ETV Bharat / state

ಮೇಯರ್ ಉಪಮೇಯರ್ ಚುನಾವಣೆ ಮುಂದೂಡಿಕೆಗೆ ಬಿಎಸ್​ವೈ ಪ್ಲಾನ್​.. ಕಾರಣ?

author img

By

Published : Sep 30, 2019, 1:13 PM IST

ಕೋರ್ಟ್​​​ನಲ್ಲಿ ಎಂಟು ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆ‌ ನೀಡಿದ್ದರಿಂದ ನಾಲ್ಕು ಸ್ಥಾಯಿ ಸಮಿತಿ ಹಾಗೂ ಮೇಯರ್ ಚುನಾವಣೆ ನಡೆಸಲಾಗುತ್ತೆ ಎಂದಿದ್ದರು. ಆದರೆ, ನಾಲ್ಕು ಸಮಿತಿಯಲ್ಲಿ ಆರೋಗ್ಯ, ಮುಜಾಹಿದ್ ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿಯ ಇಸ್ತಿಯಾಕ್, ಚುನಾವಣೆ ತಡೆಕೋರಿ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಮೇಯರ್ ಉಪಮೇಯರ್ ಚುನಾವಣೆ

ಬೆಂಗಳೂರು : ನಾಳೆಗೆ ನಿಗದಿಯಾಗಿದ್ದ ಮೇಯರ್ ಉಪಮೇಯರ್ ಚುನಾವಣೆ ಮುಂದೂಡಿಕೆ ಮಾಡಲು ರಾಜ್ಯ ಸರ್ಕಾರ ಕಸರತ್ತು ಆರಂಭಿಸಿದೆ.

ಬಿಜೆಪಿಯಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಅಂತಿಮವಾಗದ ಹಿನ್ನೆಲೆಯಲ್ಲಿ ಮತ್ತು ಸ್ಥಾಯಿ ಸಮಿತಿ ಹಾಗೂ ಮೇಯರ್ ಚುನಾವಣೆ ಜೊತೆಯಾಗಿ ನಡೆಸುವ ಕುರಿತು ಗೊಂದಲ ಇರುವುದರಿಂದ ಸಿಎಂ ಯಡಿಯೂರಪ್ಪ, ಚುನಾವಣೆ ಮುಂದೂಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯಿಂದ ಪ್ರಾದೇಶಿಕ ಚುನಾವಣಾ ಆಯೋಗಕ್ಕೆ ಸೂಚನೆ ಹೋಗಲಿದೆ.

ಆದರೆ, ಈ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತ ತಿಳಿಸಿದ್ದಾರೆ. ಸಕಾರಣವಿಲ್ಲದೇ ಚುನಾವಣೆ ಮುಂದೂಡಿಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಬಿಬಿಎಂಪಿ ಕೌನ್ಸಿಲ್ ಸಭಾಂಗಣದಲ್ಲಿ ಸಿದ್ಧತೆ ಭರದಿಂದ ಸಾಗಿದೆ.

ಮೇಯರ್ ಉಪಮೇಯರ್ ಚುನಾವಣೆ ಮುಂದೂಡಿಕೆ

ಮೇಯರ್ ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದ್ರೆ, ಕೋರ್ಟ್​​ನಲ್ಲಿ ಎಂಟು ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆ‌ ನೀಡಿದ್ದರಿಂದ ನಾಲ್ಕು ಸ್ಥಾಯಿ ಸಮಿತಿ ಹಾಗೂ ಮೇಯರ್ ಚುನಾವಣೆ ನಡೆಸಲಾಗುತ್ತೆ ಎಂದಿದ್ದರು. ಆದರೆ, ನಾಲ್ಕು ಸಮಿತಿಯಲ್ಲಿ ಆರೋಗ್ಯ, ಮುಜಾಹಿದ್ ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿಯ ಇಸ್ತಿಯಾಕ್, ಚುನಾವಣೆ ತಡೆಕೋರಿ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಹೀಗಾಗಿ ಒಂದು ವೇಳೆ ನಾಳೆ ಚುನಾವಣೆ ನಡೆದರೆ, ಮೇಯರ್- ಉಪಮೇಯರ್, ತೆರಿಗೆ, ಆರ್ಥಿಕ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಬಹುದು. ಚುನಾವಣೆ ಮುಂದೂಡುವ ಕುರಿತು ಸಿಎಂ ಸೂಚನೆ ಹಿನ್ನೆಲೆ ನಗರಾಭಿವೃದ್ಧಿ ಇಲಾಖೆ ಕಾನೂನಿನ ಸಾಧ್ಯತೆಗಳನ್ನು ಹುಡುಕುತ್ತಿದೆ.

Intro:ಮೇಯರ್ ಚುನಾವಣೆ ಮುಂದೂಡಿಕೆಗೆ ಕಸರತ್ತು- ಕಾನೂನು ಸಾಧ್ಯತೆಯ ಹುಡುಕಾಟ

ಬೆಂಗಳೂರು- ನಾಳೆಗೆ ನಿಗದಿಯಾಗಿದ್ದ ಮೇಯರ್ -ಉಪಮೇಯರ್ ಚುನಾವಣೆ ಮುಂದೂಡಿಕೆ ಮಾಡಲು ಕಸರತ್ತು ಆರಂಭವಾಗಿದೆ. ಇನ್ನೂ ಬಿಜೆಪಿಯಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಅಂತಿಮವಾಗದ ಹಿನ್ನಲೆ, ಅಲ್ಲದೆ ಸ್ಥಾಯಿ ಸಮಿತಿ ಹಾಗೂ ಮೇಯರ್ ಚುನಾವಣೆ ಜೊತೆಯಾಗಿ ನಡೆಸುವ ಕುರಿತು ಗೊಂದಲ ಇರುವುದರಿಂದ ಸಿಎಂ ಯಡಿಯೂರಪ್ಪ, ಚುನಾವಣೆ ಮುಂದೂಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯಿಂದ ಪ್ರಾದೇಶಿಕ ಚುನಾವಣಾ ಆಯೋಗಕ್ಕೆ ಸೂಚನೆ ಹೋಗಲಿದೆ.
ಆದರೆ ಈ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತ ತಿಳಿಸಿದ್ದಾರೆ. ಸಕಾರಣವಿಲ್ಲದೆ ಚುನಾವಣೆ ಮುಂದೂಡಿಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಬಿಬಿಎಂಪಿಯಲ್ಲೂ ಚುನಾವಣೆ ನಡೆಸುವ ಕೌನ್ಸಿಲ್ ಸಭಾಂಗಣದಲ್ಲಿ ಸಿದ್ಧತೆ ಭರದಿಂದ ಸಾಗಿದೆ.
ನಾಳೆ ಮೇಯರ್ ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದ್ರೆ ಕೋರ್ಟ್ ನಲ್ಲಿ ಎಂಟು ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆ‌ ನೀಡಿದ್ದರಿಂದ ನಾಲ್ಕು ಸ್ಥಾಯಿ ಸಮಿತಿ ಹಾಗೂ ಮೇಯರ್ ಚುನಾವಣೆ ನಡೆಸಲಾಗುತ್ತೆ ಎಂದಿದ್ದರು.
ಆದ್ರೀಗ ಉಳಿದ ನಾಲ್ಕು ಸ್ಥಾಯಿ‌ಸಮಿತಿಯಲ್ಲೂ, ಆರೋಗ್ಯ ಸ್ಥಾಯಿ ಸಮಿತಿಯ ಮುಜಾಹಿದ್ ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿಯ ಇಸ್ತಿಯಾಕ್ ತಡೆಕೋರಿ ಇಂದು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಹೀಗಾಗಿ ಒಂದು ವೇಳೆ ನಾಳೆ ಚುನಾವಣೆ ನಡೆದರೆ, ಮೇಯರ್ -ಉಪಮೇಯರ್ , ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಬಹುದು.
ಚುನಾವಣೆ ಮುಂದೂಡುವ ಕುರಿತು ಸಿಎಂ ಸೂಚನೆ ಹಿನ್ನಲೆ ನಗರಾಭಿವೃದ್ಧಿ ಇಲಾಖೆ ಕಾನೂನಿನ ಸಾಧ್ಯತೆಗಳನ್ನು ಹುಡುಕುತ್ತಿದೆ.
ಸೌಮ್ಯಶ್ರೀ
Kn_bng_03_election_postpone_7202707Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.