ETV Bharat / state

ಕೆಪಿಸಿಸಿ ಕಚೇರಿಯಲ್ಲಿ ಮ್ಯಾರಥಾನ್ ಮೀಟಿಂಗ್‌ ; ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಗೆ ಗಂಭೀರ ಚರ್ಚೆ - bangalore latest news

ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. ಅವಧಿ ಮುಗಿದಿರುವವರನ್ನು ಬದಲಾವಣೆ ಮಾಡಲಾಗುತ್ತದೆ. ಎರಡು ಅವಧಿ ಪೂರ್ಣಗೊಳಿಸಿರುವವರ ಬದಲಾವಣೆ ಆಗಲಿದೆ. ಈ ಬಗ್ಗೆ ನಾವು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಬೇಕು. ನಂತರ ಮಾಹಿತಿ ಸಂಗ್ರಹಿಸಿ ಅಧ್ಯಕ್ಷರಿಗೆ ಕೊಡುತ್ತೇವೆ..

meeting at KPCC office today
ಕೆಪಿಸಿಸಿ ಕಚೇರಿಯಲ್ಲಿ ದೀರ್ಘಾವಧಿ ಸಭೆ
author img

By

Published : Jun 26, 2021, 5:25 PM IST

ಬೆಂಗಳೂರು : ಐವರು ಕಾರ್ಯಧ್ಯಕ್ಷರ ಜತೆ ಕೆಪಿಸಿಸಿ ಅಧ್ಯಕ್ಷರು ನಡೆಸಿದ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಸಂಬಂಧ ಗಂಭೀರ ಚರ್ಚೆ ನಡೆದಿದೆ. ಬೆಂಗಳೂರಿನ ಕುವೆಂಪು ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಎರಡು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ. ಪಕ್ಷ ಸಂಘಟನೆ ವಿಚಾರದಲ್ಲಿ ಅತ್ಯಂತ ಗಂಭೀರ ನಿಲುವು ಕೈಗೊಳ್ಳಬೇಕಿರುವ ಹಿನ್ನೆಲೆ ಈ ಸಭೆಯನ್ನು ಸುದೀರ್ಘವಾಗಿ ನಡೆಸಲಾಗಿದೆ.

ಯುವ ನಾಯಕತ್ವಕ್ಕೆ ಬೆಂಬಲ : ಜಿಲ್ಲಾ ಘಟಕದ ಅಧ್ಯಕ್ಷರುಗಳಲ್ಲಿಯೂ ದೀರ್ಘಾವಧಿಗೆ ಕಾರ್ಯ ನಿರ್ವಹಿಸಿದವರು, ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡವರು, ಬಹಳ ವಯಸ್ಸಾದವರು ಇದ್ದರೆ ಅಂತಹವರ ಸ್ಥಾನಕ್ಕೆ ಹೊಸಬರಿಗೆ ಅವಕಾಶ ಕಲ್ಪಿಸುವುದು. ಪಕ್ಷ ಸಂಘಟನೆಗೆ ಮುಡಿಪಾಗಿಸಿಕೊಂಡ ನಾಯಕರಿಗೆ ಅವಕಾಶ ನೀಡುವುದು. ಯುವ ನಾಯಕತ್ವಕ್ಕೆ ಬೆಂಬಲ ಕೊಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.

ಸಭೆಯ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾಹಿತಿ..

ಅಧ್ಯಕ್ಷರು ಮತ್ತು ಸದಸ್ಯರ ಬದಲಾವಣೆ ವಿಚಾರದಲ್ಲಿ ಕ್ಷೇತ್ರದ ಶಾಸಕರು ಹಾಗೂ ಸೋತಿರುವ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅಭಿಪ್ರಾಯ ಪಡೆದು ಮುಂದುವರೆಯುವಂತೆ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ. ಮೊನ್ನೆ ಬ್ಲಾಕ್ ಕಾಂಗ್ರೆಸ್ ನೇಮಕ ವಿಚಾರದಲ್ಲಿ ಡಿಕೆಶಿ ನಡೆಗೆ ಸಂತೋಷ್​ ಲಾಡ್ ಅಸಮಾಧಾನ ಹೊರ ಹಾಕಿದ್ರು. ಈ ಹಿನ್ನೆಲೆ ಶಾಸಕರ ಅಭಿಪ್ರಾಯ ಪಡೆಯಲು ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ಸಲಹೆ ನೀಡಿದ್ದಾರೆ.

ಬ್ಲಾಕ್ ಕಾಂಗ್ರೆಸ್​ನಲ್ಲಿ ಬದಲಾವಣೆ ಇಲ್ಲ : ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. ಅವಧಿ ಮುಗಿದಿರುವವರನ್ನು ಬದಲಾವಣೆ ಮಾಡಲಾಗುತ್ತದೆ. ಎರಡು ಅವಧಿ ಪೂರ್ಣಗೊಳಿಸಿರುವವರ ಬದಲಾವಣೆ ಆಗಲಿದೆ. ಈ ಬಗ್ಗೆ ನಾವು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಬೇಕು. ನಂತರ ಮಾಹಿತಿ ಸಂಗ್ರಹಿಸಿ ಅಧ್ಯಕ್ಷರಿಗೆ ಕೊಡುತ್ತೇವೆ. ಒಂದು ವಾರದಲ್ಲಿ ಮಾಹಿತಿ ಕೊಡುವಂತೆ ಅಧ್ಯಕ್ಷರು ಹೇಳಿದ್ದಾರೆ. ಬ್ಲಾಕ್ ಕಾಂಗ್ರೆಸ್​ನಲ್ಲಿ ಎಲ್ಲರ ಬದಲಾವಣೆಯಿಲ್ಲ. ಕೆಲವರನ್ನು ಬದಲಾವಣೆ ಮಾಡಬೇಕಿದೆ. ಹೊಸಬರು ಬರಬೇಕು, ಹಳಬರು ಇರಬೇಕು. ಶೀಘ್ರದಲ್ಲೇ ಇದರ ಬಗ್ಗೆ ನಿರ್ಧಾರ ಹೊರ ಬೀಳಲಿದೆ ಎಂದರು.

ರಮೇಶ್ ಜಾರಕಿಹೊಳಿ ಕಾಂಗ್ರೆಸ್​ಗೆ ವಾಪಸ್ ಬರುತ್ತಾರಾ? : ರಮೇಶ್ ಜಾರಕಿಹೊಳಿ ಕಾಂಗ್ರೆಸ್​ಗೆ ವಾಪಸ್ ಬರುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾವು ಅವರನ್ನು ಕರೆಯೋದೇ ಇಲ್ವಲ್ಲಾ. ಇನ್ನು, ಅವರು ಇಲ್ಲಿಗೆ ಬರೋ ಪ್ರಶ್ನೆಯೇ ಇಲ್ಲ. ನಾವು ಕರೆದರೆ ತಾನೇ ಅವರು ಬರೋಕೆ ಎಂದು ಹೇಳಿದರು.

ತಳಮಟ್ಟದಲ್ಲಿ ಬಲವರ್ಧನೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದೆ. ಕಾಂಗ್ರೆಸ್ ತಳಮಟ್ಟದಲ್ಲಿ ಬಲವರ್ಧನೆ ಮಾಡಲು ಚರ್ಚೆ ಆಗಿದೆ. ಕಾಂಗ್ರೆಸ್ ಜಿಲ್ಲಾ ಘಟಕ ಸದೃಢ ಮಾಡಲು ಸಭೆ ನಡೆಸಲಾಗಿದೆ ಎಂದರು. ಕೋವಿಡ್ ಸಮಯದಲ್ಲಿ ಯಾವ ರೀತಿ ಸ್ಪಂದಿಸಬೇಕು. ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗಲು ಕ್ರಮ ಕೈಗೊಳ್ಳುತ್ತೇವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆ. ಜನ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಜನರ ಗಮನಕ್ಕೆ ತರುವ ಬಗ್ಗೆ ಚರ್ಚೆ ಆಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಸದಸ್ಯರ ನೇಮಕ ವಿಚಾರದಲ್ಲಿ ಶಾಸಕರ, ಮಾಜಿ ಶಾಸಕರ ಅಭಿಪ್ರಾಯ ಪಡೆಯುತ್ತಿದ್ದೇವೆ. ಅಭಿಪ್ರಾಯ ಪಡೆದಿಲ್ಲ ಅನ್ನೋದು ಸುಳ್ಳು. ಎಲ್ಲರ ಅಭಿಪ್ರಾಯ ಪಡೆದು ನೇಮಕ ಮಾಡ್ತಿದ್ದೇವೆ ಎಂದರು.

ಸಂಜೆ ಸಭೆ : ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಇಂದು ಸಂಜೆ ವರ್ಚ್ಯುಯಲ್ ಮೀಟಿಂಗ್ ಕರೆದಿದ್ದಾರೆ. ಸಂಘಟನೆ ಬಗ್ಗೆ ಚರ್ಚೆ ಆಗಲಿದೆ. ಎಐಸಿಸಿ ಸೂಚನೆ ಅನುಷ್ಠಾನ ಮಾಡುವ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು. ಮುಂದಿನ ಸಿಎಂ ಯಾರು ಅನ್ನೋ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಅಪ್ರಸ್ತುತ ವಿಚಾರಗಳ ಬಗ್ಗೆ ಚರ್ಚೆ ಮಾಡಲ್ಲ. ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೆಲಸ ಮಾಡಿ, ಜನ ವಿರೋಧಿ ಬಿಜೆಪಿ ಸರ್ಕಾರ ತೆಗೆದು ಹಾಕಲು ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಖಾಸಗಿ ಬಂದರಿಗಾಗಿ ಮೀನುಗಾರರ ಮನೆ ನೆಲಸಮ.. ಬೀದಿಗೆ ಬಿದ್ದ ಕಡಲ ಮಕ್ಕಳ ಬದುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.