ETV Bharat / state

ನಿಮ್ಹಾನ್ಸ್​​ನಲ್ಲಿ ಮಗು ಸಾವು ಘಟನೆ ಸಂಬಂಧ ವರದಿ ಕೇಳಿದ್ದು, ಬಳಿಕ ನಿರ್ಧಾರ: ಸಚಿವ ದಿನೇಶ್ ಗುಂಡೂರಾವ್

ನಿಮ್ಹಾನ್ಸ್​ನಲ್ಲಿ ಹಾಸನ ಮೂಲದ ಮಗು ಸಾವನ್ನಪ್ಪಿರುವ ಬಗ್ಗೆ ವೈದ್ಯರಿಂದ ವರದಿ ಕೇಳಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್
author img

By ETV Bharat Karnataka Team

Published : Nov 30, 2023, 4:39 PM IST

Updated : Nov 30, 2023, 7:30 PM IST

ನಿಮ್ಹಾನ್ಸ್​​ನಲ್ಲಿ ಮಗು ಸಾವು ಘಟನೆ ಸಂಬಂಧ ವರದಿ ಕೇಳಿದ್ದು, ಬಳಿಕ ನಿರ್ಧಾರ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಇಲ್ಲಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹಾಸನ ಮೂಲದ ಮಗು ಸಾವನ್ನಪ್ಪಿದ್ದು ಬಳಿಕ ಆಕ್ರೋಶಗೊಂಡ ಕುಟುಂಬದಿಂದ ನಡೆದ ಪ್ರತಿಭಟನೆ ವಿಚಾರವಾಗಿ ವರದಿ ಕೇಳಿದ್ದೇನೆ. ಅಧಿಕಾರಿಗಳು ವರದಿ ಕೊಟ್ಟ ನಂತರ ಮುಂದೇನು ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ‌ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಎರಡೂ ಕಡೆಯವರ ಜೊತೆ ಮಾತನಾಡುತ್ತೇವೆ. ಲೋಪಗಳು ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಹಾನ್ಸ್ ಮೇಲೆ ಬಹಳ ಒತ್ತಡ ಇದೆ. ಸಾಕಷ್ಟು ರೋಗಿಗಳು ರಾಜ್ಯಾದ್ಯಂತ ಬರುತ್ತಾರೆ. ಕೆಲವೊಮ್ಮೆ ಬೆಡ್​ಗಳು ಸಿಗಲ್ಲ. ನಾನೂ ಕೆಲವೊಮ್ಮೆ ಪ್ರಯತ್ನ ಪಟ್ಟಾಗ ಬೆಡ್ ಸಿಕ್ಕಿಲ್ಲ. ಇದಕ್ಕೆ ಏನದರೂ ಪರ್ಯಾಯ ವ್ಯವಸ್ಥೆ ಕುರಿತು ಚರ್ಚೆ ಮಾಡುತ್ತೇವೆ ಎಂದರು.

ತಾಂತ್ರಿಕ ಸಲಹಾ ಸಮಿತಿ ರಚಿಸಿದ್ದೇವೆ : ಆರೋಗ್ಯ ಕವಚ ಸೇವೆ ಗುಣಮಟ್ಟದ ವೃದ್ಧಿಯಲ್ಲಿ ಕುಂಠಿತವಾಗಿರೋದು ನಿಜ.‌ ಈ ಸೇವೆಯಲ್ಲಿ ಸಾಕಷ್ಟು ಕುಂದುಕೊರತೆಗಳಿವೆ. ಲೋಪದೋಷಗಳನ್ನು ಸರಿಪಡಿಸಲು ಆರೋಗ್ಯ ಇಲಾಖೆ ಕಟಿಬದ್ಧವಾಗಿದೆ. 262 ಹೊಸ ಆಂಬ್ಯುಲೆನ್ಸ್ ಆರೋಗ್ಯ ಕವಚ ಸೇವೆಗೆ‌ ಒದಗಿಸಿ ನಾವು ಸುಮ್ಮನಾಗಲ್ಲ. ಇವುಗಳ ನಿರ್ವಹಣೆಯತ್ತ ಹೆಚ್ಚು ಗಮನ ಹರಿಸಲಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಅಲ್ಲದೇ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನು ಬೇರೆ ರಾಜ್ಯಗಳಲ್ಲಿರುವ ಉತ್ತಮ ಮಾದರಿಗಳ ಅಧ್ಯಯನಕ್ಕೆ ಕಳಿಸಲಾಗಿದೆ. ಹಿರಿಯ ಅಧಿಕಾರಿಗಳ ತಂಡ ಹಾಗೂ ತಾಂತ್ರಿಕ ಸಲಹಾ ಸಮಿತಿ ನೀಡುವ ವರದಿ ಆಧರಿಸಿ 108 ಆಂಬ್ಯುಲೆನ್ಸ್ ಆರೋಗ್ಯ ಸೇವೆಯಲ್ಲಿ ಸುಧಾರಣೆಗಳನ್ನು ಜಾರಿಗೆ ತರಲಿದ್ದೇವೆ. ಬೆಳಗಾವಿ ಅಧಿವೇಶನ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಆಸ್ಪತ್ರೆಯ ನಿರ್ದೇಶಕರನ್ನು ಕರೆದು ಮಾತನಾಡುವೆ ಎಂದ ಸಿಎಂ: ಇನ್ನು, ನಿಮ್ಹಾನ್ಸ್​ನಲ್ಲಿ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದೆ ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಬೆಳಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಈ ಕುರಿತು ಪತ್ರಿಕೆಯಲ್ಲಿ ನಾನು ಓದಿದೆ. ನಿಮ್ಹಾನ್ಸ್​​ ಆಸ್ಪತ್ರೆಯ ನಿರ್ದೇಶಕರನ್ನು ಕರೆದು ಇದರ ಈ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು.

ಇದನ್ನೂ ಓದಿ : ಹಸುಗೂಸು ಮಾರಾಟ ಪ್ರಕರಣ: 6 ವರ್ಷದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಬಿಕರಿ, ಸಿಸಿಬಿ ವಿಚಾರಣೆ ವೇಳೆ ಬೆಳಕಿಗೆ

Last Updated : Nov 30, 2023, 7:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.