ಬೆಂಗಳೂರು : ದಿಲ್ಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಮಾಧ್ಯಮಗಳು ವಸ್ತುನಿಷ್ಠ ವರದಿಗಳನ್ನು ನೀಡಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಪ್ರತಿಭಟಿಸಿದವರನ್ನು ದೇಶದ್ರೋಹಿಗಳು ಹಾಗೂ ಕ್ರಿಮಿನಲ್‌ಗಳಂತೆ ಬಿಂಬಿಸುವ ಕೆಟ್ಟ ಪರಂಪರೆಯೊಂದನ್ನು ಬಿಜೆಪಿ ನಾಯಕರು ಹುಟ್ಟು ಹಾಕಿದ್ದಾರೆ. ಈ ಸಾಲಿಗೆ ಮಾಧ್ಯಮಗಳು ಸೇರಬಾರದು.
ಓದಿ:ಕರ್ನಾಟಕ ಬಂದ್.. ಬಿಬಿಎಂಪಿ ಕಚೇರಿ ಮುಂಭಾಗ ಪೊಲೀಸರ ಸರ್ಪಗಾವಲು
ಮಾಧ್ಯಮಗಳು ವಸ್ತುನಿಷ್ಠ ವರದಿಯ ಮೂಲಕ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕಿದೆ. ಕೆಲ ಮಾಧ್ಯಮಗಳು ದೆಹಲಿ ಚಲೋ ಪ್ರತಿಭಟನೆಯ ರೈತರನ್ನು 'ಖಲಿಸ್ತಾನಿಗಳು' ಹಾಗೂ 'ದೇಶದ್ರೋಹಿಗಳು' ಎಂದು ಬಿಂಬಿಸಿರುವುದು ರೈತ ಸಮೂದಾಯಕ್ಕೆ ಮಾಡಿದ ಅಪಮಾನ. ಸಾಕ್ಷ್ಯಾಧಾರಗಳಿಲ್ಲದೆ, ಇಂತಹ ಆರೋಪಗಳು ಒಂದು ರಚನಾತ್ಮಕ ಪ್ರತಿಭಟನೆಯ ಉದ್ದೇಶವನ್ನೇ ಹಾಳು ಮಾಡಲಿವೆ ಎಂದಿದ್ದಾರೆ.