ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಕುವೆಂಪು, ಬಸವಣ್ಣ ಹಾಗೂ ನಾಡಗೀತೆಗೆ ಅಪಮಾನ ಮಾಡಲಾಗಿದೆ ಎನ್ನುವ ಆರೋಪಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವರದಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭೇಟಿ ನೀಡಿದರು. ಪರಿಷ್ಕೃತ ಪಠ್ಯ ಪುಸ್ತಕ ಗೊಂದಲದ ಬಗ್ಗೆ ಸಿಎಂ ಜೊತೆ ಶಿಕ್ಷಣ ಸಚಿವ ನಾಗೇಶ್ ಹಾಗೂ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಚರ್ಚೆ ನಡೆಸಿದರು.
ಸಾಹಿತಿಗಳಿಂದ ಸರ್ಕಾರದ ಪ್ರತಿಷ್ಠಾನಗಳಿಗೆ ರಾಜೀನಾಮೆ, ಲೇಖನ ವಾಪಸ್ಗೆ ಪತ್ರ ಬರೆದಿರುವುದು, ಕುವೆಂಪು, ನಾಡಗೀತೆಗೆ ಅಪಮಾನ ಆರೋಪ ಕುರಿತ ವಿವಾದ ಸೇರಿದಂತೆ ಪರಿಷ್ಕೃತ ಪಠ್ಯದ ಎದ್ದಿರುವ ಗೊಂದಲದ ಬಗ್ಗೆ ಶಿಕ್ಷಣ ಸಚಿವರು ಸಿಎಂಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಚೆಡ್ಡಿಗೆ ಬೆಂಕಿ ಹಚ್ಚಿದ್ದು ತಪ್ಪು, ಅದು ನಮ್ಮ ಬ್ರ್ಯಾಂಡ್ : ಸಂಸದ ಜಿ ಎಸ್ ಬಸವರಾಜ್