ETV Bharat / state

ಅವರವರ ಊರಿಗೆ ವಲಸೆ‌ ಕಾರ್ಮಿಕರ ಸ್ಥಳಾಂತರ: ಇಲ್ಲಿಯವರೆಷ್ಟು, ಹೊರ ರಾಜ್ಯದವರೆಷ್ಟು? - ರಾಜ್ಯದ ವಲಸೆ‌ ಕಾರ್ಮಿಕರನ್ನು ಗ್ರಾಮಗಳಿಗೆ ಸ್ಥಳಾಂತರ:

ಆಯಾ ಜಿಲ್ಲಾಡಳಿತಗಳು ಇಚ್ಛಿಸಿದ ರಾಜ್ಯದ ವಲಸೆ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆ ಮಾಡಿ ಅವರವರ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ.

Migrant workers in the state evacuate to the villages
ರಾಜ್ಯದ ವಲಸೆ‌ ಕಾರ್ಮಿಕರನ್ನು ಗ್ರಾಮಗಳಿಗೆ ಸ್ಥಳಾಂತರ
author img

By

Published : Apr 26, 2020, 9:43 PM IST

ಬೆಂಗಳೂರು: ಈಗಾಗಲೇ ಸರ್ಕಾರ ರಾಜ್ಯದ ವಲಸೆ‌ ಕಾರ್ಮಿಕರನ್ನು ತಮ್ಮ ಗ್ರಾಮಗಳಿಗೆ ಹೋಗಲು ಅನುವು ಮಾಡಿಕೊಟ್ಟಿದೆ. ತಮ್ಮ ಊರುಗಳಿಗೆ ಹೋಗಲು ಇಚ್ಛಿಸುವ ಕಾರ್ಮಿಕರನ್ನು ತಪಾಸಣೆ ಮಾಡಿ ಅವರ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ. ರಾಜ್ಯದ ಒಟ್ಟು ವಲಸೆ ಕಾರ್ಮಿಕರು ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರು ಎಲ್ಲಿ ಎಷ್ಟಿದ್ದಾರೆ ಎಂಬ ಸಮಗ್ರ ವರದಿ ಇಲ್ಲಿದೆ.

ಲಾಕ್​ಡೌನ್​ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವುದು ವಲಸೆ ಕಾರ್ಮಿಕರು. ಸರ್ಕಾರ ಅವರ ಹಿತರಕ್ಷಣೆಗಾಗಿ ಹಲವು ಕಾರ್ಯಯೋಜನೆ ರೂಪಿಸಿದೆ. ಇದೀಗ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅವರನ್ನೂ ತಪಾಸಣೆ ಮಾಡಿ ರಾಜ್ಯ ಸರ್ಕಾರ ನಮ್ಮ ರಾಜ್ಯದ ವಲಸೆ ಕಾರ್ಮಿಕರಿಗೆ ರಾಜ್ಯದೊಳಗೆ ತಮ್ಮ ಗ್ರಾಮಗಳಿಗೆ ಹೋಗಲು ಅನುಮತಿ ನೀಡುತ್ತಿದೆ. ಇದರಂತೆ ಹಲವು ಜಿಲ್ಲೆಗಳಲ್ಲಿನ ರಾಜ್ಯದ ವಲಸೆ ಕಾರ್ಮಿಕರು ಜಿಲ್ಲಾಧಿಕಾರಿಗಳ ಅನುಮತಿ ಪಡೆದು, ಮಾರ್ಗಸೂಚಿಯನ್ವಯ ಅವರ ಗ್ರಾಮಗಳಿಗೆ ಬಸ್​ಗಳ ಮೂಲಕ ಕಳುಹಿಸಿಕೊಡಲಾಗುತ್ತಿದೆ.

ಎಲ್ಲಿ ಎಷ್ಟು ರಾಜ್ಯದ ವಲಸೆ ಕಾರ್ಮಿಕರು?:

Migrant workers in the state evacuate to the villages
ವಲಸೆ‌ ಕಾರ್ಮಿಕರ ಸ್ಥಳಾಂತರ: ರಾಜ್ಯದ ವಲಸೆ ಕಾರ್ಮಿಕರು ಎಷ್ಟು

ಈವರೆಗಿನ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ನಾನಾ ಜಿಲ್ಲೆಗಳಲ್ಲಿರುವ ರಾಜ್ಯದ ವಲಸೆ ಕಾರ್ಮಿಕರು ಸುಮಾರು 5,382 ಮಂದಿ. ಈ ಪೈಕಿ 2,762 ಕಾರ್ಮಿಕರು ಬೆಂಗಳೂರಿನಲ್ಲಿದ್ದರೆ, ಮೈಸೂರಿನಲ್ಲಿ 2,000, ಮಂಗಳೂರು 224 ಹಾಗೂ 99 ಕಾರ್ಮಿಕರು ಬೆಂ.ಗ್ರಾಮಾಂತರದಲ್ಲಿ ಇದ್ದಾರೆ.

ರಾಜ್ಯದ ವಲಸೆ‌ ಕಾರ್ಮಿಕರ ಸ್ಥಳಾಂತರ

ಇನ್ನು ಭಟ್ಕಳದಲ್ಲಿ 40 ಮಂದಿ, ಬೆಳಗಾವಿಯಲ್ಲಿ 41, ಬಳ್ಳಾರಿ 14, ವಿಜಯಪುರ 14, ಚಾಮರಾಜನಗರ 35, ಚಿಕ್ಕಬಳ್ಳಾಪುರ 20, ಧಾರವಾಡ 21, ರಾಯಚೂರು 22, ರಾಮನಗರ 8, ಶಿವಮೊಗ್ಗ 21, ತುಮಕೂರು 32, ಯಾದಗಿರಿ 8 ಮಂದಿ ರಾಜ್ಯದ ಕಾರ್ಮಿಕರನ್ನು ಗುರುತಿಸಲಾಗಿದೆ.

ಬಸ್ ಮೂಲಕ ಸ್ಥಳಾಂತರ:

ಆಯಾ ಜಿಲ್ಲಾಡಳಿತ ರಾಜ್ಯದ ವಲಸೆ ಕಾರ್ಮಿಕರ ವೈದ್ಯಕೀಯ ತಪಾಸಣೆ ಮಾಡಿ ಅವರ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ.

ಕೆಎಸ್ಆರ್​ಟಿಸಿ ಬಸ್ ಮೂಲಕ 40% ಮೀರದಂತೆ ಮಾಸ್ಕ್, ಸ್ಯಾನಿಟೈಸರ್ ಬಳಸಿ ಜಿಲ್ಲಾಡಳಿತ ಕಾರ್ಮಿಕರನ್ನು ಕಳುಹಿಸಿಕೊಡುತ್ತಿದೆ. ಆಯಾ ತಾಲೂಕು ಕಚೇರಿಗಳಲ್ಲಿ ಹೋಗಲು ಇಚ್ಛಿಸುವ ಕಾರ್ಮಿಕರ ವಿವರ ಪಡೆದು, ತಪಾಸಣೆ ಮಾಡಿ ಕಳುಹಿಸಿಕೊಡಲಾಗುತ್ತಿದೆ. ಅದರಂತೆ ಬೆಂಗಳೂರು ನಗರದಿಂದ ಈವರೆಗೆ ಸುಮಾರು 60 ರಾಜ್ಯದ ವಲಸೆ ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕಳುಹಿಸಿಕೊಡಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.

ಹೊರ ರಾಜ್ಯದ ವಲಸೆ ಕಾರ್ಮಿಕರು ಎಷ್ಟು?:

ರಾಜ್ಯದಲ್ಲಿ ಈವರೆಗೆ ಗುರಿತಿಸಲ್ಪಟ್ಟಂತೆ ವಿವಿಧ ರಾಜ್ಯಗಳ ಸುಮಾರು 1,17,730 ಕಾರ್ಮಿಕರು ರಾಜ್ಯದ ವಿವಿಧೆಡೆ ವಾಸವಾಗಿದ್ದಾರೆ. ಈ ಪೈಕಿ 92,559 ಹೊರ ರಾಜ್ಯಗಳ ವಲಸೆ ಕಾರ್ಮಿಕರು ಬೆಂಗಳೂರು ನಗರದಲ್ಲೇ ಇದ್ದಾರೆ.

ಈ ಪೈಕಿ ಒರಿಸ್ಸಾದವರು ಅತಿ ಹೆಚ್ಚು ವಲಸೆ ಕಾರ್ಮಿಕರು ಅಂದರೆ 52,993 ಮಂದಿ ರಾಜ್ಯದಲ್ಲಿದ್ದಾರೆ. ಬಳಿಕದ ಸ್ಥಾನ ಬಿಹಾರರದ ಕಾರ್ಮಿಕರು. 37,446 ಬಿಹಾರಿ ಕಾರ್ಮಿಕರಿದ್ದಾರೆ. ಅದರಲ್ಲಿ ಬೆಂಗಳೂರಲ್ಲೇ 33,691 ಬಿಹಾರಿ ಕಾರ್ಮಿಕರು ವಾಸವಿದ್ದಾರೆ.

ಜಾರ್ಖಂಡ್​ನಿಂದ 17,942 ಕಾರ್ಮಿಕರು ರಾಜ್ಯದ ವಿವಿಧೆಡೆ ವಾಸವಾಗಿರುವುದು ಪತ್ತೆ ಮಾಡಲಾಗಿದೆ. ಇನ್ನು ಬಾಂಗ್ಲಾದೇಶ ಕಾರ್ಮಿಕರು 833 ಇದ್ದು, ಎಲ್ಲರೂ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಉಳಿದಂತೆ ಮಧ್ಯಪ್ರದೇಶ 2583, ಉತ್ತರ ಪ್ರದೇಶದ 1570, ಪಶ್ಚಿಮ ಬಂಗಾಳದ 2310 ಕಾರ್ನಿಕರನ್ನು ಗುರುತಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.