ETV Bharat / state

ಮೇಕೆದಾಟು ತಿಕ್ಕಾಟ, ಬಿಟ್ ಕಾಯಿನ್, ಮೊಹಮ್ಮದ್ ನಲಪಾಡ್ ವಿಚಾರಕ್ಕೆ ಬಿಸಿ ಬಿಸಿ ಚರ್ಚೆ: ವಿಧಾನಸಭೆಯಲ್ಲಿ ವಾಗ್ವಾದ! - ಬಿಟ್ ಕಾಯಿನ್, ಮೊಹಮ್ಮದ್ ನಲಪಾಡ್ ವಿಚಾರ ಕುರಿತು ಚರ್ಚೆ

ಕೋವಿಡ್ ನಿಯಂತ್ರಣ ವಿಚಾರದಲ್ಲಿ ಮೋದಿಯನ್ನು ಆಡಳಿತ ಪಕ್ಷದ ಸದಸ್ಯರು ಸಮರ್ಥಿಸಿಕೊಂಡರು. ದೀಪ ಹಚ್ಚಿದರೆ, ಜಾಗಟೆ ಬಾರಿಸಿದರೆ ಕೊರೊನಾ ಹೋಗಲ್ಲವೆಂಬ ವಿಚಾರ ಪ್ರಧಾನಿ ಮೋದಿಗೂ ಗೊತ್ತಿದೆ. ಆದರೆ, ಎಲ್ಲರನ್ನೂ ಒಗ್ಗೂಡಿಸಲು ಮೋದಿ ದೀಪ ಹಚ್ಚಿ ಜಾಗಟೆ ಬಾರಿಸುವಂತೆ ಸಂದೇಶ ನೀಡಿದ್ದರು. ಆದರೆ, ಇಷ್ಟೊಂದು ಸಂಖ್ಯೆಯಲ್ಲಿ ಉಚಿತ ಲಸಿಕೆ ಕೊಟ್ಟಿರುವುದು ಸಾಧನೆ ಅಲ್ವಾ? ಎಂದು ಶಾಸಕ ಎನ್. ಮಹೇಶ್ ಪ್ರಶ್ನಿಸಿದರು.

assembly
ವಿಧಾನಸಭೆ
author img

By

Published : Feb 15, 2022, 9:17 PM IST

ಬೆಂಗಳೂರು: ಮೇಕೆದಾಟು ಯೋಜನೆ ತಿಕ್ಕಾಟ, ಬಿಟ್ ಕಾಯಿನ್ ಹಾಗೂ ಮೊಹಮ್ಮದ್ ನಲಪಾಡ್ ವಿಚಾರ ಪ್ರಸ್ತಾಪದ ಹಿನ್ನೆಲೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪ ಮತ್ತು ಮಾತಿನ ವಾಗ್ವಾದ ನಡೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಸದಸ್ಯ ಪಿ. ರಾಜೀವ್ ಅವರು, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಪಾದಯಾತ್ರೆ ಮಾಡಿರುವ ಕಾಂಗ್ರೆಸ್ ಕೈಯಲ್ಲೇ 5 ವರ್ಷಗಳ ಅಧಿಕಾರ ಇತ್ತು. ಅವರು ಏನು ಮಾಡಿದರು?. ಆಗ ಮೇಕೆದಾಟು ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಅಂತಾರಾಜ್ಯ ಯೋಜನೆ ಆರಂಭಿಸಲು 4 ಹಂತ ಇರುತ್ತದೆ. ಡಿಪಿಆರ್, ಅರಣ್ಯ ನಾಶದ ಅಂದಾಜು ಮತ್ತು ಬೇರೆಡೆ ಸಸ್ಯಗಳನ್ನು ಬೆಳೆಸಲು ಭೂಮಿ ಗುರುತಿಸುವುದು. ಪರಿಸರ ಇಲಾಖೆಯ ಅನುಮೋದನೆ ಮತ್ತು ಕೇಂದ್ರ ಜಲ ಪ್ರಾಧಿಕಾರದ ಅನುಮೋದನೆ ಎಂಬ ಹಲವು ಹಂತಗಳನ್ನು ದಾಟಬೇಕು. ಕಾಂಗ್ರೆಸ್ ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಏನೆಲ್ಲಾ ಕೆಲಸಗಳ ಆಗಿದ್ದವು ಎಂದು ಪ್ರಶ್ನಿಸಿದ ಅವರು, ಮೈತ್ರಿ ಸರ್ಕಾರ ಬರುವವರೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಕೆಯಾಗಿರಲಿಲ್ಲ ಎಂದು ಹೇಳಿದರು.

ಪ್ರತಿಪಕ್ಷದ ಸದಸ್ಯರ ಆಕ್ಷೇಪ : ರಾಜೀವ್ ಅವರ ಮಾತಿಗೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಡಿಪಿಆರ್ ಆಗಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಪರಿಷ್ಕರಿಸಲಾಯಿತು. ಕೇಂದ್ರ ಸರ್ಕಾರ ಈಗ ಅನುಮತಿ ಕೊಡಬೇಕು. ಮೇಕೆದಾಟು ಯೋಜನೆಗೆ ಬೆಂಬಲಿಸಬೇಕು ಎಂದು ಖಾದರ್ ಒತ್ತಾಯಿಸಿದರು.

ಮಾತಿನ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ರಂಗನಾಥ್ ಎರಡೂ ಕಡೆ ನಿಮ್ಮದೇ ಬಿಜೆಪಿ ಸರ್ಕಾರ ಇದೆ. ಪರಿಸರ ಇಲಾಖೆಯ ಕ್ಲಿಯರೆನ್ಸ್ ತೆಗೆದುಕೊಳ್ಳಲು ಆಗಿಲ್ಲ. ಅನುಮೋದನೆ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದರು.

ಮುಂದುವರೆದು ಮಾತನಾಡಿದ ಶಾಸಕ ರಾಜೀವ್, ಮೇಕೆದಾಟು ಯೋಜನೆಗೆ ಬಳಕೆಯಾಗುವ ಭೂಮಿಗೆ ಪರ್ಯಾಯವಾಗಿ ನೀಡಲು 5.5 ಲಕ್ಷ ಭೂಮಿ ಗುರುತಿಸಲಾಗಿದೆ. 6-7 ತಿಂಗಳಲ್ಲೇ ಈ ಸಾಧನೆ ಮಾಡಲಾಗಿದೆ. ನ್ಯಾಯಾಂಗ ಬಿಕ್ಕಟ್ಟಿನ ನಡುವೆಯೂ ಇಂತಹ ಸಾಧನೆಯಾಗಿದೆ.

ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಕೋವಿಡ್ ಉಲ್ಬಣವಾದ ಸಂದರ್ಭದಲ್ಲೇ ಮಾಡಿದ್ದರು. ಐದು ವರ್ಷ ಅವರದೇ ಸರ್ಕಾರವಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಜಲಸಂಪನ್ಮೂಲ ಸಚಿವರಾಗಿದ್ದರು. ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ವಿಸ್ತೃತ ಯೋಜನೆ ಬಗ್ಗೆ ಸ್ಪಷ್ಟನೆ ಕೋರಿತ್ತು. ಪರಿಷ್ಕೃತ ಯೋಜನಾ ವರದಿ ಸಿದ್ಧವಾಗಲು ಹೆಚ್. ಡಿ. ಕುಮಾರಸ್ವಾಮಿ ಸರ್ಕಾರ ಬರಬೇಕಾಯಿತು ಎಂದು ಕುಟುಕಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಒಂದು ರಾಷ್ಟ್ರ ಒಂದು ಚುನಾವಣೆ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್ ಪಾಲ್ಗೊಳ್ಳಬೇಕಿತ್ತು. ಆದರೆ, ಪಾಲ್ಗೊಳ್ಳಲಿಲ್ಲ. ರಾಜ್ಯ ಹಾಗೂ ಕೇಂದ್ರ ಎಂಬ ಎರಡು ಚುನಾವಣಾ ಆಯೋಗದ ಬಗ್ಗೆ ಗೊಂದಲವಿದೆ. ಪದೇ ಪದೆ ಚುನಾವಣೆ ಮಾಡುವುದು ಅಭಿವೃದ್ಧಿಗೆ ಮಾತ್ರ ಹಿನ್ನಡೆಯಾಗುತ್ತದೆ. ಒಂದು ವರ್ಷ ಚುನಾವಣೆ ಮಾಡಿ 4 ವರ್ಷ ಅಭಿವೃದ್ಧಿಗೆ ಮೀಸಲಿಟ್ಟರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆಯಲ್ಲಿ ಮುಳುಗಡೆಯಾಗುವ ಪ್ರದೇಶಗಳಲ್ಲಿ ಪುನರ್ವಸತಿಗೆ 2,500 ಕೋಟಿ ರೂ. ಒದಗಿಸಲಾಗಿದೆ. ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಎಂದು ಪಾದಯಾತ್ರೆ ಮಾಡಿ ಎಷ್ಟು ಹಣ ಕೊಟ್ಟರು ಎಂದು ಪ್ರಶ್ನಿಸಿದರು.

ಯಾರ್ಯಾರನ್ನೋ ಒಲಿಸಲು ಯೋಜನೆ ಘೋಷಣೆ ಮಾಡಲಾಗುತ್ತದೆ. ಆದರೆ, ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತ ವಿದ್ಯಾನಿಧಿ ಘೋಷಣೆ ಮಾಡಿದರೂ ಜಾತಿ ಮತ ನೋಡದೆ ರೈತ ಎಂದು ನೋಡಿದರು. ಇದು ರೈತಪರ ಕಾಳಜಿಯ ದ್ಯೋತಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಈ ಯೋಜನೆಯು ಪರಿಣಾಮಕಾರಿಯಾಗಿ ಜಾರಿಯಾಯಿತು. ಭ್ರಷ್ಟಾಚಾರ ತಪ್ಪಿಸಿ ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸಲು ಪ್ರಧಾನಿ ಮೋದಿ ಅವರೇ ಕಾರಣ ಎಂದರು.

ರಾಜೀವ್ ಮಾತಿಗೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದ ಶಾಸಕ ರಿಜ್ವಾನ್ ಅರ್ಷದ್ , ಯುಪಿಎ ಅವಧಿಯಲ್ಲಿ ಜಾರಿ ಮಾಡಿದ್ದ ಯೋಜನೆಯನ್ನು ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿತು ಎಂದು ತಿರುಗೇಟು ನೀಡಿದರು.

ಬಿಟ್ ಕಾಯಿನ್ ಪ್ರಸ್ತಾಪ : ಬಿಟ್​ ಕಾಯಿನ್ ವಿಚಾರದ ಪ್ರಸ್ತಾಪವಾಗಿ ಕಾಂಗ್ರೆಸ್ ಈ ವಿಚಾರದಲ್ಲಿ ಆರೋಪ ಮಾಡಿ ಹಿಟ್ ಆ್ಯಂಡ್ ರನ್ ಮಾಡಿತು ಎಂದು ರಾಜೀವ್ ಆರೋಪಿಸಿದರು.

ಶ್ರೀಕಿಯನ್ನು ಡ್ರಗ್ಸ್ ಕೇಸ್‌ನಲ್ಲಿ ವಶಕ್ಕೆ ಪಡೆದಾಗ ಚಾರ್ಟರ್ಡ್ ಫ್ಲೈಟ್‌ನಲ್ಲಿ ಓಡಾಡಿಸಿದ್ದರು ಎಂಬ ಮಾಹಿತಿ ಅವನೇ ಹೇಳಿದ್ದ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದರು. 2017ರಲ್ಲಿ ಯುಬಿ ಸಿಟಿಯಲ್ಲಿ ಶಾಸಕರ ಮಗ ಅರೆಸ್ಟ್ ಆದಾಗ ಶ್ರೀಕಿಯನ್ನು ಬಂಧಿಸಿದ್ದರೆ ಆಗುತ್ತಿತ್ತು ಎಂದು ಅವರು ವಿಶ್ಲೇಷಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅಂದು ನಾನು ಇದೇ ಮಾತು ಹೇಳಿದಾಗ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಅಂದು ಶಾಸಕರ ಮಗ ಅರೆಸ್ಟ್ ಆದಾಗ ಇನ್ನೊಬ್ಬ ಮಗ ಶ್ರೀಕಿ ಜೊತೆ ಚಾರ್ಟರ್ಡ್ ಫ್ಲೈಟ್​ನಲ್ಲಿ ಇದ್ದ ಎಂದು ರಾಜೀವ್ ಹೇಳಿದರು. ಆಗ ಯಾವ ಶಾಸಕರ ಮಗ ಎಂದು ಹೇಳಿ ಎಂದು ಮಳವಳ್ಳಿ ಶಾಸಕ ಡಾ.ಅನ್ನದಾನಿ ಆಗ್ರಹಿಸಿದರು.

ಮೊಹಮ್ಮದ್ ನಲಪಾಡ್ ಅರೆಸ್ಟ್ ಆಗಿದ್ದಾಗ ನಲಪಾಡ್ ಸಹೋದರ ಶ್ರೀಕಿ ಜೊತೆ ಫ್ಲೈಟ್​‌ನಲ್ಲಿ ಇದ್ದ ಎಂದು ರಾಜೀವ್ ಹೇಳಿದರು. ನಲಪಾಡ್ ಯಾವಾಗ ಅರೆಸ್ಟ್ ಆಗಿದ್ದ ಎಂದು ರಾಜೀವ್ ಮಾತಿಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು.

ನಲಪಾಡ್ ಅರೆಸ್ಟ್ ಆಗಿದ್ದರೋ ಇಲ್ಲವೋ ಎಂದು ಗೃಹ ಸಚಿವರು ಸ್ಪಷ್ಟೀಕರಣ ಕೊಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದರು. ಈ ವೇಳೆ ರಾಜೀವ್ ಬೆಂಬಲಕ್ಕೆ ಶಾಸಕ ರೇಣುಕಾಚಾರ್ಯ ನಿಂತರು. ಪೊಲೀಸರಿಂದ ತಪ್ಪಿಸಿಕೊಳ್ಳುವಷ್ಟು ಸಾಮರ್ಥ್ಯ ಇರುವ ಶ್ರೀಕಿಗೆ ಅಷ್ಟೊಂದು ಪ್ರಭಾವವಿದೆಯೇ? ನಲಪಾಡ್ ಅರೆಸ್ಟ್ ಮಾಡಿದಾಗ ಇವನನ್ನು ಅರೆಸ್ಟ್ ಮಾಡಲಿಲ್ಲ. ಅಂದು ಅರೆಸ್ಟ್ ಮಾಡಿದ್ರೆ ಅದರ ಹಿಂದೆ ಇರುವವರ ಜಾಲ ಸಿಗುತ್ತಿತ್ತು ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಜಮೀರ್ ಅಹ್ಮದ್, ನಿಮ್ಮದೇ ಸರ್ಕಾರ ಇತ್ತಲ್ಲಾ, ಯಾಕೆ ವಶಕ್ಕೆ ಪಡೆದಿಲ್ಲ ಎಂದು ಪ್ರಶ್ನಿಸಿದರು. ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲ ಕುಳಿತುಕೊಳ್ಳಿ ಎಂದು ಜಮೀರ್‌ ಅವರಿಗೆ ಸ್ಪೀಕರ್ ಕಾಗೇರಿ ಸೂಚಿಸಿದರು.

ಇದರ ಮಧ್ಯೆ ಮಾತನಾಡಿದ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮಾತನಾಡಿ, ದೀಪ ಹಚ್ವಿದರೆ ಕೋವಿಡ್ ಹೋಗುತ್ತಾ ಎಂದು ವಿಪಕ್ಷದವರು ಪ್ರಶ್ನಿಸಿದರು. ಕೋವಿಡ್ ನಿಯಂತ್ರಣ ವಿಚಾರದಲ್ಲಿ ಮೋದಿಯನ್ನು ಸಮರ್ಥಿಸಿಕೊಂಡರು.

ದೀಪ ಹಚ್ಚಿದರೆ, ಜಾಗಟೆ ಬಾರಿಸಿದರೆ ಕೊರೊನಾ ಹೋಗಲ್ಲವೆಂಬ ವಿಚಾರ ಪ್ರಧಾನಿ ಮೋದಿಗೂ ಗೊತ್ತಿದೆ. ಆದರೆ ಎಲ್ಲರನ್ನೂ ಒಗ್ಗೂಡಿಸಲು ಮೋದಿ ದೀಪ ಹಚ್ಚಿ ಜಾಗಟೆ ಬಾರಿಸುವಂತೆ ಸಂದೇಶ ನೀಡಿದ್ದರು. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಉಚಿತ ಲಸಿಕೆ ಕೊಟ್ಟಿರುವುದು ಸಾಧನೆ ಅಲ್ವಾ? ಎಂದು ಪ್ರಶ್ನಿಸಿದರು.

ಓದಿ: ನಾಡೋಜ ಕಣವಿ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ: SDM ಆಸ್ಪತ್ರೆಗೆ ಶಾಸಕ ಬೆಲ್ಲದ ಭೇಟಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.