ETV Bharat / state

ಸಚಿವ ಸುಧಾಕರ್​​ ನಿರ್ವಹಿಸುತ್ತಿರುವ ಕೋವಿಡ್​​ ಜವಾಬ್ದಾರಿ ಆರ್​​. ಅಶೋಕ್​​ ಹೆಗಲಿಗೆ

author img

By

Published : Jun 25, 2020, 5:25 PM IST

ವೈದ್ಯಕೀಯ ಶೀಕ್ಷಣ ಸಚಿವ ಸುಧಾಕರ್​ ಹೋಮ್​ ಕ್ವಾರಂಟೈನ್​​ನಲ್ಲಿರುವ ಹಿನ್ನೆಲೆ ಅವರು ನಿರ್ವಹಿಸುತ್ತಿದ್ದ ಕೋವಿಡ್​ ಜವಾಬ್ದಾರಿಗಳನ್ನು ಸಚಿವ ಆರ್​​.ಅಶೋಕ್​​ಗೆ ಸಿಎಂ ಬಿಎಸ್​ವೈ ತಾತ್ಕಲಿಕವಾಗಿ ವರ್ಗಾಯಿಸಿದ್ದಾರೆ. ವಿಡಿಯೋ ಸಂವಾದದ ಮೂಲಕ ಸುಧಾಕರ್ ಸಹಕಾರ ನೀಡಲಿದ್ದಾರೆ. ಅವರ ಜೊತೆ ಸಮನ್ವಯತೆ ಕಾಯ್ದುಕೊಂಡು ಕೊರೊನಾ ನಿರ್ವಹಣಾ ಜವಾಬ್ದಾರಿ ನಿರ್ವಹಿಸುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ.

minister ashok handle kovid responsibilites
ಸಚಿವ ಆರ್​​. ಅಶೋಕ್​​

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನಿರ್ವಹಿಸುತ್ತಿರುವ ಬೆಂಗಳೂರು ಕೋವಿಡ್ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಕಂದಾಯ ಸಚಿವ ಆರ್. ಅಶೋಕ್​ ಅವರಿಗೆ ವಹಿಸಲಾಗಿದೆ.

ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಸಚಿವ ಡಾ. ಸುಧಾಕರ್ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಅವರು ನಿರ್ವಹಿಸುತ್ತಿರುವ ಕೋವಿಡ್ ಜವಾಬ್ದಾರಿಯನ್ನು ಸುಧಾಕರ್ ಕ್ವಾರಂಟೈನ್ ನಿಂದ ವಾಪಸ್ ಬರುವವರೆಗೂ ತಾತ್ಕಾಲಿಕವಾಗಿ ನಿರ್ವಹಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌಖಿಕವಾಗಿ ಸೂಚನೆ ನೀಡಿದ್ದಾರೆ.

ಸುಧಾಕರ್ ಹೋಂ ಕ್ವಾರಂಟೈನ್​ನಲ್ಲಿರುವ ಕಾರಣಕ್ಕೆ ಅವರ ಉಪಸ್ಥಿತಿಯಲ್ಲಿ ನಡೆಯಬೇಕಿರುವ ಬೆಂಗಳೂರು ಕೊರೊನಾ ನಿಯಂತ್ರಣ ಕುರಿತು ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಸುಧಾಕರ್ ಹಾಜರಾಗಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಕೊರೊನಾ ನಿಯಂತ್ರಣ ವಿಚಾರದಲ್ಲಿ ಯಾವುದೇ ಸಮಸ್ಯೆ ಮತ್ತು ಹಿನ್ನಡೆಯೂ ಆಗಬಾರದು. ಹಾಗಾಗಿ ತಾತ್ಕಾಲಿಕವಾಗಿ ಜವಾಬ್ದಾರಿ ನಿರ್ವಹಿಸಿ, ವಿಡಿಯೋ ಸಂವಾದದ ಮೂಲಕ ಸುಧಾಕರ್ ಸಹಕಾರ ನೀಡಲಿದ್ದಾರೆ. ಅವರ ಜೊತೆ ಸಮನ್ವಯತೆ ಕಾಯ್ದುಕೊಂಡು ಕೊರೊನಾ ನಿರ್ವಹಣಾ ಜವಾಬ್ದಾರಿ ನಿರ್ವಹಿಸುವಂತೆ ಅಶೋಕ್ ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.