ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗವನ್ನು ಫೈನಲ್ ಮಾಡಲಾಗಿದೆ.
ಫೇಸ್ 2ಬಿ ಯಲ್ಲಿ ಮಾರ್ಗ ನಿರ್ಮಾಣಕ್ಕೆ ಫೈನಲ್ ಸ್ಕೆಚ್ ರೆಡಿಯಾಗಿದ್ದು, ಕೆ.ಆರ್ ಪುರಂನಿಂದ ವಿಮಾನ ನಿಲ್ದಾಣದವರೆಗೆ ಅಂತಿಮ ಮಾರ್ಗವನ್ನ ಬಿಎಂಆರ್ಸಿಎಲ್ ಗುರುತಿಸಿದೆ. ಕೆ.ಆರ್ ಪುರಂನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 36.5 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಒಟ್ಟು 17 ಮೆಟ್ರೋ ನಿಲ್ದಾಣಗಳು ಬರಲಿವೆ.
ಇನ್ನು ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿದ್ದು, ಈ ಮೂಲಕ ಹೆಬ್ಬಾಳ ಬಳಿ ಆಗುವ ವಿಪರೀತ ಟ್ರಾಫಿಕ್ ಜಾಮ್ಗೆ ಕಡಿವಾಣ ಬೀಳಲಿದೆ. ಕೆ.ಆರ್ ಪುರ, ಕಸ್ತೂರಿ ನಗರ, ಚನ್ನಸಂದ್ರ, ಹೊರಮಾವು, ಬಾಬುಸಾಬ್ ಪಾಳ್ಯ, ಕಲ್ಯಾಣ ನಗರ, ಹೆಚ್.ಬಿ.ಆರ್ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು, ಕೋಗಿಲೆ ಕ್ರಾಸ್, ಪೆರಿಫೆರಲ್ ರಿಂಗ್ ರೋಡ್, ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ 3 ನಿಲ್ದಾಣ ಇರಲಿದೆ.
ಫೇಸ್ 1 ನಲ್ಲಿ ನಿರ್ಮಾಣವಾಗಿರೋ ಮಾರ್ಗಕ್ಕೆ ಈ ಹೊಸ ಮಾರ್ಗ ಸಂಪರ್ಕಿಸಲಿದ್ದು, ಶೀಘ್ರದಲ್ಲೇ ಕಾಮಗಾರಿಗೆ ವೇಗ ನೀಡಲು ಬಿಎಂಆರ್ಸಿಎಲ್ ನಿರ್ಧಾರಿಸಿದೆ.