರು ನಿಲ್ಲಲಿದೆಯೋ ಅಲ್ಲಿವರೆಗೂ ಪರಿಹಾರ ಕೊಡಲಾಗುತ್ತದೆ, ಯಾರದ್ದೇ ಒಂದು ಇಂಚು ಭೂಮಿ ಮುಳುಗಡೆ ಆದರೂ ಪರಿಹಾರ ಕೊಡಲಾಗುತ್ತದೆ. ಒಂದು ವೇಳೆ ರೈತರಿಗೆ ತಪ್ಪು ಮಾಹಿತಿ ನೀಡಿ ವಂಚಿಸಿದ್ದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೋವಿಂದ ಕಾರಜೋಳ ಭರವಸೆ ನೀಡಿದರು..

ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಬೆಂಗಳೂರು : ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಹಾಗೂ ಸಾರ್ವಜನಿಕರ ಸ್ವತ್ತಿಗೆ ಪರಿಹಾರ ನೀಡಿಯೇ ಜಲಾಶಯದಲ್ಲಿ ನೀರು ನಿಲ್ಲಿಸಲಾಗುತ್ತದೆ.

ಒಂದು ಇಂಚು ಭೂಮಿ ಮುಳಗಡೆಯಾದರೂ ಪರಿಹಾರ ನೀಡುತ್ತೇವೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.

ರೈತರ ಭೂಮಿ ಮುಳುಗಡೆಯಾದ್ರೆ ಪರಿಹಾರ ನೀಡುವುದಾಗಿ ಸಚಿವ ಕಾರಜೋಳ ಅಧಿವೇಶನದಲ್ಲಿ ಭರವಸೆ ನೀಡಿರುವುದು..

ವಿಧಾನ ಪರಿಷತ್ ಕಲಾಪದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಷಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, ಆಲಮಟ್ಟಿ ಜಲಾಶಯದಲ್ಲಿ 519 ಮೀಟರ್‌ವರೆಗೆ ನೀರು ಸಂಗ್ರಹಿಸಲು ಮುಳುಗಡೆ ಜಮೀನು ಕುರಿತು ಸರ್ವೆ ಮಾಡಲಾಗಿದೆ.

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಳುಗಡೆ ಜಮೀನು ಸರ್ವೆ ಕಾರ್ಯ ನಡೆಸಲಾಗಿದೆ. ಈ ವೇಳೆ ಕೆಲವು ಕಡೆ 524 ಮೀಟರ್‌ವರೆಗೆ ನೀರು ನಿಲ್ಲಲಿದೆ ಎಂದು ತಪ್ಪು ಮಾಹಿತಿ ನೀಡಿ ಸರ್ವೆ ಮಾಡಲಾಗಿದೆ.

ರೈತರಿಂದ ಹಣ ಪಡೆದುಕೊಂಡೋ ಅಥವಾ ಮತ್ಯಾವುದೋ ಕಾರಣಕ್ಕೆ ಈ ರೀತಿ ರೈತರಿಗೆ ವಂಚಿಸಲಾಗಿದೆ. ಈಗ ಆ ನೋಟಿಫಿಕೇಷನ್ ತಪ್ಪಾಗಿದೆ‌. 524 ಮೀಟರ್‌ವರೆಗೆ ನೀರು ನಿಲ್ಲುವುದಿಲ್ಲ ಎಂದು ನೋಟಿಫಿಕೇಷನ್ ರದ್ದು ಮಾಡಿದ್ದಾರೆ. ಇದರಿಂದ ಆ ಭಾಗದ ರೈತರು ಆತಂಕದಲ್ಲಿದ್ದಾರೆ. ಕೂಡಲೇ ಇಲ್ಲಿನ ಲೋಪದೋಶ ಸರಿಪಡಿಸಿ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸವದಿ ಪ್ರಸ್ತಾಪಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸರ್ವೆ ಮಾಡುವಾಗ ಹೆಚ್ಚು ಭೂಮಿ ಹೋಗಲಿದೆ ಎಂದು ಹೇಳಿ ಈಗ ರದ್ದು ಮಾಡಿಲ್ಲ. ಒಂದು ಇಂಚು ಭೂಮಿ ಮುಳುಗಡೆ ಆದರೂ ನಾವು ಪರಿಹಾರ ಕೊಡಲಿದ್ದೇವೆ.

ಸರ್ವೆ ಮುಗಿದು ಎಲ್ಲಿಯವರೆಗೆ ನೀರು ನಿಲ್ಲಲಿದೆಯೋ ಅಲ್ಲಿಯವರೆಗೂ ಪರಿಹಾರ ಕೊಡಲಾಗುತ್ತದೆ. ಯಾರದ್ದೇ ಒಂದು ಇಂಚು ಭೂಮಿ ಮುಳುಗಡೆ ಆದರೂ ಪರಿಹಾರ ಕೊಡಲಾಗುತ್ತದೆ. ಒಂದು ವೇಳೆ ರೈತರಿಗೆ ತಪ್ಪು ಮಾಹಿತಿ ನೀಡಿ ವಂಚಿಸಿದ್ದು ಕಂಡು ಬಂದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಉಭಯ ಸದನದಿಂದ ನಿರ್ಣಯ ಅಂಗೀಕರಿಸಿ : ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಷಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ, ಕೃಷ್ಣಾ,ಮಹಾದಾಯಿ ಸೇರಿದಂತೆ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಬಗ್ಗೆ ಉಭಯ ಸದನಗಳು ಜಂಟಿಯಾಗಿ ಒಮ್ಮತದ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎನ್ನುವ ಸಲಹೆ ನೀಡಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಸವಕಳಿಗೊಂಡ ಮತ್ತು ಅಸಾಧಾರಣ ದುರಸ್ಥಿಗೆ ಬರುತ್ತಿರುವ ನಿರೀಕ್ಷಿತ ಪಂಪ್‌ಗಳನ್ನು ಕ್ರಮೇಣವಾಗಿ ಬದಲಾಯಿಸುವ ಉದ್ದೇಶದಿಂದ ಹೊಸ ಪಂಪ್‌ಗಳ ಖರೀದಿಗೆ ಕೃಷ್ಣ ಭಾಗ್ಯ ಜಲ ನಿಗಮದ 2021-22ನೇ ಸಾಲಿನ ಕಾರ್ಯಕ್ರಮ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಎರಡು ಪಂಪ್‌ಗಳನ್ನು ಬದಲಾಯಿಸಲು ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು. ವಿಧಾನಸಭೆಯಲ್ಲಿ ಇಂದು ಸಿಂಧಗಿ ಶಾಸಕ ರಮೇಶ ಭೂಸನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ವರ್ಷ ಇಂಡಿ ಏತ ನೀರಾವರಿ ಯೋಜನೆಯ ಪಂಪ್/ಮೋಟಾರ್ ಹಾಗೂ ಇತರೇ ಉಪಕರಣಗಳ ಬದಲಾವಣೆ/ದುರಸ್ಥಿಗಾಗಿ ಹಾಗೂ ನಿರ್ವಹಣೆಗಾಗಿ ವಾರ್ಷಿಕ ಕಾರ್ಯಕ್ರಮ ಪಟ್ಟಿಯಲ್ಲಿ ಸೂಕ್ತ ಅನುದಾನವನ್ನು ಕಲ್ಪಿಸಲಾಗುತ್ತಿರುತ್ತದೆ.

ಅದರಂತೆ, ಪ್ರತೀ ವರ್ಷ ರಿಪೇರಿ ಹಾಗೂ ನಿರ್ವಹಣೆ ಕಾರ್ಯ ಕೈಗೊಳ್ಳಲಾಗುತ್ತಿತ್ತು. ವಾರ್ಷಿಕವಾಗಿ ನಿರ್ವಹಣೆಯನ್ನು ಗುತ್ತಿಗೆ ವಹಿಸಿರುವುದರಿಂದ ಯೋಜನೆಯ ಪಂಪ್/ಮೋಟಾರ್ ಹಾಗೂ ಇತರೆ ಉಪಕರಣಗಳ ಬದಲಾವಣೆ / ದುರಸ್ಥಿಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುತ್ತಿತ್ತು. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ರವರಿಗೆ Sump Model Study ಕೈಗೊಂಡಿದೆ.

ಸದರಿಯವರ ಸಲಹೆಗಳನ್ನು ಅಳವಡಿಸಿ, ಯೋಜನೆಯಲ್ಲಿನ ಪಂಪ್/ಮೋಟಾರ್ಗಳ ದುರಸ್ಥಿ ಕಾಮಗಾರಿಗಳಿಗೆ ಐದು ವರ್ಷಗಳ ಪಾಲನೆ ಮತ್ತು ಪೋಷಣೆ ಒಳಗೊಂಡಂತೆ ಟರ್ನ್ ಕೀ ಆಧಾರಿತ ಕಾಮಗಾರಿಯ ನಿರ್ವಹಣೆಯನ್ನು ಫೆಬ್ರವರಿ 2021ರಲ್ಲಿ ಗುತ್ತಿಗೆ ವಹಿಸಲಾಗಿದೆ. ಪ್ರಸ್ತುತ ಯೋಜನೆಯ ಪಾಲನೆ ಮತ್ತು ಪೋಷಣೆಯ ಗುತ್ತಿಗೆದಾರರ ನಿರ್ವಹಣೆಯಲ್ಲಿದೆ ಎಂದು ವಿವರಿಸಿದರು.

ಕೊಪ್ಪಳ ಏತ ನೀರಾವರಿ ಯೋಜನೆ ಶೀಘ್ರದಲ್ಲಿಯೇ ಪ್ರಾರಂಭ : ಬಹು ನಿರೀಕ್ಷಿತ ಕೊಪ್ಪಳ ಏತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಯೋಜನೆಯನ್ನು ಪ್ರಾರಂಭಿಸಲು ವಿದ್ಯುತ್ ಸಂಪರ್ಕಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿಯೇ ವಿದ್ಯುತ್ ಸಂಪರ್ಕ ದೊರೆಯುವ ನಿರೀಕ್ಷೆಯಿದೆ.

ಹೆಸ್ಕಾಂ ಕಂಪನಿಯಿಂದ ಬೇಡಿಕೆ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಅವರು ವಿಧಾನಸಭೆಯಲ್ಲಿ ಇಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಪ್ರಶ್ನೆಗೆ ಉತ್ತರಿಸಿದರು. ಈ ಆದೇಶ ದೊರಕಿದ ತಕ್ಷಣ ವೆಚ್ಚವನ್ನು ಹೆಸ್ಕಾಂಗೆ ಭರಿಸಿದ ಯೋಜನೆ ಪ್ರಾರಂಭ ಮಾಡಲಾಗುವುದೆಂದು ತಿಳಿಸಿದರು.

ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರಡಿಯ ಒಂದು ಪ್ರಮುಖ ಏತ ನೀರಾವರಿ ಉಪ ಯೋಜನೆಯಾಗಿದೆ. ಸದರಿ ಯೋಜನೆಯಡಿ ನಾರಾಯಣಪೂರ ಜಲಾಶಯದ ಹಿನ್ನೀರಿನಿಂದ ಆರ್.ಎಲ್.487.00 ಮೀ. ರಿಂದ ಆರ್.ಎಲ್ 660.00 ಮೀ. ವರೆಗೆ ಎರಡು ಹಂತದಡಿ ನೀರನ್ನು ಲಿಫ್ಟ್ ಮಾಡಿ ಹನಿ ನೀರಾವರಿ ಪದ್ದತಿ ಅಳವಡಿಸಿ ಕೊಪ್ಪಳ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಡಿ ಒಟ್ಟಾರೆಯಾಗಿ 2.77 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದ್ದು, ಕಾಮಗಾರಿಯ ಪ್ರಗತಿಯು ವಿವಿಧ ಹಂತದಲ್ಲಿರುವುದಾಗಿ ಸಚಿವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.