ಬೆಂಗಳೂರು: ಮೇ 22 ರಿಂದ 29ರವರೆಗೆ ರೈಲ್ವೇ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ್ದರೆ ಒಮ್ಮೆ ಖಾತ್ರಿ ಮಾಡಿಕೊಳ್ಳಿ. ಯಾಕಂದ್ರೆ ನೀವು ಸಂಚರಿಸಬೇಕಿರುವ ರೈಲು ಸೇವೆ ರದ್ದುಗೊಂಡಿರುವ, ಇಲ್ಲವೇ ಸಮಯ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ.
ತುಮಕೂರು, ಮಲ್ಲಸಂದ್ರ, ಗುಬ್ಬಿ, ಅರಸೀಕೆರೆ ನಡುವಿನಲ್ಲಿ 18 ಕಿಲೋಮೀಟರ್ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಕಾರಣ, ಮೇ 22 ರಿಂದ 29 ರವರೆಗೆ ರೈಲ್ವೇ ಸೇವೆಯಲ್ಲಿ ವ್ಯತ್ಯಯವಾಗಲಿದೆ. 10 ರೈಲುಗಳು ಸಂಚಾರ ರದ್ದು, 2 ರೈಲುಗಳ ಸಂಚಾರ ಭಾಗಶಃ ರದ್ದು,3 ರೈಲುಗಳ ಸಮಯ ಬದಲಾವಣೆ ಮತ್ತು 7 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ.
ಸಂಚಾರ ರದ್ದುಗೊಳ್ಳಲಿರುವ ರೈಲುಗಳು:
- ಮೇ.22 ರಿಂದ 28ರವರೆಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಬೇಕಿದ್ದ 56227 ಸಂಖ್ಯೆಯ ಪ್ಯಾಸೆಂಜರ್ ರೈಲು
- ಮೇ 23 ರಿಂದ 29 ರವರೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಬೇಕಿದ್ದ 56228 ಸಂಖ್ಯೆಯ ಪ್ಯಾಸೆಂಜರ್ ರೈಲು
- ಮೇ 23,24 ಮತ್ತು 29ರಂದಿನ ಹರಿಹರ-ಯಶವಂತಪುರ ನಡುವಿನ 16578 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು
- ಮೇ 22,23 ಮತ್ತು 28 ರಂದಿನ ಯಶವಂತಪುರ-ಹರಿಹರ ನಡುವಿನ 16577 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು
- ಮೇ 22 ರಿಂದ 28ರವರೆಗಿನ ಬೆಂಗಳೂರು-ತಾಳಗುಪ್ಪ ನಡುವಿನ 20651 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು
- ಮೇ23 ರಿಂದ 29ರವರೆಗಿನ ತಾಳಗುಪ್ಪು-ಬೆಂಗಳೂರು ನಡುವಿನ 20652 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು
- ಮೇ 25,26,27ರವರೆಗಿನ ಯಶವಂಪುರ ಶಿವಮೊಗ್ಗ ನಡುವಿನ 16579 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು
- ಮೇ 25,26,27ರವರೆಗಿನ ಶಿವಮೊಗ್ಗ-ಯಶವಂತಪುರ ನಡುವಿನ 16580 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು
- ಮೇ 23 ರಿಂದ 29ರವರೆಗಿನ ಬೆಂಗಳೂರು-ಚಿಕ್ಕಜಾಜೂರು-ಚಿತ್ರದುರ್ಗ ನಡುವಿನ 56519 ಸಂಖ್ಯೆಯ ಪ್ಯಾಸೆಂಜರ್ ರೈಲು
- ಮೇ 23 ರಿಂದ 29ರವರೆಗಿನ ಚಿತ್ರದುರ್ಗ-ಹರಿಹರ ನಡುವಿನ 56517 ಸಂಖ್ಯೆಯ ಪ್ಯಾಸೆಂಜರ್ ರೈಲು
ರೈಲು ಸೇವೆ ಭಾಗಶಃ ರದ್ದು:
- ಮೇ 23 ರಿಂದ 29 ರವರೆಗಿನ ಚಿಕ್ಕಮಗಳೂರು-ಬೆಂಗಳೂರು ನಡುವಿನ 56277 ಸಂಖ್ಯೆಯ ರೈಲು ಅರಸಿಕೆರೆ-ಯಶವಂತಪುರದವರೆಗೆ ರದ್ದು
- ಮೇ 23 ರಿಂದ 29ರವರೆಗಿನ ಬೆಂಗಳೂರು-ಚಿಕ್ಕಮಗಳೂರು ನಡುವಿನ 56278 ಸಂಖ್ಯೆಯ ರೈಲು ಯಶವಂತಪುರ-ಅರಸಿಕೆರೆ ರದ್ದುಗೊಳ್ಳಲಿದೆ
ರೈಲುಗಳ ಸಂಚಾರ ಸಮಯ ಬದಲಾವಣೆ
- ಮೇ 22ರಿಂದ 28ರವರೆಗಿನ ಬೆಂಗಳೂರು-ಧಾರವಾಡ ನಡುವಿನ 12725 ಸಂಖ್ಯೆಯ ರೈಲು 60 ನಿಮಿಷ ತಡವಾಗಿ ಸಂಚಾರ ಆರಂಭಿಸಲಿದೆ.
- ಮೇ 21 ರಿಂದ 29 ರವರೆಗೆ ಹುಬ್ಬಳ್ಳಿ-ಕೊಚುವೆಲಿ ನಡುವಿನ 12777 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು 2 ಗಂಟೆ ತಡವಾಗಿ ಸಂಚಾರ ಆರಂಭಿಸಲಿದೆ.
- ಮೇ 26 ರಂದು ಯಶವಂತಪುರ-ಟಾಟಾ ನಗರ ನಡುವಿನ 18112 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು 90 ನಿಮಿಷ ತಡವಾಗಿ ಸಂಚಾರ ಆರಂಭಿಸಲಿದೆ.
ಮಾರ್ಗ ಬದಲಾವಣೆ :
- ಮೇ 22 ರಂದು ಯಶವಂತಪುರ-ಚಂಡೀಗಡ ನಡುವಿನ 22685 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು ಯಶವಂತಪುರ,ನೆಲಮಂಗಲ,ಹಾಸನ,ಅರಸಿಕೆರೆ ಮಾರ್ಗದ ಮೂಲಕ ಸಂಚರಿಸಲಿದೆ.
- ಮೇ 23 ರಿಂದ 29ರವರೆಗಿನ ಬೆಂಗಳೂರು ಹುಬ್ಬಳ್ಳಿ ನಡುವಿನ 56515 ಸಂಖ್ಯೆಯ ಪ್ಯಾಸೆಂಜರ್ ರೈಲು ಯಶವಂತಪುರ, ನೆಲಮಂಗಲ, ಹಾಸನ ಮಾರ್ಗದ ಮೂಲಕ ಸಂಚರಿಸಲಿದೆ.
- ಮೇ 23 ರಿಂದ 29ರವರೆಗಿನ ಹುಬ್ಬಳ್ಳಿ-ಅಶೋಕಪುರಂ ನಡುವಿನ 17326 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ ಮಾರ್ಗದ ಮೂಲಕ ಸಂಚರಿಸಲಿದೆ.
- ಮೇ 23 ರಿಂದ 28ರವರೆಗಿನ ಮೈಸೂರು-ವಾರಣಾಸಿ ನಡುವಿನ 16229 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ ಮಾರ್ಗದ ಮೂಲಕ ಸಂಚರಿಸಲಿದೆ.
- ಮೇ 28 ರಂದು ವಾಸ್ಕೊ ಡ ಗಾಮದಿಂದ ಯಶವಂತಪುರ ನಡುವಿನ 17310 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು ಅರಸಿಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ.
- ಮೇ 28 ಮತ್ತು 29 ರಂದು ಧಾರವಾಡ-ಬೆಂಗಳೂರು ನಡುವಿನ 12726 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು ಅರಸಿಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ.
- ಮೇ 27ರ ಉದಯಪುರ-ಮೈಸೂರು ನಡುವಿನ 19667 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು ಅರಸಿಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚಾರ ನಡೆಸಲಿದೆ.